20ಕ್ಕೂ ಹೆಚ್ಚಿನ ಬೈಕ್ ಬೆಂಕಿಗೆ!
– ಕಂಡಿಲ್ ಮೋಟಾರ್ಸ್ ಶೋ ರೂಂಗೆ ಬೆಂಕಿ!
– ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದಲ್ಲಿ ಘಟನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಕಂಡಿಲ್ ಮೋಟಾರ್ಸ್ ಶೋ ರೂಂಗೆ ಬೆಂಕಿ ಬಿದ್ದಿದ್ದು 20ಕ್ಕೂ ಹೆಚ್ಚು ಬೈಕ್ ಹಾನಿಯಾಗಿವೆ. 2ಕ್ಕೂ ಹೆಚ್ಚು ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಯುಪಿಎಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೈಕ್, ಕಂಪ್ಯೂಟರ್, ಕುರ್ಚಿ ಸೇರಿ ಕೋಟ್ಯಾಂತರ ರೂ ಹಾನಿಯಾಗಿದೆ. ಅಗ್ನಿ ಶಾಮಕ ದಳದ ಕಾರ್ಯಾಚರಣೆ ಬಳಿಕ ಈಗ ಬೆಂಕಿ ನಂದಿದೆ. ಆಗುಂಬೆ ಬಸ್ ನಿಲ್ದಾಣದಲ್ಲಿರುವ ಬೈಕ್ ಶೋ ರೂಮ್ ಖಂಡಿಲ್ ಮೋಟಾರ್ಸ್ ಗೆ ಭಾನುವಾರ ಮದ್ಯಾನ್ಹ ಏಕಾಏಕಿ ಬೆಂಕಿ ಹತ್ತಿಕೊಂಡು ಶೋ ರೂಮ್ ಒಳಗಿದ್ದ 20 ಕ್ಕೂ ಹೆಚ್ಚು ಹೊಸ ಬೈಕ್ ಗಳಿಗೆ ಡ್ಯಾಮೇಜ್ ಆಗಿದೆ ಹಾಗೂ ಎರಡು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಭಾನುವಾರವಾಗಿದ್ದರಿಂದ ಶೋ ರೂಮ್ ರಜೆ ಇತ್ತು. ಯುಪಿಎಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಒಳಗಿದ್ದ ಕಂಪ್ಯೂಟರ್, ಕುರ್ಚಿ ಸೇರಿ ಕೋಟ್ಯಾಂತರ ರೂ ಹಾನಿಯಾಗಿದೆ. ಸ್ಥಳದಲ್ಲಿ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.