Categories
ತೀರ್ಥಹಳ್ಳಿ

ಕುಂದಾದ್ರಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆಗೆ ಪ್ಲಾನ್: ದುರಂತ ತಪ್ಪಿಸಿದ ಸ್ಥಳೀಯ ಯುವಕರು!

ಕುಂದಾದ್ರಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆಗೆ ಪ್ಲಾನ್: ದುರಂತ ತಪ್ಪಿಸಿದ ಸ್ಥಳೀಯ ಯುವಕರು!
– ಭದ್ರಾವತಿಯಿಂದ ಬಂದು ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಯತ್ನ
– ಅರ್ಚಕರು, ಯುವಕರ ಸಮಯ ಪ್ರಜ್ಞೆಗೆ ಸಲಾಂ

NAMMUR EXPRESS NEWS
ತೀರ್ಥಹಳ್ಳಿ: ಜೀವನದಲ್ಲಿ ಜಿಗುಪ್ಸೆಗೊಂಡು ಕುಂದಾದ್ರಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆಗೆ ನಿಶ್ಚಯಿಸಿದ್ದ ಯುವಕನನ್ನು ರಕ್ಷಿಸಿದ ಕುಂದಾದ್ರಿ ಯುವಕರು ಹಾಗೂ ಇಲ್ಲಿನ ಅರ್ಚಕರ ಮಾನವೀಯತೆ ಸೇವೆ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಹೌದು. ಭದ್ರಾವತಿಯವನು ಎನ್ನಲಾದ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿಶ್ಚಯಿಸಿ ಆಗುಂಬೆಗೆ ಬಂದಿರುವ ವಿಷಯ ಅರಿತ ಸ್ಥಳೀಯ ಯುವಕರು ಸುತ್ತಮುತ್ತ ಅನುಮಾನ ಬರುವ ಹಾಗೆ ಸಂಚರಿಸುತ್ತಿರುವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಬಳಿಕ ಕುಂದಾದ್ರಿ ಬೆಟ್ಟದ ಪ್ರಪಾತಕ್ಕೆ ಅಭಿಮುಖವಾಗಿ ಯುವಕನೊಬ್ಬ ಕುಳಿತಿರುವ ಬಗ್ಗೆ ದೇವಸ್ಥಾನದ ಅರ್ಚಕರಾದ ಶಾಂತಿನಾಥ್ ಭಟ್ಟರು ಗಮನಿಸಿ ದ್ದಾರೆ ಮ್ ಕೂಡಲೇ ಸ್ಥಳೀಯ ಯುವಕರಾದ ಸೌಕಿನ್ ಹಳ್ಳಿ ಬೈಲು,ಸಂಜು ನಾಬಳ, ಸೃಜನ್, ಮಣಿಕಂಠ ,ಹರೀಶ್ ಜೋಗಿತೋಟ, ಸುಮಂತ್, ರಾಹುಲ್ ವಾರಳಿ ಮತ್ತಿತರ ಸ್ನೇಹಿತರು ಬೆಟ್ಟಕ್ಕೆ ತೆರಳಿ ನಾಜೂಕಾಗಿ ಯುವಕನನ್ನು ರಕ್ಷಿಸಿ ಬೆಟ್ಟದಿಂದ ಕೆಳಗಿಳಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಯುವಕರ ಹಾಗೂ ಕುಂದಾದ್ರಿ ದೇವಾಲಯದ ಅರ್ಚಕರ ಸಮಯ ಪ್ರಜ್ಞೆ ಮತ್ತು ಕ್ಷಿಪ್ರ ಕಾರ್ಯಾಚರಣೆಗೆ ಯುವಕನ ಪೋಷಕರು ಧನ್ಯವಾದ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.