ಡಿ.12ರಂದು ತೀರ್ಥಹಳ್ಳಿಯಲ್ಲಿ ಕರೆಂಟ್ ಇಲ್ಲ
– ಹಲವು ಕಡೆ ವಿದ್ಯುತ್ ಸಂಪೂರ್ಣ ಬಂದ್
– ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಸಮಸ್ಯೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕೆಲವು ಭಾಗಗಳಲ್ಲಿ ಡಿ.12ರಂದು ವಿದ್ಯುತ್ ಇರುವುದಿಲ್ಲ. 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹೊಸಂಗಂಡಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ 110/11 ಕೆವಿ ತೀರ್ಥಹಳ್ಳಿ ಮತ್ತು 110/11 ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಅಡಚಣೆ ಉಂಟಾಗಿರುವುದರಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ , ಕುಡುಮಲ್ಲಿಗೆ, ಅರಳಸುರಳಿ, ಆರಗ, ನೆರಟೂರು, ನೊಣಬೂರು, ಸಾಲೂರು, ಆಗುಂಬೆ, ಹೆಗ್ಗೋಡು, ಅರೇಹಳ್ಳಿ, ಮೇಗರವಳ್ಳಿ, ನಾಲೂರು, ಬಿದರಗೋಡು, ತೀರ್ಥಮುತ್ತೂರು, ಅರಳಾಪುರ, ಬಸವಾನಿ, ದೇವಂಗಿ, ಪಾರೋಗೊಳಿಗೆ, ಪೆದ್ದೂರು, ಮೇಳಿಗೆ, ಮೇಲಿನ ಕುರುವಳ್ಳಿ, ಮುಳುಬಾಗಿಲು, ಸಾಲ್ಗಡಿ, ಶೇಡ್ಗಾರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಡಿಸೆಂಬರ್ 12ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.