ಜಾತ್ರೆಯಲ್ಲಿ ಅನಘ ಸೊಸೈಟಿ ಮಹಿಳೆಯರ ಹೊಸ ಹೆಜ್ಜೆ..!!
– ವಸ್ತ್ರೋದ್ಯಮದಲ್ಲಿ ವಿಶೇಷ ಸೇವೆ
– ಹೋಟೆಲ್,ಅಂಗಡಿ ತೆರೆದು ಗಮನ ಸೆಳೆದ ಮಹಿಳೆಯರು
NAMMUR EXPRESS NEWS
ತೀರ್ಥಹಳ್ಳಿ: ಈ ಬಾರಿಯ ತೀರ್ಥಹಳ್ಳಿ ಶ್ರೀರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನೇಕ ನವೀನ ಉದ್ಯಮಗಳು ಕೂಡ ಗ್ರಾಹಕರ ಗಮನಸೆಳೆಯುತ್ತಿದ್ದು,ಜಾತ್ರೆಯಲ್ಲಿ ಲಕ್ಷಾಂತರ ಜನರನ್ನು ಕೈಬೀಸಿ ಕರೆಯುತ್ತಿದೆ. ಜಾತ್ರೆಯಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಮಹಿಳಾ ಸಹಕಾರಿ ಸಂಸ್ಥೆಯಾದ ಅನಘ ಸೊಸೈಟಿಯ ಸದಸ್ಯರುಗಳು ಬಟ್ಟೆ ಹಾಗೂ ಇತರ ಅಲಂಕಾರಿಕ ವಸ್ತುಗಳು ಸೇರಿದಂತೆ ರುಚಿಯಾದ ಅಡುಗೆ ಮಾಡಿ ಜನರಿಗೆ ಅಚ್ಚುಕಟ್ಟಾದ ಸೇವೆ ನೀಡಿ ಸೈ ಎನಿಸಿಕೊಂಡು ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ.
ಅನಘ ಸೊಸೈಟಿ ಕಳೆದ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಮಹಿಳಾ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿಯೂ ಕೂಡ ತೊಡಗಿಕೊಂಡಿದೆ. ಈ ಮೂಲಕ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಮತಾ ಸಾಯಿನಾಥ್ ಸೇರಿದಂತೆ ಎಲ್ಲಾ ಸದಸ್ಯರು,ಪದಾಧಿಕಾರಿಗಳು ಹಾಜರಿದ್ದರು.
