ಮಂಗನ ಕಾಯಲೆ: ಚಿಕಿತ್ಸೆಗೆ ಜನರ ಹಿಂದೇಟು!
– ತೀರ್ಥಹಳ್ಳಿಯಲ್ಲಿ ಈ ವರ್ಷ 11 ಪ್ರಕರಣ ದಾಖಲು
– ಅರೋಗ್ಯ ಇಲಾಖೆ ಮನೆ ಬಾಗಿಲಿಗೆ ಹೋದರೂ ಚಿಕಿತ್ಸೆಗೆ ಬರಲ್ಲ!
– ಹೆಚ್ಚಾಗಬಹುದು ಮಂಗನ ಕಾಯಲೆ ಹುಷಾರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಹೆಚ್ಚುತ್ತಿರುವ ಮಂಗನ ಕಾಯಲೆ ಪ್ರಕರಣ ಈಗ ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ. ತೀರ್ಥಹಳ್ಳಿ ತಾಲೂಕು ಗುತ್ತಿಯಡೆಹಳ್ಳಿ ಭಾಗದ 53 ವರ್ಷದ ಮಹಿಳೆಗೆ ಮಂಗನ ಕಾಯಲೆ ಸೊಂಕಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಚ್ಚರಿ ಎಂದರೆ ಕಾಡಿನ ಅಂಚಿನಲ್ಲಿರುವ ಜನರು ಮಂಗನ ಕಾಯಲೆ ಲಕ್ಷಣಗಳಿದ್ದರೂ ಬೇಜವಾಬ್ದಾರಿ ತೋರುತ್ತಿರುವುದು ಅರೋಗ್ಯ ಇಲಾಖೆ ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ. ಮಂಗನ ಕಾಯಲೆಯಿಂದ ಬಳಲುತ್ತಿದ್ದ ಮಹಿಳೆ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ 2023ರಲ್ಲಿ ಇದು 11ನೇ ಪ್ರಕರಣವಾಗಿದ್ದು ತಾಲೂಕಿನಲ್ಲಿ ಅರಣ್ಯ ಹೆಚ್ಚು ಇರುವುದರಿಂದ ಮಂಗನ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಜಾಗೃತಿ ವಹಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ..!
ಮಂಗನ ಕಾಯಿಲೆ ಸೋಂಕು ಮತ್ತು ಲಕ್ಷಣಗಳಿದ್ದರೂ ಕೂಡ ಜನರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಅಥವಾ ಮಾಹಿತಿ ನೀಡುವುದರಲ್ಲಿ ಎಡವುದರಿಂದ ಇದು ಆರೋಗ್ಯ ಇಲಾಖೆಗೆ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಜನರು ಯಾರೇ ಚಿಕಿತ್ಸೆಗೆ ಮಂಗಳ ಕಾಯಿಲೆ ಸೊಂಕಿಗೆ ಒಳಗಾದಲ್ಲಿ ತಕ್ಷಣ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆಯನ್ನು ಪಡೆಯಬೇಕು. ಟಿಫಾ ತೈಲವನ್ನು ಗದ್ದೆಗಳಿಗೆ ಹಾಗೂ ತೋಟಗಳಿಗೆ ಕಾಡುಗಳಿಗೆ ಹಾಗೂ ವಿವಿಧ ಕೆಲಸಗಳಿಗೆ ಹೋಗುವಾಗ ಹಚ್ಚಬೇಕೆಂದು ಮನವಿ ಮಾಡಲಾಗಿದೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಮಂಗನ ಕಾಯಿಲೆ ಸೋಂಕಿಗೆ ಒಳಗಾದವರು ಪ್ರಾಥಮಿಕ ಹಂತದಲ್ಲಿ ಉತ್ತಮವಾಗಿರುತ್ತಾರೆ.
ಆದರೆ ಬಳಿಕ ಅದು ಗಂಭೀರ ಸ್ಥಿತಿಯನ್ನು ಪಡೆದುಕೊಳ್ಳುತ್ತದೆ. ಅದು ಜನತೆಗೆ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೋಂಕಿಗೆ ಒಳಗಾದ ಮನೆಗೆ ಹೋದರೂ ಕೂಡ ಚಿಕಿತ್ಸೆ ಪಡೆಯಲು ಬರುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಗ್ರಾಮಸ್ಥರು ಅರಣ್ಯದಲ್ಲಿರುವ ಜನರು ಈ ಬಗ್ಗೆ ಜಾಗೃತಿ ವಹಿಸಬೇಕು. ಇದು ಸಾಂಕ್ರಾಮಿಕ ರೋಗ ಅಲ್ಲದೆ ಇದ್ದರೂ ಸೋಂಕು ತಗಲಿದ ವ್ಯಕ್ತಿ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಹೀಗಾಗಿ ಜನತೆ ಈ ಬಗ್ಗೆ ಎಚ್ಚರ ವಹಿಸಿ ತಾವೇ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಆರೋಗ್ಯ ಇಲಾಖೆಗೆ ಸಹಕರಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.