Categories
ತೀರ್ಥಹಳ್ಳಿ

ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ನೂತನ ವೈದ್ಯರುಗಳ ನೇಮಕ

ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ನೂತನ ವೈದ್ಯರುಗಳ ನೇಮಕ
– ಮೂವರು ವೈದ್ಯರು ಕೌನ್ಸಿಲಿಂಗ್‌ ಪ್ರಕ್ರಿಯೆಯ ಮೂಲಕ ಆಯ್ಕೆ
– 5 ಹೊಸ ವೈದ್ಯರನ್ನು ನೇಮಕ ಮಾಡಿ ಸರ್ಕಾರದ ಆದೇಶ
– ಪ್ರತಿಭಟನೆ, ಹೋರಾಟದ ನಡುವೆ ನೂತನ ವೈದ್ಯರ ನೇಮಕ
– ಈಗಿರುವ ವೈದ್ಯರೇ ಇರಲಿ: ಸಾರ್ವಜನಿಕರ ಅಗ್ರಹ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯರ ವರ್ಗಾವಣೆ ಭಾರೀ ಸದ್ದು ಮಾಡಿರುವ ನಡುವೆ ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆಗೆ 5 ಹೊಸ ವೈದ್ಯರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.
ಮೂವರು ವೈದ್ಯರು ಕೌನ್ಸಿಲಿಂಗ್‌ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದು ಇಬ್ಬರನ್ನು ವರ್ಗಾವಣೆಯ ಮೂಲಕ ನೇಮಕಗೊಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇದರ ಆಯುಕ್ತ ಶಿವಕುಮಾರ ಕೆ.ಬಿ. ಜುಲೈ 7ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.

1) ದಂತ ತಜ್ಞ- ಡಾ. ಕೆ ನಾಗೇಶ್ ಕುಮಾರ್ ( ಮೈಸೂರು ಇಂದ ಕೌನ್ಸಿಲಿಂಗ್‌ ಮೂಲಕ)
2) ಮಕ್ಕಳ ತಜ್ಞರು- ಡಾ. ಸುಪ್ರೀತ್ ( ಅನವಟ್ಟಿಯಿಂದ ವರ್ಗಾವಣೆ )
3) ಅರವಳಿಕೆ ತಜ್ಞರು – ಡಾ.ವಿನಯ್ (ಹೊಳಲೂರುನಿಂದ ವರ್ಗಾವಣೆ )
4) ಇ.ಎನ್.ಟಿ ತಜ್ಞರು – ಡಾ. ಕವಿತಾ ( ಭದ್ರಾವತಿ ಇಂದ ಕೌನ್ಸಿಲಿಂಗ್‌ ಮೂಲಕ)
5) ಮೂಳೆ ತಜ್ಞರು – ಡಾ.ಗಣೇಶ್ ನಾಯಕ್ ( ಉಡುಪಿ ಇಂದ ಕೌನ್ಸಿಲಿಂಗ್‌ ಮೂಲಕ)
ಕಣ್ಣಿನ ತಜ್ಞರ ನೇಮಕ ಬಾಕಿ ಇದೆ. ಇನ್ನು ಅನೇಕ ನರ್ಸ್ ಕೂಡ ವರ್ಗಾವಣೆಗೊಂಡಿದ್ದಾರೆ. ಹಾಗಾಗಿ ಆಸ್ಪತ್ರೆ ಸೇವೆ ವಿಳಂಬ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.