Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ‘ನಂದಿ ರಥಯಾತ್ರೆ’ ಸಂಭ್ರಮ..!

ತೀರ್ಥಹಳ್ಳಿಯಲ್ಲಿ ‘ನಂದಿ ರಥಯಾತ್ರೆ’ ಸಂಭ್ರಮ..!
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕಾರ್ಯಕ್ರಮ
– ಗೋವಿನ ರಕ್ಷಣೆಯ ಬಗ್ಗೆ ಮಾಹಿತಿ: ಮೆರವಣಿಗೆ

NAMMUR EXPRESS NEWS
ತೀರ್ಥಹಳ್ಳಿ: ಜನವರಿ 16ರಂದು ತೀರ್ಥಹಳ್ಳಿಯಲ್ಲಿ ‘ನಂದಿ ರಥಯಾತ್ರೆ’ ಯಶಸ್ವಿಯಾಗಿ ನಡೆಯಿತು. ದೇಶೀ ಗೋವಿನ ಮಹತ್ವ, ಗೋ ಆಧಾರಿತ ಕೃಷಿ, ಪರಿಸರ ಸಂರಕ್ಷಣೆ, ಲೋಕ ಕಲ್ಯಾಣದ ಉದ್ದೇಶವನ್ನು ಹೊತ್ತು ಡಿಸೆಂಬರ್ 30, 2024ರಂದು ಪ್ರಾರಂಭವಾಗಿರುವ ‘ನಂದಿ ರಥಯಾತ್ರೆ’, 88 ದಿನಗಳ ಕಾಲ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಲಿದ್ದು ಜನವರಿ 16, ಗುರುವಾರದಂದು ತೀರ್ಥಹಳ್ಳಿಗೆ ಆಗಮಿಸಿತು. ಅಂದು ಬೆಳಗ್ಗೆ ಕೊಲ್ಲೂರಿನಿಂದ ಹೊರಡಲಿರುವ ರಥ ಯಾತ್ರೆ ನಿಟ್ಟೂರು, ನಗರ, ಕಾರಣಗಿರಿ, ಅರಳಸುರಳಿ, ಆರಗ ಮಾರ್ಗವಾಗಿ ಸಂಜೆ 5-00 ಗಂಟೆಗೆ ತೀರ್ಥಹಳ್ಳಿಗೆ ಆಗಮಿಸಿತು. ಅಧ್ಯಕ್ಷರು ಮತ್ತು ಸದಸ್ಯರು ಸ್ವಾಗತ ಸಮಿತಿ ‘ನಂದಿ ರಥಯಾತ್ರೆ’ ತೀರ್ಥಹಳ್ಳಿ ನಂದಿ ರಥಯಾತ್ರೆಯನ್ನು ಶಾಸಕ ಆರಗ ಜ್ಞಾನೇಂದ್ರದ ನೇತೃತ್ವದಲ್ಲಿ, ಅದ್ದೂರಿಯಾಗಿ ತೀರ್ಥಹಳ್ಳಿ ಪಟ್ಟಣಕ್ಕೆ ಬರಮಾಡಿಕೊಂಡು. ತದನಂತರ ಪಟ್ಟಣದಲ್ಲಿ ಮೆರವಣಿಗೆ ಮೂಲ ರಥಬಿಯ ರಾಮಚಂದ್ರಪುರ ಮಠದ ಆವರಣಕ್ಕೆ ತಲುಪಿ ಅಲ್ಲಿ ಗಣ್ಯರು ಜ್ಯೋತಿ ಬೆಳಗಿಸಿ ಸಾರ್ವಜನಿಕರು ವಿಷ್ಣು ಸಹಸ್ರನಾಮ, ಶ್ರದ್ಧಾಭಕ್ತಿಯಿಂದ ಪಟ್ಟಣೆ ಮಾಡಿ ನಂತರ ಜೋಡಿ ನಂದಿಗಳಿಗೆ ನಂದಿ ಪೂಜೆ ನೆರವೇರಿಸಿ, ದೀಪಾ ಆರಾಧನೆ ಮಾಡಿ, ನಂತರ ಸರಳವಾದ ವೇದಿಕೆಯ ಕಾರ್ಯಕ್ರಮದಲ್ಲಿ ಗೋವುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಸಾರ್ವಜನಿಕರಿಂದ ವಿಷ್ಣು ಸಹಸ್ರನಾದು ಪಠಣ, ಭಜನೆ, ನಂದಿ ಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ವಕ್ತಾರರಾಗಿ ಪ್ರವೀಣ ಸರಳಾಯ ಅವರು ಅಧ್ಯಕ್ಷತೆಯನ್ನ ಆರಗ ಜ್ಞಾನೇಂದ್ರರವರು ವಹಿಸಿದ್ದರು, ಡಾ. ಜೀವಂಧರ್ ಜೈನ್, ಶಶಿಧರ ಬೊಬ್ಬಿ, ಕವಿರಾಜ್ ಬೇಗುವಳ್ಳಿ, ನಂಬಳ ಮುರಳಿ, ಶಿವಣ್ಣ ತುಕ್ಕಿ, ರವಿರಾಜ ವೈದ್ಯರು ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು. ಪ್ರವೀಣ ಸರಳಾಯ ಹೇಳುವಂತೆ ಎಲ್ಲಾ ಸಮಸ್ಯೆಗಳಿಗೂ ಕೂಡ ಗೋವಿನಲ್ಲಿ ಪರಿಹಾರವಿದೆ. ಭೂಮಿಯ ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ನಾವು ತಿನ್ನುವಂತಹ ವಸ್ತು ಸಾಕಷ್ಟು ರೀತಿಯ ಪ್ರಾಮುಖ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ. ನಾವು ತಿನ್ನುವ ಆಹಾರದಿಂದ ಮುಂದಿನ ಮನುಷ್ಯ ಸತ್ವವನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ನಮ್ಮ ಎಲ್ಲಾ ಆಚರಣೆಗಳು ಕೂಡ ನಾವು ಗೋವು ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ವಿಶ್ವಕ್ಕೆ ಒಳ್ಳೆದಾಗಬೇಕು ಎಂದರೆ ಪ್ರಮುಖವಾಗಿ ಗೋವು ಇರಲೇಬೇಕು. ವಿಜ್ಞಾನದಲ್ಲಿ ವೈದ್ಯಕೀಯದಲ್ಲಿ ಗೋವಿನ ಪ್ರಾಮುಖ್ಯತೆ ಏನೂ ಎಂಬುದು ಎಲ್ಲಾ ಕಡೆ ತಿಳಿದಿದೆ ಆದರೆ ಗೋವುಗಳ ರಕ್ಷಣೆ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು ಎಂಬುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.