Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಧಿಕಾರಿ, ಸರ್ಕಾರಿ ನೌಕರರಿಗೆ ಪಕ್ಷ ಸಂಕಟ!

ತೀರ್ಥಹಳ್ಳಿ ಅಧಿಕಾರಿ, ಸರ್ಕಾರಿ ನೌಕರರಿಗೆ ಪಕ್ಷ ಸಂಕಟ!
– ಅಳುವ ಪಕ್ಷದವರಿಗೂ ಮೆಚ್ಚಿಸಬೇಕು…ಶಾಸಕರ ಕಡೆಯವರಿಗೂ ಓಕೆ ಆಗ್ಬೇಕು
– ಇದೆಂಥಾ ಕಿರಿಕಿರಿ ಮಾರಾಯ್ರೆ… ನೊಂದವರ ಅಳಲು
– ಸರ್ಕಾರಿ ನೌಕರರ ಮೇಲೆ ಸಣ್ಣ ನಾಯಕರ ಸಣ್ಣತನ!?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು, ನೌಕರರು ಈಗ ಇಲ್ಲಿನ ಪ್ರತಿಷ್ಠೆ ರಾಜಕಾರಣದಿಂದ ಇಕ್ಕಟ್ಟಲ್ಲಿ ಸಿಲುಕಿದ್ದಾರೆ.
ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್, ಇಲ್ಲಿ ಶಾಸಕರು ಬಿಜೆಪಿ. ಇನ್ನು ಬಿಜೆಪಿಯಲ್ಲಿ 10 ಜನ ಲೀಡರ್. ಕಾಂಗ್ರೆಸ್ ಅಲ್ಲಿ 10 ಜನ ಪ್ರಮುಖ ಲೀಡರ್. ಅದ್ರ ಮಧ್ಯ ದೊಡ್ಡ ಲೀಡರ್ ಹಿಡಿದು ಸಣ್ಣ ಗ್ರಾಮ ಪಂಚಾಯತ್ ಸದಸ್ಯರದ್ದು ಇಲ್ಲಿ ದರ್ಬಾರ್. ಹಾಗಾಗಿ ಪಾರದರ್ಶಕವಾಗಿ ಕೆಲಸ ಮಾಡದಂತಹ ಸ್ಥಿತಿಗೆ ವ್ಯವಸ್ಥೆ ಬಂದು ತಲುಪಿದೆ. ಇನ್ನು ಕೆಲ ಸೋಮಾರಿ ಹಾಗೂ ಲಂಚ ಬಾಕ ನೌಕರರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ.
ಈ ನಡುವೆ ಬಿ.ಇ.ಓ. ಗಣೇಶ್ ಅವರ ಪ್ರಕರಣ ಪ್ರಾಮಾಣಿಕ ಅಧಿಕಾರಿಗಳು ಇಲ್ಲಿ ಕೆಲಸ ಮಾಡಲು ಆಗಲ್ಲ ಎಂಬ ಸ್ಪಷ್ಟ ನಿದರ್ಶನ ಎನ್ನುವಂತಾಗಿದೆ. ಇನ್ನು ಶಾಸಕರು ಕೂಡ ತಾಲೂಕು ಕಚೇರಿ ಭೇಟಿ ನೀಡಿ ಅಧಿಕಾರಿಗಳಿಗೆ ದಬಾಯಿಸಿದ್ದಾರೆ. ಆ ಕಡೆನೂ ಪೆಟ್ಟು ಈ ಕಡೆನೂ ಪೆಟ್ಟು ಇನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ಸರ್ಕಾರಿ ನೌಕರರು ಇದ್ದಾರೆ.

