ತೀರ್ಥಹಳ್ಳಿಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆಯ ಆಕ್ರೋಶ…!!
– ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯ ಜೊತೆಗೆ
ತಾಲೂಕು ದಂಡಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ
– ಕೇಂದ್ರ ಸರ್ಕಾರ ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹ
NAMMUR EXPRESS NEWS
ತೀರ್ಥಹಳ್ಳಿಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ಕಾಶ್ಮೀರ, ಟೆರರಿಸ್ಟ್ ಅಟ್ಯಾಕ್ ಖಂಡಿಸಿ ಪಟ್ಟಣದಲ್ಲಿ ಏಪ್ರಿಲ್ 24 ರಂದು ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯನ್ನು ನಡೆಸಿ, ನಂತರ ತಾಲೂಕು ದಂಡಾಧಿಕಾರಿಗೆ ಮನವಿ ಪತ್ರ ನೀಡಲಾಯಿತು.
ಹೆದ್ದೂರ್ ನವೀನ್ ಮಾತನಾಡಿ ಪ್ರತಿಯೊಂದು ಕುಟುಂಬಗಳಿಗೂ ಕೂಡ ಭಯೋತ್ಪಾದನೆ ದಾಳಿ ಆಗುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ನಾವು ಒಳ್ಳೆಯ ವಿದ್ಯಾಭ್ಯಾಸ ಕೊಡಬಹುದು ಆದರೆ ಸಮಾಜದಲ್ಲಿ ಇರುವಂತಹ ವಾತಾವರಣ ಸರಿ ಇಲ್ಲ ಎಂದರೆ ನಮ್ಮ ಬದುಕು ಚೆನ್ನಾಗಿ ಇರುವುದಿಲ್ಲ. ನಮ್ಮ ದೇಶ ಯಾವುದೇ ದೇಶಕ್ಕೂ ಆಕ್ರಮಣ ಕೂಡ ಮಾಡಿಲ್ಲ ವಸುದೈವ ಕುಟುಂಬಕಂ ಎನ್ನುವ ಸಂದೇಶವನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದೆ. ಕೇಂದ್ರ ಸರ್ಕಾರದವರು ಕಠಿಣವಾದ ಕ್ರಮವನ್ನು ಕೈಗೊಳ್ಳಲೇಬೇಕು ಎಂದು ತಿಳಿಸಿದ್ದಾರೆ.
ದಿನೇಶ್ ಭಾರತೀಪುರ ಮಾತನಾಡಿ ಶಿವಮೊಗ್ಗದ ಉದ್ಯಮಿ ಭಯೋತ್ಪಾದಕರ ದಾಳಿಗೆ ಬಲಿಯಾಗಿರುವುದು ಅವುಗಳ ಬೇರನ್ನು ನಾವು ಹುಡುಕುತ್ತಾ ಹೋದರೆ ಖಂಡಿತವಾಗಿಯೂ ನಮಗೆ ಉತ್ತರ ಎಂಬುದು ಸಿಗುತ್ತೆ. ಅಲ್ಲಿ ಯಾವುದೇ ರೀತಿಯ ಜಾತಿ ಎಂಬುದು ಕೇಳಲಿಲ್ಲ, ಕೇಳಿರುವುದು ಬರಿ ಧರ್ಮ ಅಷ್ಟೇ , ಆ ಧರ್ಮದಿಂದಲೇ ಈ ರೀತಿಯ ಘಟನೆ ನಡೆದು ಹೋಗಿದೆ. ಹಿಂದೂ ಸಮಾಜಕ್ಕೆ ಮಾಡಿರುವಂತಹ ಇದು ದೊಡ್ಡ ಆಘಾತ. ನಾವೆಲ್ಲ ಭಾರತಾಂಬೆ ಮಾತೆಯ ಮಕ್ಕಳು ಹಿಂದೂ ಎಲ್ಲರೂ ಒಗ್ಗಟ್ಟಾಗಬೇಕು. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಕ್ರಮವನ್ನು ಕೈಗೊಳ್ಳಲೇಬೇಕು.
