ಕೇಕ್ ಬೇರೆಯವರಿಗೆ ತಿನ್ನಿಸಿದಕ್ಕೆ ಕೊಲೆ!
– ಆಗುಂಬೆ ಬಳಿ ನಡೆದಿದ್ದ ಕೊಲೆ ರಹಸ್ಯ
– ಫೋನ್ ಕಾಲ್ ನೀಡಿತು ಸುಳಿವು..!
– ಪ್ರೀತಿ ಒಪ್ಪಲಿಲ್ಲ ಎಂದು ಕೊಲೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆಗುಂಬೆ ಬಳಿ ನಡೆದ ಕೊಲೆ ಈಗ ಆಕೆ ಬೇರೆ ಹುಡುಗನಿಗೆ ಕೇಕ್ ತಿನ್ನಿಸಿದ್ದಕ್ಕೆ ಎಂಬ ಅಂಶ ಬಯಲಾಗಿದೆ. ಕಳೆದ ಗುರುವಾರ ಪೂಜಾ ಎನ್ನುವ 24 ವರ್ಷದ ವಿವಾಹಿತೆ ಕಾಣೆಯಾಗಿದ್ದಾಳೆ ಎಂಬ ದೂರು ಆಗುಂಬೆ ಠಾಣೆಯಲ್ಲಿ ದಾಖಲಾಗಿತ್ತು. ಗಂಡನನ್ನು ಬಿಟ್ಟಿದ್ದು ತವರು ಮನೆಯಲ್ಲಿ ವಾಸವಿದ್ದ ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ಮನೆಯವರು ದೂರು ನೀಡಿದ್ದು.
ಈ ದೂರಿನ ಆಧಾರದ ಮೇಲೆ ಆಗುಂಬೆ ಪೊಲೀಸರು ತನಿಖೆ ಕೈಗೊಂಡು ಹಂತಕನನ್ನು ಅರೆಸ್ಟ್ ಮಾಡಿದ್ದಾರೆ.
ಅಚ್ಚರಿಯೆಂದರೆ ತಾನು ಇಷ್ಟ ಪಟ್ಟ ಹುಡುಗಿ ಬೇರೆ ಹುಡುಗನಿಗೆ ಕೇಕ್ ತಿನ್ನಿಸಿದಳು ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ.
ಫೋನ್ ಕಾಲ್ ನೀಡಿತು ಸುಳಿವು..!
ಕೊಲೆಯಾದ ಪೂಜಾ ಫೋನ್ ನಂಬರ್ ಸಿಡಿಆರ್ ಪೊಲೀಸಿನವರು ತೆಗೆಸುತ್ತಾರೆ ಅದರಲ್ಲಿ ಈಕೆಯ ಸಂಪರ್ಕದಲ್ಲಿದ್ದ ಸುಮಾರು 15 ರಿಂದ 20 ಜನರ ವಿಚಾರಣೆ ನಡೆಸುತ್ತಾರೆ. ಆದ್ರೆ ಎಲ್ಲೂ ಸುಳಿವು ಸಿಕ್ಕಿಲ್ಲ.ಕೊನೆಗೆ ಮಣಿಕಂಠನೇ ಪ್ರಮುಖವಾಗಿ ಆಕೆಯ ಸಂಪರ್ಕದಲ್ಲಿದ್ದ ಎಂಬುದು ಕಂಡು ಬಂದ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದಾಗ ಮಣಿಕಂಠ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆ ಮಾಡಿ ಆರಾಮಾಗಿದ್ದ ಮಣಿಕಂಠ..!
ಇತ್ತ ಮಣಿಕಂಠ ಆಕೆಯನ್ನು ಮುಗಿಸಲು ಪ್ಲಾನ್ ರೂಪಿಸಿದ್ದು ಅದು ಯಾವ ತರ ಇತ್ತೆಂದರೆ ಯಾವ ಸಿನಿಮಾಗೂ ಕಡಿಮೆ ಇಲ್ಲ ಇತ್ತ ಆಕೆಯ ಕೊಲೆನೂ ಆಗಬೇಕು ಅದು ನಾನು ಮಾಡಿದ್ದು ಎನ್ನುವುದು ಗೊತ್ತಾಗಬಾರದು ಹಾಗೆ ಮಣಿಕಂಠ ಉಪಾಯವನ್ನು ಹಾಕಿದ್ದ ಆತನ ಸಂಚು ವಿಫಲವಾಗಲಿಲ್ಲ. ಕಳೆದ ಶನಿವಾರ ಆಕೆಯನ್ನು ನಾಲೂರು ಕೊಳಿಗೆ ಗ್ರಾಮದ ಹೊಸಮನೆ ಕವಲೇ ಗುಡ್ಡ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಅಲ್ಲಿ ಆಕೆಯನ್ನು ಕೊಲೆ ಮಾಡಿ ಕೇವಲ 45 ನಿಮಿಷ ದಿಂದ ಒಂದು ಗಂಟೆ ಅವಧಿಯಲ್ಲಿ ಮರಳಿ ಬಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಸೋಮೇಶ್ವರಕ್ಕೆ ಹೋಗುತ್ತಾನೆ. ಎಲ್ಲೂ ಕೂಡ ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಸಂಚು ರೂಪಿಸಿರುತ್ತಾನೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತೀರ್ಥಹಳ್ಳಿ ಪೊಲೀಸರು ಎಸ್ ಪಿ ಮಿಥುನ್ ಕುಮಾರ್ ಅವರ ಆದೇಶದ ಮೇರೆಗೆ ಡಿವೈಎಸ್ಪಿ ಗಜಾನನ ವಾಮನ್ ಸುತಾರ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಆಗುಂಬೆ ಪಿಎಸ್ಐ ರಂಗನಾಥ್ ಒಳಗೊಂಡ ತಂಡ ತನಿಖೆ ಮಾಡಿ ಆರೋಪಿ ಪತ್ತೆಗೆ ಇಳಿಯುತ್ತಾರೆ.