ಬಿಇಓ ವಿರುದ್ಧ ಕಾಂಗ್ರೆಸ್ ಹೋರಾಟ

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿಯನ್ನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಂತೆ ಮಾಡಿದ ಉತ್ತಮ ಅಧಿಕಾರಿ ವಿರುದ್ಧ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಕೂಡ ನಡೆದಿದೆ. ಶಿಸ್ತು ಕ್ರಮ ಸಮಂಜಸವಲ್ಲ ಎಂಬ ಜನರ, ಶಿಕ್ಷಕರ ದನಿ ಕೂಡ ಕೇಳಿ ಬರುತ್ತಿದೆ.
ಎಲ್ಲವನ್ನು ರಾಜಕಾರಣ ಮಾಡುತ್ತಾ ಹೋದರೆ ವ್ಯವಸ್ಥೆ ಬೀದಿಗೆ ಬೀಳುವುದು ಖಂಡಿತಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಪುಸ್ತಕ, ಬ್ಯಾಗ್ ಹಂಚುವ ಕಾರ್ಯಕ್ರಮ ಸಂಸದರ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದಿದೆ. ಇಲ್ಲಿ ಆತುರದಲ್ಲಿ ನಡೆದಿರುವ ಸಾಧ್ಯತೆ ಇದೆ.
ಒಂದು ವೇಳೆ ಅವರು ರಾಜಕೀಯ ಮಾಡಿದ್ದರೆ ಖಂಡಿತಾ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರನ್ನು ಕರೆಯುತ್ತಿರಲಿಲ್ಲ. ತಾಲೂಕನ್ನು ರಾಜ್ಯದ ಮೊದಲ ತಾಲೂಕು ಮಾಡುವಲ್ಲಿ ಇವರ ಪಾತ್ರ ಕೂಡ ಪ್ರಮುಖವಾದುದು. ಏಕಾಏಕಿ ಅವರನ್ನು ಕೆಲಸದಿಂದ ತೆಗೆಯಿರಿ ಅನ್ನುವಷ್ಟು ದೊಡ್ಡ ತಪ್ಪು ಅನಿಸುವುದಿಲ್ಲ ಎಂಬುದು ಅನೇಕರ ವಾದ.

ಕಾಂಗ್ರೆಸ್ ಆರೋಪ ಏನು?

ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಾದ ವಿದ್ಯಾಸಿರಿ, ಬಿಸಿಯೂಟ, ಶೂ ಸಾಕ್ಸ್ ಭಾಗ್ಯ, ಹಾಲು ಮೊಟ್ಟೆಗಳ ವಿತರಣೆ ಬಗ್ಗೆ ಸರಿಯಾದ ಮಾಹಿತಿಯನ್ನು ಎಸ್‌ಡಿಎಂಸಿಗಳಿಗೆ ನೀಡುತ್ತಿಲ್ಲ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ಅಥವಾ ಸರ್ಕಾರದ ಪ್ರತಿನಿಧಿಗಳಿಗೆ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಪ್ರಮುಖರಿಗೆ ಗಮನಕ್ಕೆ ತರಲಿಲ್ಲ ಎಂಬುದು ಆರೋಪ. ಅದರೆ ಮಕ್ಕಳಿಗೆ ಅನುಕೂಲ ಆಗುವುದು ಇಲ್ಲಿ ಪ್ರಮುಖವೇ ಹೊರತು ಕುರ್ಚಿ ಮೇಲೆ ಕುಳಿತು ನಾಲ್ಕು ಪುಕ್ಕಟ್ಟೆ ಭಾಷಣ ಮಾಡುವುದು ಪ್ರಾಮುಖ್ಯತೆ ಪಡೆಯಬೇಕು ಎಂಬುದು ಕೂಡ ಶಿಕ್ಷಣ ವಲಯದ ಪ್ರಶ್ನೆ.
ಬಿಜೆಪಿ ಪಕ್ಷದ ಮುಖಂಡರಿಂದಲೇ ಕಾರ್ಯಕ್ರಮದ ನಿರೂಪಣೆ ಮಾಡಿಸಿ ಅಪಚಾರ ನಿಜ, ಅದರಲ್ಲಿ ಬಿಜೆಪಿ ಮುಖಂಡರ ಅವಸರವೂ ಕಾರಣ ಇರಬಹುದು.

 

ಒಂದು ಕಡೆ 2 ರಾಜಕೀಯ ಪಕ್ಷದ ನಾಯಕರು, ಅದರಲ್ಲೂ ಹತ್ತಾರು ಬಣ, ಇನ್ನು ಎಲ್ಲದರಲ್ಲೂ ತಪ್ಪು ಹುಡುಕುವ ಒಂದಷ್ಟು ಜನ. ಬ್ರೋಕರ್ ಹಾವಳಿ, ಕೆಲವು ಲಂಚ ಕೋರ ನೌಕರರ ಡೀಲ್, ಜಾತಿ ಆಟ ಇದರ ನಡುವೆ ತೀರ್ಥಹಳ್ಳಿಯಲ್ಲಿ ಕೆಲಸ ಮಾಡುವುದೇ ಕಷ್ಟ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಕೆಲವು ಇಲಾಖೆಗಳ ಮುಖ್ಯ ಅಧಿಕಾರಿಗಳಿಗೆ ಕೆಲಸವೇ ಇಲ್ಲ. ಕೆಲವು ಇಲಾಖೆಗೆ ರಾತ್ರಿ ಹಗಲು ಮಾಡಿದ್ರು ಮುಗಿಯಲ್ಲ. ಈ ನಡುವೆ ರಾಜಕೀಯ ಮಂಡೆ ಬಿಸಿ. ಒಟ್ಟಿನಲ್ಲಿ ನೌಕರರು ಹೈರಾಣಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.