ಮಾನವೀಯತೆಯ ಅವಶೇಷವೂ ಇಲ್ಲದೇ ಬರ್ಬರವಾಗಿ ಪ್ರವಾಸಿಗರನ್ನು ಅದರಲ್ಲೂ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಧರ್ಮವನ್ನು ಕೇಳಿ, ಧರ್ಮವನ್ನು ಉಲ್ಲೇಖಿಸಿ ಹತ್ಯೆ ಮಾಡುವಂತಹ ಅನಾಗರೀಕತೆಯನ್ನು ಅಮಾನವೀಯತೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕರು ತೋರಿದ್ದಾರೆ. ಭಯೋತ್ಪಾದಕರಿಗೆ ಆಶ್ರಯ ನೀಡುವಂತಹ ಮಾನಸಿಕತೆಗಳು ಈ ದೇಶದಲ್ಲೂ ಇದ್ದಾರೆ ಎನ್ನುವಂತದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ಆ ಶಸ್ತ್ರಾಸ್ತ್ರ ಉಳ್ಳವನ ವಿರುದ್ಧ ಸೆಣಸಾಡುವುದು ಧರ್ಮವೂ ಹೌದು. ಆದರೆ ಶಸ್ತ್ರಾಸ್ತ್ರ ಉಳ್ಳವರು ಯಾವುದೇ ಅಸ್ತ್ರ ಹೊಂದಿರದ ಅಮಾಯಕರ ಮೇಲೆ ಎರಗುವುದು, ದಾಳಿ ಮಾಡುವುದು ಹ್ಯಾ ಮಾಡುವುದು ಹೇಡಿಯ ಲಕ್ಷಣವಾಗಿರುತ್ತದೆ. ಇಂತಹ ಹೇಡಿತನದ ವರ್ತನೆಯನ್ನು ಪಾಪಿ ಪಾಕಿಸ್ತಾನ ಭಯೋತ್ಪಾದಕರ ಮೂಲಕ ಮಾಡಿಕೊಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಜಗತ್ತಿನ ಮೂರನೇ ಅತೀ ದೊಡ್ಡ ಸೈನ್ಯ ಶಕ್ತಿ ಹೊಂದಿರುವ ನಾವು ಐದನೇ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ನಾವು ಶತ್ರುವೇಶದ ಹೇಡಿತನದ ಪಿತೂರಿಯ ವರ್ತನೆಯನ್ನು ಸಹಿಸಿಕೊಂಡು ಮುಂದುವರೆಯುವುದು ಸಮಂಜಸವಲ್ಲ ಎನಿಸುತ್ತದೆ. ಸದೃಢ ನಾಯಕತ್ವ ಹೊಂದಿರುವ ಭಾರತದ ಸರ್ಕಾರಕ್ಕೆ ನಾವು ಸೂಚಿಸಬೇಕೆನ್ನುವ ನಮ್ಮ ಮನವಿ ಏನೆಂದರೆ, ಯಾವುದೇ ಮುಲಾಜಿಲ್ಲದೇ ಭಯೋತ್ಪಾದಕರನ್ನು, ಭಯೋತ್ಪಾದನೆಯನ್ನು ಭಯೋತ್ಪಾದನೆಯ ಪೋಷಕರನ್ನು ಮೂಲದಿಂದಲೇ ಕಿತ್ತೆಸೆಯುವ ದೃಢ ಸಂಕಲ್ಪಕ್ಕೆ ಸರ್ಕಾರ ಕ್ರಮ ಕೈಗೊಳ್ಳಲು ಈ ಕೂಡಲೇ ಆದೇಶಿಸಬೇಕಾಗಿ ತೀರ್ಥಹಳ್ಳಿ ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಮತ್ತು ಸಭೆ ನಡೆಸಿ ಮಾನ್ಯ ತಹಸೀಲ್ದಾರರ ಮೂಲಕ ಈ ಮನವಿ ಮಾಡಲಾಗುತ್ತಿದೆ.
ಪ್ರತಿಭಟನಾ ಸಭೆಯಲ್ಲಿ ಆರ್ ಎಸ್ ಎಸ್ ಪ್ರಮುಖರಾದ ದಿನೇಶ್ ಭಾರತಿಪುರ, ಶ್ರೀವಸ್ಸ, ಪರಿವಾರದ ಪ್ರಮುಖರು, ಹೆದ್ದೂರ್ ನವೀನ್, ಅಭಿನಂದನ್,ಸಾಲೆಕೊಪ್ಪ ರಾಮಚಂದ್ರ, ನಾಗರಾಜ್ ಶೆಟ್ಟಿ, ಚಂದುಹಳ್ಳಿ ಸೋಮಶೇಖರ್, ಮಧ್ವರಾಜ್ ಹೆಗಡೆ, ಸೊಪ್ಪುಗುಡ್ಡೆ ರಾಘವೇಂದ್ರ, ಗಬಡಿ ಪ್ರದೀಪ, ಮತ್ತು ಸಂಘಟನೆಯ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.
