ತೀರ್ಥಹಳ್ಳಿಗೆ ನೂತನ ತಹಶೀಲ್ದಾರ್ ಆಗಮನ!
– ಜಕ್ಕಣ್ಣ ಗೌಡರ್ ನೇಮಕ ಮಾಡಿ ಆದೇಶ
– ಸರ್ಕಾರದಿಂದ ಆದೇಶ ಶ್ರೀಘ್ರದಲ್ಲೇ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ..?!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶವನ್ನು ಹೊರಡಿಸಿದೆ. ತೀರ್ಥಹಳ್ಳಿಯಲ್ಲಿ ಇದುವರೆಗೆ ಹಂಗಾಮಿ ತಹಶೀಲ್ದಾರರಾಗಿ ಲಿಂಗರಾಜು ಅವರು ಕೆಲಸ ಮಾಡುತ್ತಿದ್ದರು. ಈಗ ಜಕ್ಕಣ್ಣಗೌಡರ್ ನೇಮಕದಿಂದಾಗಿ ತೀರ್ಥಹಳ್ಳಿ ತಾಲೂಕು ಆಡಳಿತಕ್ಕೆ ಚುರುಕು ಸಿಗಲಿದೆ. ತೀರ್ಥಹಳ್ಳಿ ತಹಶೀಲ್ದಾರರಾಗಿ ಇತ್ತೀಚಿಗೆ ಅಮೃತ್ ಅತ್ರೆಶ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬಳಿಕ ಈ ಸ್ಥಾನ ಖಾಲಿ ಇದ್ದು ಹಂಗಾಮಿ ತಹಶೀಲ್ದಾರರಾಗಿ ಲಿಂಗರಾಜು ಅವರು ಕೆಲಸ ಮಾಡುತ್ತಾ ಇದ್ದರು. ಇದೀಗ ಜಕಣ್ಣಗೌಡರ್ ಅವರನ್ನ ಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ. ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಲಂಚ ಹಾಗೂ ಇತರೆ ಸೇರಿದಂತೆ ದಾಖಲೆಗಳ ಸಮಸ್ಯೆ ಇದೆ. ರೈತರು ಮತ್ತು ಜನರ ದಾಖಲೆಗಳು ಬೇಗ ಸಿಗಬೇಕು. ಜನರ ಕೆಲಸ ಕಾರ್ಯಗಳು ಪೂರ್ಣಗೊಳಿಸುತ್ತಿಲ್ಲ ಎನ್ನುವ ದೂರುಗಳು ಇವೆ. ಈ ಹಿನ್ನಲೆಯಲ್ಲಿ ಜಕ್ಕಣ್ಣಗೌಡರ್ ಅವರ ಆಗಮನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.