Categories
ತೀರ್ಥಹಳ್ಳಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಭಾಗ್ಯ!

ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಭಾಗ್ಯ!

– ತೀರ್ಥಹಳ್ಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ, ಮೇಲ್ವಿಚಾರಕರಿಗೆ ಮೊಬೈಲ್ ಫೋನ್ ವಿತರಣೆ
– 89 ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಶಾಸಕ ಆರಗ ಜ್ಞಾನೇಂದ್ರರವರಿಂದ ವಿತರಣೆ

NAMMUR EXPRESS NEWS

ತೀರ್ಥಹಳ್ಳಿ : ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ಗಳ ಮೂಲಕವೇ ಸರಕಾರದ ಕೆಲಸಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಪೋಷಣ ಅಭಿಯಾನದಡಿಯಲ್ಲಿ ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ತೀರ್ಥಹಳ್ಳಿ ತಾಲೂಕಿನ 301 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ 11 ಮೇಲ್ವಿಚಾರಕರಿಗೆ ಸಾಂಕೇತಿಕವಾಗಿ ಮೊಬೈಲ್ ಫೋನ್ ಗಳನ್ನು ವಿತರಿಸುವ ಕಾರ್ಯಕ್ರಮ ತೀರ್ಥಹಳ್ಳಿಯ ಗ್ರಾಮೀಣ ಸೌಧದ ಶಾಸಕರ ಕಚೇರಿಯಲ್ಲಿ ನಡೆಯಿತು.
ಶಾಸಕ ಆರಗ ಫೋನ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೈಲಾ, ತಹಶೀಲ್ದಾರ್ ಜಕ್ಕಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ನಿರ್ದೇಶಕ ಪ್ರವೀಣ್, ಅಂಗನವಾಡಿ ಒಕ್ಕೂಟದ ಅಧ್ಯಕ್ಷೆ ಚಿಟ್ಟೆಬೈಲು ಗಾಯಿತ್ರಿ ಹಾಗೂ ಇಲಾಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೈಗಾರಿಕಾ & ವಾಣಿಜ್ಯ ಇಲಾಖೆ ವತಿಯಿಂದ 89 ಫಲಾನುಭವಿಗಳಿಗೆ ವಿವಿಧ ಸೌಲಭ್ಯ

ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರಿಂದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನೀಡುವ ಸೌಲಭ್ಯಗಳನ್ನು 89 ಫಲಾನುಭವಿಗಳಿಗೆ ವಿತರಿಸಿದರು. ಹೊಲಿಗೆ ಯಂತ್ರ 17 ಹಾಗೆ ಸಾಮಗ್ರಿ 21 ಕಲ್ಲು ಕುಣಿಕರ ಸಾಧನ ಉಪಕರಣ 10, ಬಡಗಿ ಕೆಲಸದ ಐದು, ವೆಲ್ಡಿಂಗ್ ಉಪಕರಣ ಐದು, ಕ್ಲೋರಿಕಾ ವೃತ್ತಿ ಉಪಕರಣ ಒಂದು, ಇಸ್ತ್ರಿ ಒಂದು ಹಾಗೂ ಟೈಲರಿಂಗ್ ಉಪಕರಣ 25 ಜನ ಸೇರಿದಂತೆ 89 ಫಲಾನುಭವಿಗಳಿಗೆ ವಿತರಿಸಿ ಅವರು ಮುಂದಿನ ಜೀವನ ಸುಖಕರವಾಗಿ ನಡೆಯಲಿ ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದರು, ಕೈಗಾರಿಕಾ ಇಲಾಖೆಯ ಆದಿತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.