Categories
ತೀರ್ಥಹಳ್ಳಿ

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಚುರುಕು..!

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ ಚುರುಕು..!
– ಕಿರು ಸೇತುವೆ ಕಾಮಗಾರಿ
-ಪ್ರಾಂಗಣಕ್ಕೆ ಚಪ್ಪರ ಅಲಂಕಾರ!
– ತುಂಗಾ ಕಮಾನು ಸೇತುವೆಗೆ ಸುಣ್ಣ ಬಣ್ಣ!
– ಜಾತ್ರೆ ಬಯಲಿಗೆ ಬಂದಿಳಿದ ಜೈಂಟ್ ವೀಲ್!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಜನವರಿ 11, 12, 13ರಂದು ಸುಮಾರು 18 ಲಕ್ಷ ರೂ ವೆಚ್ಚದಲ್ಲಿ ಅದ್ಧೂರಿ ಜಾತ್ರೆ ನಡೆಸಲಾಗುವುದು. ಜಾತ್ರೆಗೆ ಈಗಾಗಲೇ ಸಿದ್ಧತೆ ಚುರುಕುಗೊಂಡಿದ್ದು, ಪಟ್ಟಣದೆಲ್ಲೆಡೆ ಸಿದ್ಧತೆ ನಡೆಯುತ್ತಿದೆ. ತುಂಗಾ ನದಿಯ ರಾಮಮಂಟಪಕ್ಕೆ ಹೋಗುವ ದಾರಿಯಲ್ಲಿ ನೂತನವಾಗಿ ಕಿರು ಸೇತುವೆಯ ಕಾಮಗಾರಿ ನಡೆಯುತ್ತಿದೆ. ರಾಮಮಂಟಪಕ್ಕೆ ಹೋಗಲು ಮರಳು ಚೀಲ ಹಾಕಲಾಗುತಿತ್ತು. ಆದರೆ ಈ ಬಾರಿ ಕಬ್ಬಿಣದ ನೂತನ ಕಿರು ಸೇತುವೆ ನಿರ್ಮಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮವಾಗಿ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ತೀರ್ಥಹಳ್ಳಿಯ ಪ್ರಸಿದ್ಧ ಜಯಚಾಮರಾಜೇಂದ್ರ ಕಮಾನು ಸೇತುವೆಯನ್ನು ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಬಳಿಯಲಾಗುತ್ತಿದೆ. ಜಾತ್ರೆಯ ಬೀದಿಯಲ್ಲಿ ಅಂಗಡಿ ಮಳಿಗೆಗಳಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು ಜಾತ್ರೆಯ ಬೀದಿಯನ್ನು ಸಿಂಗರಿಸಲಾಗುತ್ತಿದೆ. ಗೇಮ್ ಜೋನ್ ನ ಜೈಂಟ್ ವೀಲ್, ಡಿಸ್ಕೋ, ಕೊಲಂಬಸ್, ಬ್ರೇಕ್ ಡಾನ್ಸ್ ಮುಂತಾದವುಗಳನ್ನು ಜೋಡಿಸಲಾಗುತ್ತಿದೆ. ಮೂರು ದಿನಗಳ ಜಾತ್ರೆಯ ಹಬ್ಬಕ್ಕೆ ಭರ್ಜರಿ ತಯಾರಿಯಾಗುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ತೋರಣಗಳನ್ನು ಹಾಕಲಾಗಿದೆ. ಅಡುಗೆಯ ವ್ಯವಸ್ಥೆಯನ್ನು ಈಗಾಗಲೇ ಅಡುಗೆ ಸಮಿತಿಯವರು ಮಾಡುತ್ತಿದ್ದಾರೆ.‌ ಹೊರೆಕಾಣಿಕೆ ಈಗಾಗಲೇ ಹಳ್ಳಿ ಹಳ್ಳಿಗೆ ಹೋಗಿ ಕಾಣಿಕೆ ಸಂಗ್ರಹಿಸುತ್ತಿದೆ.‌ ಜಾತ್ರೆಯ ಝಳಕು ಈಗಾಗಲೇ ತೀರ್ಥಹಳ್ಳಿ ನಗರದಲ್ಲಿ ತುಂಬಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.