ತೀರ್ಥಹಳ್ಳಿಯಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ
– ಏಪ್ರಿಲ್ 25,26,27ರಂದು ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಆಯೋಜನೆ
– ಶ್ರೀಲಂಕಾ ಸೇರಿದಂತೆ 20 ಪ್ರತಿಷ್ಠಿತ ತಂಡಗಳ ಸ್ಪರ್ಧೆ
– ವಿನ್ನರ್ ಗೆ 3,33,333 ರೂ. ರನ್ನರ್ ಗೆ 2,22,222 ರೂ ಬಹುಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಏಪ್ರಿಲ್ 25,26, 27ರಂದು ಮೂರು ದಿನಗಳ ಕಾಲ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಈಗಾಗಲೇ ಸಿದ್ಧತೆ ನಡೆಯಿತ್ತಿದ್ದು ರಾಜ್ಯ ಸೇರಿ ವಿದೇಶದ ತಂಡ ಕೂಡ ಆಡಲಿದೆ.
ಕ್ಲಬ್ ಅಧ್ಯಕ್ಷ ಅಶ್ವಲ್ ಗೌಡ, ಕೆಳಕೆರೆ ಪೂರ್ಣೇಶ್, ಆದರ್ಶ ಹುಂಚದಕಟ್ಟೆ, ಶ್ರೇಯಸ್ ರಾವ್ , ಸುಭಾಷ್ ಕುಲಾಲ್, ಆಸಿಫ್, ಸಂದರ್ಶನಗೌಡ, ಧೃವಕುಮಾರ್. ಶೋಭಿತ್ ರಾವ್, ಕಮಲ್‌ರಾಜ್ ತುಡ್ಕಿ, ಅನೂಪ್ ತುಡ್ಕಿ, ನದೀಮ್ ಬೆಟ್ಟಮಕ್ಕಿ, ಅವಿನಾಶ್ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದು ಪೋಸ್ಟರ್ ಬಿಡುಗಡೆ ಮಾಡಿದರು.
– ಡಿಸಿಎಂ ಶಿವಕುಮಾರ್ ಸಲಹೆ ಮೇರೆಗೆ ಭಾರತ್ ಜೋಡೋ ಚಾಂಪಿಯನ್ ಟ್ರೋಫಿ-2025
ತೀರ್ಥಹಳ್ಳಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ 2023 ಹಾಗೂ 2024 ರಲ್ಲಿ ಡಿ. ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಅದ್ದೂರಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಯಶಸ್ವಿಯಾಗಿತ್ತು. ಈ ಬಾರಿ ಖುದ್ದು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ನೆನಪಲ್ಲಿ ಟೂರ್ನಮೆಂಟ್‌ಗೆ ಭಾರತ್ ಜೋಡೋ ಚಾಂಪಿಯನ್ ಟ್ರೋಫಿ-2025 ಎಂದು ಹೆಸರಿಡುವಂತೆ ಸೂಚಿಸಿದ ಕಾರಣ ಆ ಹೆಸರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದ ಮೂರೂ ದಿನ ಜಿಲ್ಲೆ ಹಾಗೂ ರಾಜ್ಯದ ಹಲವು ಪ್ರಮುಖ ರಾಜಕಾರಣಿಗಳು ಕ್ರಿಕೆಟ್ ಆಟಗಾರರು. ಉದ್ಯಮಿಗಳು. ಕ್ರೀಡಾ ಪ್ರೋತ್ಸಾಹಕರು ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ 25ರ ಬೆಳಿಗ್ಗೆ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕರೂ, ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರೂ ಆದ ಅಬ್ದುಲ್ ಕಲಾಂ ಹಾಗೂ ಉದ್ಯಮಿ ಹುಂಚದಕಟ್ಟೆ ಶಶಿಧರ್ ಕ್ರೀಡಾಕೂಟವನ್ನು ಉದ್ಘಾಟಿಸುವರು.
– ಶ್ರೀಲಂಕಾ ಸೇರಿ 20 ಪ್ರತಿಷ್ಠಿತ ತಂಡಗಳು 100ಕ್ಕೂ ಅಧಿಕ ಹೊರರಾಜ್ಯದ ಆಟಗಾರರು
ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡ
1) ವೀನಸ್ ಬೋಲೋಂಗಾ ಟೀಂ ಪಾಲ್ಗೊಳ್ಳುತ್ತಿದೆ.
2) ಉಡುಪಿಯ ಇಜಾನ್ ಸ್ಪೋರ್ಟ್ಸ್
3) ಬೆಂಗಳೂರು ಫ್ರೆಂಡ್ಸ್
4) ಬೆಂಗಳೂರಿನ ಸುನಿಲ್ XI ನ್ಯಾಶ್
5) ಬೆಂಗಳೂರು ಜೈ ಕರ್ನಾಟಕ
6) ನಿಲುವಾಗಿಲು ಶ್ರೀ ಭವಾನಿ ಶಂಕರ್
7) ತಿಪಟೂರು ಕ್ಲಾಸಿಕ್ ಕ್ರಿಕೆಟರ್ಸ್
8) ಅಥರ್ವ ಕ್ರಿಕೆಟರ್ಸ್
9) ಸೂರತ್ಕಲ್ ಯುನೈಟೆಡ್ ಜಾಗ್ವಾರ್
10) ಕಳಾವರಕಟ್ಟೆ ಫ್ರೆಂಡ್ಸ್
11) ಕೊಪ್ಪ ಎಬಿ ಕ್ರಿಕೆಟರ್ಸ್
12) ಜಾನ್ ಸನ್ 2 ರಿಯಲ್ ಫೈಟರ್ಸ್
13) ಕೋಟಾ ಪಾಂಚಜನ್ಯ
14) ಬೆಂಗಳೂರು ಸ್ಪೀಡ್ ಬಾಯ್ಸ್ ಮೈ ಟಿ
15) ಬೆಂಗಳೂರು ಪ್ರಭು XI
16) ಬ್ಯಾಟರಾಯನಪುರ ಸ್ಪೋರ್ಟ್ಸ್ ಕ್ಲಬ್
17) ಗೌರಿ ಬಿದನೂರು ಸ್ಪೋರ್ಟ್ಸ್ ಕ್ಲಬ್
18) ಆರ್.ಕೆ. ಸ್ಪೋರ್ಟ್ಸ್
19) ಸರ್ವಧರ್ಮ ಕ್ರಿಕೆಟರ್ಸ್
20) ಸಿಎಫ್‌ಸಿ ತೀರ್ಥಹಳ್ಳಿ ತಂಡಗಳು ಪಾಲ್ಗೊಳ್ಳಲಿವೆ.
ತಂಡಕ್ಕೆ 3,33,333/- ರೂಪಾಯಿ ಬಹುಮಾನ
ಪಂದ್ಯಾವಳಿಯ ವಿಜೇತ ತಂಡಕ್ಕೆ 3,33,333/- ರೂಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 2,22,222/- ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ಮಿಕ್ಕಂತೆ ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅತ್ಯುತ್ತಮ
ಆಟಗಾರರಿಗೆ ನಗದು ಬಹುಮಾನ ನೀಡಲಾಗುತ್ತದೆ.
