Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹಕೀಮ್ ಅವರ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಗೌರವ

ತೀರ್ಥಹಳ್ಳಿ ಹಕೀಮ್ ಅವರ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಗೌರವ
– ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ
– ಸ್ನೇಹಿತರು, ಮಾರ್ಗದರ್ಶಕರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿಯ ಹಕೀಮ್ ಅವರ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿ ಪಿ.ಹೆಚ್.ಡಿ ಗೌರವ ಸಿಕ್ಕಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ತೀರ್ಥಹಳ್ಳಿ ತಾಲ್ಲೂಕು ಹೆದ್ದೂರು ಗ್ರಾಮದ ಕ್ಯಾದಿಗೆರೆ ಯಲ್ಲಿ ಅಬ್ದುಲ್ ಖಾದರ್ ಹಾಗೂ ದಿ.ಜೊಹರಾಬಿ ದಂಪತಿಯ ಪುತ್ರನಾಗಿ ಜನಿಸಿದ ಹಕೀಮ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವನ್ನು ನೊಣಬೂರಿನಲ್ಲಿ ಮುಗಿಸಿದರು. ನಂತರದ ಕಾಲೇಜು ಶಿಕ್ಷಣವನ್ನು ಪ್ರತಿಷ್ಠಿತ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿಯಲ್ಲಿ ಪೂರೈಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರವಾದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿಯಲ್ಲಿ ಡಾ. ಬಿ. ಎಂ. ಪುಟ್ಟಯ್ಯ ಇವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಹಕೀಮ್ ಮಂಡಿಸಿದ ಕನ್ನಡ ಮುಸ್ಲಿಂ ಕಾವ್ಯದ ವಿಭಿನ್ನ ನೆಲೆಗಳು” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌. ಡಿ. ಡಾಕ್ಟರೇಟ್ ಪದವಿ ಘೋಷಿಸಿದೆ ಹಾಗೂ ಮುಂಬರುವ ಕಾಲೇಜು ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇವರ ಸ್ನೇಹಿತ ಬಳಗ, ವಿದ್ಯಾರ್ಥಿ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.