ಅನುಮಾನ ಬಂದ ಎಲ್ಲರನ್ನು ಕರೆಸಿ, ತೀವ್ರ ವಿಚಾರಣೆ ನಡೆಸುತ್ತಾರೆ ಆದರೆ ಎಲ್ಲಿಯೂ ಸತ್ಯ ಹೊರ ಬರುವುದಿಲ್ಲ. ಮಣಿಕಂಠ ಕೂಡ ಪೊಲೀಸರಿಗೂ ಪ್ರಾರಂಭದಲ್ಲಿ ಚಳ್ಳೆಹಣ್ಣು ತಿನಿಸುತ್ತಾನೆ. ನಂತರ ಪೊಲೀಸರಿಗೆ ಮಣಿಕಂಠನ ಮೇಲೆ ಕೊಂಚ ಅನುಮಾನ ಶುರುವಾಗುತ್ತದೆ.
ಸಿಕ್ಕಿ ಬಿದ್ದಿದ್ದು ಹೇಗೆ…?
ಪೂಜಾನನ್ನು ಕೊಲೆ ಮಾಡಿದ ಮಣಿಕಂಠ ಕೊಲೆ ಮಾಡಿ ನಂತರ ಆಕೆಯ ಮೊಬೈಲ್ ನಿಂದ ಮೆಸೇಜ್ ಕಳಿಸಿಕೊಳ್ಳುತ್ತಾನೆ. ಹಾಗೆ ಕೊಲೆ ಮಾಡುವ ಮುಂಚೆ ಕೂಡ ಈತ ಒಂದು ಮೆಸೇಜ್ ಆಕೆಯ ಮೊಬೈಲ್ಗೆ ಹಾಕಿರುತ್ತಾನೆ ಆದರೆ ವಿಚಾರಣೆಯಲ್ಲಿ ನಿನ್ನ ಮೊಬೈಲ್ನಲ್ಲಿ ಚಾರ್ಜ್ ಖಾಲಿಯಾಗಿತ್ತಲ್ಲ ಎಲ್ಲಿ ಮಾಡಿಕೊಂಡೆ ಎಂದು ಕೇಳಿದಾಗ ನಾನು ಆಕಸ್ಮಿಕ ಹೋಟೆಲ್ ಹತ್ತಿರ ಮಾಡಿಕೊಂಡೆ ಎಂದು ಹೇಳುತ್ತಾನೆ. ಆದರೆ ಆತ ಸೋಮೇಶ್ವರಕ್ಕೆ ಹೋಗಿದ್ದ ಕಾರಿನಲ್ಲೇ ಚಾರ್ಜರ್ ಇತ್ತಲ್ಲ ಎಂದು ಪ್ರಶ್ನಿಸಿದಾಗ ಇಲ್ಲ ಎನ್ನುತ್ತಾನೆ. ಕಾರಿನ ಮಾಲೀಕನಿಗೆ ಪ್ರಶ್ನೆ ಮಾಡಿದಾಗ ಚಾರ್ಜರ್ ಕಾರಿನಲ್ಲಿ ಇತ್ತು ಎನ್ನುತ್ತಾನೆ. ಅಲ್ಲಿಗೆ ಮೊದಲ ಬಾರಿಗೆ ಪೊಲೀಸರಿಗೆ ಮಣಿಕಂಠನ ಅನುಮಾನ ಶುರುವಾಗುತ್ತದೆ.
ಪ್ರೀತಿ ಒಪ್ಪಲಿಲ್ಲ ಎಂದು ಕೊಲೆ!
ಮಣಿಕಂಠ ನಾನು ಆಕೆಯನ್ನು ಪ್ರೀತಿಸುತ್ತಿದ್ದೆ ಆದರೆ ಒಪ್ಪಲಿಲ್ಲ. ನಂತರ ಆಕೆಯ ಮದುವೆಯಾಗುತ್ತದೆ. ಆದರೆ ಮದುವೆಯ ನಂತರ ಕೂಡ ಅವರ ಕುಟುಂಬದ ನಡುವೆ ನಮ್ಮ ವ್ಯಾವಹಾರಿಕ ಸಂಬಂಧವಿರುತ್ತದೆ ಒಂದು ಕಡೆ ಹಣಕಾಸಿನ ವ್ಯವಹಾರ ಇನ್ನೊಂದು ಕಡೆ ಆಕೆ ಇನ್ನೊಬ್ಬ ವ್ಯಕ್ತಿಯ ನಡುವೆ ಚೆನ್ನಾಗಿರುವುದನ್ನು ಸಹಿಸಲಾರದೆ ನಾನು ಈ ಕೆಲಸ ಮಾಡಿಬಿಟ್ಟೆ ಎಂದು ಒಪ್ಪಿಕೊಂಡಿದ್ದಾನೆ.
