ಕುಂದಾದ್ರಿ ಬೆಟ್ಟದ ಮೇಲೆ ಮರ್ಡರ್? ಆತ್ಮಹತ್ಯೆ..?
– ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ: ಪೋಲೀಸರ ತನಿಖೆ
– ನೇಣು ಬಿಗಿದು ಸುಟ್ಟು ಹಾಕಿದ್ದಾ? ಆತ್ಮಹತ್ಯೆ ಮಾಡಿಕೊಂಡಿದ್ದಾ?
NAMMUR EXPRESS NEWS
ತೀರ್ಥಹಳ್ಳಿ: ಪ್ರಸಿದ್ಧ ಪ್ರವಾಸಿ ತಾಣ ತೀರ್ಥಹಳ್ಳಿ ತಾಲೂಕಿನ ಕುಂದಾದ್ರಿ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಅನಾಮಧೇಯ ಶವ ಪತ್ತೆ ಆಗಿದೆ. ಸೋಮವಾರ ಪತ್ತೆಯಾಗಿದ್ದು, ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದಾರೆ.
ಒಂದು ತಿಂಗಳು ಹಿಂದೆ ಘಟನೆ ನಡೆದಿರುವ ಶಂಕೆ ಮೂಡಿದೆ. ಕುಂದಾದ್ರಿ ತಪ್ಪಲಿನಲ್ಲಿರುವ ಐಬಿ ಬಳಿ ಮರ್ಡರ್ ನಡೆದಿದೆ ಎನ್ನಲಾಗುತ್ತಿದೆ.
ಪ್ರತಿ ದಿನ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸದ ನೆಪದಲ್ಲಿ ಕರೆದೋಯ್ದು ಕೊಲೆ ಮಾಡಿರಬಹುದಾ ಎಂಬ ಶಂಕೆ ಎದುರಾಗಿದೆ. ನೇಣು ಬಿಗಿದು ಬೆಂಕಿ ಹಾಕಿರಬಹುದು ಎಂದು ಕೂಡ ಚರ್ಚೆ ನಡೆಯುತ್ತಿದೆ. ಆತ್ಮಹತ್ಯೆ ಮತ್ತು ಕೊಲೆ ಎರಡೂ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
