ಕುಡಿಯುವ ನೀರು ಯೋಜನೆ ಮಾಹಿತಿ ರಹಸ್ಯ ಏಕೆ?
– ಭೀಮನಕಟ್ಟೆ ಬಳಿ ಯೋಜನೆ ವಿರೋಧಿಸಿ ಪ್ರತಿಭಟನೆ
– ಹೋರಾಟಗಾರರಿಗೆ ರೈತ ಸಂಘ ಸಾಥ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಕಸಬಾ ಹೋಬಳಿ ಕೋಡ್ಲು ಗ್ರಾಮದ ಸ.ನಂ. 142ರಲ್ಲಿ, ಜಲ, ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮುಲುಬಾಗಿಲು ಹಾಗೂ ಇತರೆ ಜನವಸತಿಗಳ ಬಹು ಗ್ರಾಮದ ಕುಡಿಯುವ ನೀರು ಅನುಷ್ಠಾನಗೊಳಿಸಲು 4-00 ಎಕರೆ ಜಮೀನು ಸ್ವತ್ತನ್ನು ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇವರಿಗೆ ವಾಟರ್ಟ್ರೀಟ್ ಮೆಂಟ್ ಪ್ಲಾಂಟ್ ಹಾಗೂ ಜಾಕ್ ವೆಲ್ ನಿರ್ಮಾಣದ ಉದ್ದೇಶಕ್ಕೆ ಜಮೀನು ಮಂಜೂರು ಮಾಡಲಾಗಿದೆ. ಮಾಲತಿ ನದಿ ಮತ್ತು ತುಂಗಾ ನದಿ ಸೇರುವ ಭೀಮೇಶ್ವರ ಸಂಗಮದಲ್ಲಿ ಜಾಗದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡುತ್ತಿರುವುದು ಈ ನದಿಯ ನೀರನ್ನು ಉಪಯೋಗಿಸಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಒಟ್ಟು ಆರು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರಿಗೆ ಮಾಲತಿ, ಮತ್ತು ಆಧಾರದಲ್ಲಿ ಕೃಷಿ ಚಟುವಟಿಕೆ ಮತ್ತುಕುಡಿಯಲು ಉಪಯೋಗಿಸಿಕೊಂಡು ಬಂದಿದ್ದು ಈ ಆರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ರೈತರ ಕೃಷಿ ಚಟುವಟಿಕೆಗೆ ಮಾಲತಿ ಮತ್ತು ತುಂಗಾ ಅಧಾರವಾಗಿರುತ್ತದೆ. ಇಲ್ಲಿನ ವಾಸಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ನೀರಿನ ಸೌಲಭ್ಯವನ್ನು ಮಾಲತಿ ಮತ್ತು ತುಂಗಾ ನದಿಯಿಂದ ನೀಡುತ್ತಿದ್ದಾರೆ.
ನದಿಯ ನೀರು ಕುಡಿಯುವ ಮೇಲ್ಕಂಡಂತೆ ಕೋಡು ಗ್ರಾಮದ ಸವರಿ 142ರಲ್ಲಿ 4-00 ಎಕರೆ ಜಮೀನು ಮಂಜೂರು ಮಾಡಿರುವ ಬಗ್ಗೆ ಆರ್ ಟಿ ಸಿ ಇಂಡೀಕರಣ ಗೊಂಡಿರುವುದಿಲ್ಲ. ಅದ್ದರಿಂದ ತಾವುಗಳು ದಯಾ ಮಾಡಿ, ಸದರಿ ಮಂಜೂರಾತಿ ಬಗ್ಗೆ ಮ್ಯುಟೇಷನ್ ದಾಖಲೆ ನಮೂದು ಮಾಡುವುದು ಮತ್ತು ಇತರೆ ದಾಖಲೆ ನಮೂದು ಮಾಡಬಾರದು ಎಂದು ಭೀಮೇಶ್ವರ ಸಂಗದು ಉಳಿಸಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಯಾವ ಮಾಹಿತಿಗಳೂ ಸ್ಥಳೀಯ ರೈತ ಬಾಂಧವರಿಗೆ ತಿಳಿದಿರುವುದಿಲ್ಲ. ಇವರುಗಳ ನಡೆ ನುಡಿಯಿಂದ ರೈತ ಕುಟುಂಬಗಳಿಗೆ ಸಂದೇಹ ಬಂದು ಈ ಜಾಡನ್ನು ಹಿಡಿದು ಹೊರಟಾಗ ಅನೇಕ ರೈತ ವಿರೋಧಿ ಹೆಜ್ಜೆಗಳು ಕಂಡು ಬಂದಿರುತ್ತದೆ. ಎಚ್ಚೆತ್ತು ಕೊಂಡ ರೈತ ಬಾಂಧವರು ಪಕ್ಷಾತೀತವಾಗಿ ಸಂಘಟನೆಗೊಂಡು ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡಿರುತ್ತೇವೆ. ಭೀಮನಕಟ್ಟೆ ಸಂಗಮವನ್ನು ಈ ಕಾಮಗಾರಿಗೆ ಬಳಸಿಕೊಳ್ಳುವುದರಿಂದ ಪ್ರಕೃತಿ ದತ್ತವಾಗಿ ಸಿಕ್ಕಿರುವ ಪಾವಿತ್ರ್ಯತೆ ಕಳೆದು ಕೊಳ್ಳುವ ಭೀತಿ ಸುತ್ತುಮುತ್ತಲ ರೈತರಿಗೆ ಅಗಿದೆ. ಮಾಹಿತಿಯನ್ನು ನಿಯಮನುಸಾರ ನೀಡಿರುವುದಿಲ್ಲ. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೊರಕಿಸಿಕೊಡಬೇಕು.
ಯೋಜನೆಯನ್ನು ಸುಮಾರು 20 ಕ್ಕೂ ಹೆಚ್ಚು ನದಿ ತಟದ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ನಮ್ಮ ತಾಲ್ಲೂಕಿನಲ್ಲಿ ಐದಾರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನ ಮಾಡಿದ್ದೆ ಅದಲ್ಲಿ ನಮ್ಮ ತಾಲ್ಲೂಕಿಗೆ ಅನುಕೂಲ ಆಗುತ್ತದೆ. ಈ ಬಗ್ಗೆ ಗಮನಹರಿಸಬೇಕು ಎಂದು ಹೋರಾಟಗಾರರು ಅಗ್ರಹಿಸಿದ್ದಾರೆ.
ರಾಜಕೀಯ ಬಣ್ಣ ಬೇಡ: ಕೋಡ್ಲು ವೆಂಕಟೇಶ್
ಹೋರಾಟಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟುವುದು ಬೇಡ. ಸರ್ಕಾರದ ಯೋಜನೆ ಅನುಷ್ಠಾನವಾದರೆ ಎಂದರೆ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ಇದರ ಲಾಭ ಹೆಚ್ಚಾಗಿ ಲಭಿಸುತ್ತದೆ. ಈ ಯೋಜನೆಯಲ್ಲಿಯೂ ಜನರು, ಗ್ರಾಮಸ್ಥರ ಉದ್ದಾರ ನಗಣ್ಯ. ಅಭಿವೃದ್ಧಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಜಾರಿಯಾಗುತ್ತಿದ್ದು ಇದೊಂದು ದೊಡ್ಡ ಮಾಫಿಯಾ ರೀತಿಯಲ್ಲಿ ಬೆಳೆದಿದೆ. ಮಲೆನಾಡಿನ ನಿಸರ್ಗ, ನೆಲ ದೋಚುವ ಹುನ್ನಾರ ಎಂದು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್ ದೂರಿದರು.
