ಪ್ರತಿಷ್ಠಿತ ಬಯೋಕಾನ್ ಕಂಪನಿಗೆ ತೀರ್ಥಹಳ್ಳಿಯ ಮುಖೇಶ್ ಸಿಎಫ್‌ಒ!
– ತೀರ್ಥಹಳ್ಳಿಯ ಮುಖೇಶ್ ಕಾಮತ್ ನೇಮಕ
– ತುಂಗಾ ಕಾಲೇಜಿನಲ್ಲಿ ಓದಿ ದೊಡ್ಡ ಹುದ್ದೆ ಅಲಂಕರಿಸಿದ ಸಾಧಕ
– ಶಾಸಕ ಆರಗ ಜ್ಞಾನೇಂದ್ರ ಸೇರಿ ಸ್ನೇಹಿತರ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ಖ್ಯಾತ ಉದ್ಯಮಿ ಕಿರಣ್ ಮಜುಮಾದರ್ ಒಡೆತನದ ಜಗದ್ವಿಖ್ಯಾತ ಬಯೋಕಾನ್ ಕಂಪನಿಯ ಸಿಎಫ್‌ಒ (ಚೀಫ್ ಫೈನಾನ್ಸ್ ಆಫೀಸರ್) ಮುಖ್ಯ ಹಣಕಾಸು ಅಧಿಕಾರಿಯಾಗಿ ತೀರ್ಥಹಳ್ಳಿಯ ಮುಖೇಶ್ ಕಾಮತ್ ನೇಮಕಗೊಂಡಿದ್ದಾರೆ.
ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಅನಂತಕಾಮತ್ ಮತ್ತು ಕಸ್ತೂರಿ ಕಾಮತ್ ಅವರ ಪುತ್ರರಾದ ಮುಖೇಶ್ ತಮ್ಮ ವಿದ್ಯಾಭ್ಯಾಸವನ್ನು ತೀರ್ಥಹಳ್ಳಿಯ ಸೈಂಟ್ ಮೇರೀಸ್, ಹೈಸ್ಕೂಲ್ ಶಿಕ್ಷಣವನ್ನು ಅನಂತ ಮೂರ್ತಿ ಪ್ರೌಢಶಾಲೆ, ಮತ್ತು ಕಾಲೇಜು ಶಿಕ್ಷಣವನ್ನು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪೂರೈಸಿ, ಚೆನೈನಲ್ಲಿ 1997ರಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಮುಗಿಸಿ 2004ರಲ್ಲಿ ಬಯೋಕಾನ್ ಕಂಪನಿಗೆ ಸೇರ್ಪಡೆಗೊಂಡಿದ್ದರು. ಬಯೋಕಾನ್ ಸಂಸ್ಥೆಯ ಆರ್ಥಿಕ ವಿಭಾಗದ ಅನೇಕ ಹುದ್ದೆಗಳನ್ನು ನಿಭಾಯಿಸಿ ಪ್ರಸ್ತುತ ಕಂಪನಿಯ ಹಣಕಾಸು ವಿಭಾಗದ ಅತ್ಯುನ್ನತ ಹುದ್ದೆಗೆ ನೇಮಕವಾಗಿದ್ದಾರೆ.
ಇನ್ಫೋಡೆಸ್ಕ್ ಮಣಿಪಾಲ್ ಲಿಮಿಟೆಡ್, ಯುನೈಟೆಡ್ ಬ್ರೇವರಿಸ್ ಲಿಮಿಟೆಡ್, ಟೆಕ್ಸರ್ ಇನ್ಫೋಟೆಕ್ ಲಿಮಿಟೆಡ್ ಮುಖೇಶ್ ಕೆಲಸ ನಿರ್ವಹಿಸಿದ ಇತರೆ ಕಂಪನಿಗಳು.
ಶಾಸಕ ಆರಗ ಅಭಿನಂದನೆ : ಬಯೋಕಾನ್ ಕಂಪನಿಯ ಹಣಕಾಸು ವಿಭಾಗದ ಅತ್ಯುನ್ನತ ಸ್ಥಾನ ಸಿಎಫ್‌ಓ ಸ್ಥಾನಕ್ಕೆ ನೇಮಕಗೊಂಡ ಶ್ರೀ ಮುಖೇಶ್ ಕಾಮತ್ ಅವರನ್ನು ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅಭಿನಂದಿಸಿದ್ದಾರೆ.
ಸ್ನೇಹಿತರ ಶುಭಾಶಯ: ತೀರ್ಥಹಳ್ಳಿಯಲ್ಲಿ ಅನೇಕ ಸ್ನೇಹಿತರನ್ನು ಹೊಂದಿರುವ ಮುಖೇಶ್ ಅವರಿಗೆ ಸ್ನೇಹಿತರು ಶುಭಾಶಯ ಸಲ್ಲಿಸಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಿಂದ ಶುಭಾಶಯಗಳು
