Categories
ತೀರ್ಥಹಳ್ಳಿ

ಮಳೂರಿನಲ್ಲಿ ಸಾರ್ವಜನಿಕ ರಂಗ ಮಂದಿರ ಉದ್ಘಾಟನೆ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಮಳೂರಿನಲ್ಲಿ ಸಾರ್ವಜನಿಕ ರಂಗ ಮಂದಿರ ಉದ್ಘಾಟನೆ

– ದೇವಂಗಿ: ನೂತನ ಆಟೋ ನಿಲ್ದಾಣ ಉದ್ಘಾಟನೆ
– ಮೇಲಿನ ಕುರುವಳ್ಳಿ: ಶ್ರೀ ವರಸಿದ್ದಿ ವಿನಾಯಕ ಗೆಳೆಯರ ಬಳಗ ಸತ್ಯನಾರಾಯಣ ವೃತ

NAMMUR EXPRESS NEWS
ತೀರ್ಥಹಳ್ಳಿ: ಹಾರೋಗೊಳಿಗೆ ಗ್ರಾಮ ಪಂಚಾಯ್ತಿಯ ಅಂದಗೆರೆ ಗ್ರಾಮದ ಮಳೂರಿನಲ್ಲಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ರಂಗಮಂದಿರ ಉದ್ಘಾಟನೆಗೊಂಡಿತು.
ರಂಗ ಮಂದಿರ ನಿರ್ಮಾಣಕ್ಕೆ 5 ಲಕ್ಷ ಅನುದಾನ ಕೊಡಿಸಿದ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ರಂಗ ಮಂದಿರ ಉದ್ಘಾಟನೆ ಮಾಡಿದರು. ಹಾರೋಗೋಳಿಗೆ ಗ್ರಾಮ ಪಂಚಾಯ್ತಿಯ ಸದಸ್ಯರಾದ ಪ್ರಸನ್ನ ಮಳೂರು, ಮುಖಂಡರಾದ ಹೆದ್ದೂರು ನವೀನ್, ಗ್ರಾಮಸ್ಥರಾದ ಚಂದ್ರಪ್ಪಗೌಡ್ರು ಅಂಕಿನಕಟ್ಟೆ, ಪ್ರೇಮ್ ಕುಮಾರ, ಡಾ.ಪೃಥ್ವಿ ಅಂಕಿನ ಕಟ್ಟೆ ಸಸಿತೋಟ ಮಂಜುನಾಥ್, ವಾಸುದೇವ ಹಾರೋಗೊಳಿಗೆ, ಶಿವ ಕುಮಾರ್ ಶುಂಠಿಕಟ್ಟೆ, ಗುತ್ತಿಗೆದಾರ ಕಿಶನ್ ಸ್ವರೂಪ ಬಸವಾನಿ ಮತ್ತು ಗಣಪತಿ ಸೇವಾ ಸಮಿತಿ ಸದಸ್ಯರು, ಮಳೂರು ಹಾಗೂ ಅಂದಗೆರೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜತೆಗೆ ಅದ್ದೂರಿ ಗಣೇಶೋತ್ಸವ ಕೂಡ ನಡೆಯಿತು.

ದೇವಂಗಿ ನೂತನ ಆಟೋ ನಿಲ್ದಾಣ ಉದ್ಘಾಟನೆ

ತೀರ್ಥಹಳ್ಳಿ ತಾಲೂಕಿನ ದೇವಂಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಟೋ ನಿಲ್ದಾಣವನ್ನು ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು
ದೇವಂಗಿ ಪಂಚಾಯತ್ ಅಧ್ಯಕ್ಷರಾದ ಗಿರಿಜಾ, ಉಪಾಧ್ಯಕ್ಷರಾದ ಅನ್ನಪೂರ್ಣ, ಮುಖಂಡರಾದ ನವೀನ್ ಹೆದ್ದೂರು, ದೇವಂಗಿ ಮನುದೇವ್, ಅಶೋಕ್ ಮಹೇಶ್, ರಾಘವೇಂದ್ರ, ಮತ್ತಿತರರು ಉಪಸ್ಥಿತರಿದ್ದರು

ಮೇಲಿನಕುರುವಳ್ಳಿಯಲ್ಲಿ ಸತ್ಯನಾರಾಯಣ ವೃತ

ಶ್ರೀ ವರಸಿದ್ದಿ ವಿನಾಯಕ ಗೆಳೆಯರ ಬಳಗ ಮೇಲಿನಕುರುವಳ್ಳಿ ಇವರ ಆಶ್ರಯದಲ್ಲಿ ನಡೆಯುತ್ತಿರುವ 12 ನೆ ವರ್ಷದ ಗಣೇಶೋತ್ಸವದ ಅಂಗವಾಗಿ ದಿನಾಂಕ 31/08/2025 ರಂದು ಬೆಳಿಗ್ಗೆ 9.30 ಕ್ಕೆ ಗಣಹೋಮ ಸಾಮೂಹಿಕ ಸತ್ಯನಾರಾಯಣ ವ್ರತ ಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮವಿದ್ದು ಈ ದೇವತಾ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಅತಿಹೆಚ್ಚಿನ ಸಂಖ್ಯೇಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ವರಸಿದ್ದಿವಿನಾಯಕ ಗೆಳೆಯರ ಬಳಗ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.