Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನ ಮಹಿಷಿ ಮಠ ದರೋಡೆಕೋರರ ಹಿಡಿದ ಪೊಲೀಸ್ ಅಧಿಕಾರಿಗಳು

ತೀರ್ಥಹಳ್ಳಿ ತಾಲೂಕಿನ ಮಹಿಷಿ ಮಠ ದರೋಡೆಕೋರರ ಹಿಡಿದ ಪೊಲೀಸ್ ಅಧಿಕಾರಿಗಳು
– ಮಾದರಿ ಆದ ಮಾಳೂರು ಪೊಲೀಸರ ಕಾರ್ಯಕ್ಷಮತೆ
– ಸಮಸ್ತ ನಾಗರೀಕರ ಪರವಾಗಿ ಮಧುರಾಜ್ ಹೆಗ್ಡೆ ಅಭಿನಂದನೆಗಳು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್‌ ಠಾಣಾ ಸರಹದ್ದಿನಲ್ಲಿರುವ ಮಹಿಷಿ ಗ್ರಾಮದ ಉತ್ತರಾಧಿ ಮಠಕ್ಕೆ ಏಪ್ರಿಲ್ 5 ರಾತ್ರಿ ಸುಮಾರು 12 ರಿಂದ 15 ದರೋಡೆ ಕೋರರ ತಂಡ ಒಳನುಗ್ಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕುಮಾರ ಆಚಾರ್ಯ ಮತ್ತು ಮಠದಲ್ಲಿದ್ದರವನ್ನು ಹೆದರಿಸಿ, ಹಲ್ಲೆ ಮಾಡಿ ಮಠದಲ್ಲಿದ್ದ 50,000 ರೂಪಾಯಿ ಹಣವನ್ನು ಮತ್ತು ಮಠದಲ್ಲಿ ಅಳವಡಿಸಿದ್ದ ಸಿ. ಸಿ ಟಿ ವಿಯ ಡಿವಿಆರ್, ಲ್ಯಾಪ್ ಟಾಪ್‌, ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಮಾಳೂರು ಠಾಣೆ ಪೊಲೀಸರು ಕೆಲವೇ ದಿನದಲ್ಲಿ ಪ್ರಕರಣದ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. ಇತ್ತೀಚಿಗೆ ನಡೆದ ಹಲವು ಪ್ರಕರಣಗಳನ್ನು ಕೆಲವೇ ದಿನಗಳಲ್ಲಿ ಬೇಧಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾ‌ರ್ ಸಾರಥ್ಯದ ಡಿವೈಎಸ್ಪಿ ಅರವಿಂದ್, ಸಿಪಿಐ ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐ ಕುಮಾರ್ ಕುರಗುಂದ, ಪಿಎಸ್ಐ ಶಿವಾನಂದ ಧರೇನವರ್, ಹೆಚ್ ಸಿ ಸುರಕ್ಷಿತ, ಸಿಪಿಸಿ ಸಂತೋಷ್ ಕುಮಾರ್ ಕೆ ಎಸ್
ವಿವೇಕ್, ಚೇತನ್ ,ವಿನಯ್ ಕುಮಾರ್ ಹಾಗೂ ಅಭಿಲಾಶ್ ಅವರ ತಂಡ ಈ ಮೂಲಕ ಯಶಸ್ವಿ ಕಾರ್ಯಾಚರಣೆ ಮಾಡಿದೆ.
ಮಾನ್ಯ ಪೊಲೀಸ್ ಅಧೀಕ್ಷಕರು ಸದರಿ ಕಾರ್ಯವನ್ನು ಪ್ರಶಂಸಿಸಿ ಕಾರ್ಯಾಚರಣೆ ತಂಡಕ್ಕೆ ಬಹುಮಾನವನ್ನು ಘೋಷಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.

ಸಮಸ್ತ ನಾಗರೀಕರ ಪರವಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಭಿನಂದನೆಗಳು

ಮಧುರಾಜ್ ಹೆಗ್ಡೆ
ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು
ತೂದೂರು ಗ್ರಾಮ ಪಂಚಾಯತ್
ಬಿಜೆಪಿ ನಾಯಕರು
ತೀರ್ಥಹಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.