Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ನಾಗಶ್ರೀಗೆ ಚಿನ್ನದ ಪದಕ

ತೀರ್ಥಹಳ್ಳಿಯ ನಾಗಶ್ರೀಗೆ ಚಿನ್ನದ ಪದಕ
– ಬಿಎಸ್ಸಿ.ಯ ಜೈವಿಕ ತಂತ್ರಜ್ಞಾನದ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ
– ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ರವರು ಪದಕ ನೀಡಿ ಸನ್ಮಾನ

NAMMUR EXPRESS NEWS
ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಂತಿಮ ಬಿಎಸ್ಸಿ.ಯ (2024-25) ಜೈವಿಕ ತಂತ್ರಜ್ಞಾನದ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, “ಶ್ರೀ. ಆಂಟೋನಿ ಜಿ ಲೋಬೊ” ರವರ ಗೌರವ ಚಿನ್ನದ ಪದಕವನ್ನು ಪಡೆದಿದ್ದಾರೆ.

ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ||ಕುಲಪತಿಗಳು ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ರವರು ಪದಕ ನೀಡಿ ಸನ್ಮಾನಿಸಿದ್ದಾರೆ. ವಿದ್ಯಾರ್ಥಿನಿ ತೀರ್ಥಹಳ್ಳಿ-ರಥಬೀದಿಯ ಜ್ಯೋತಿಷ್ಯರಾದ ಶ್ರೀ ಅಶ್ವತ್ಥನಾರಾಯಣ ಭಟ್ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿಯಾಗಿರುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.