Categories
ತೀರ್ಥಹಳ್ಳಿ

ಬಿ.ಎಸ್ ವಿಶ್ವನಾಥನ್ ಅವರಿಗೆ ಸಾರ್ವಜನಿಕ ನುಡಿ ನಮನ!

ಬಿ.ಎಸ್ ವಿಶ್ವನಾಥನ್ ಅವರಿಗೆ ಸಾರ್ವಜನಿಕ ನುಡಿ ನಮನ!
– ತೀರ್ಥಹಳ್ಳಿಯ ಕೆಟಿಕೆಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ
– ತೀರ್ಥಹಳ್ಳಿಯ ಹಲವು ಸಂಘಟನೆಗಳಿಂದ ಸಂತಾಪ

NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಇಹಲೋಕ ತ್ಯಜಿಸಿದ ಧೀಮಂತ ವಿಶ್ವ ಸಹಕಾರಿ, ಸಹಕಾರಿ ಭೀಷ್ಮ , ತೀರ್ಥಹಳ್ಳಿಯ ಹೆಮ್ಮೆಯ ಪುತ್ರ ಡಾ. ಬಿ.ಎಸ್. ವಿಶ್ವನಾಥನ್ ಅವರಿಗೆ ನುಡಿ ನಮನ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮವು ತೀರ್ಥಹಳ್ಳಿಯ ಕುಶಾವತಿಯ ಕೆ.ಟಿ.ಕೆ. ಕಲ್ಯಾಣ ಮಂದಿರದಲ್ಲಿ ಸೆ.27 ರಂದು ಬುಧವಾರ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಅವರ ಸೇವೆಯನ್ನು ಸ್ಮರಿಸಿದರು. ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ, ಪಟ್ಟಣ ಪಂಚಾಯತಿ, ತೀರ್ಥಹಳ್ಳಿ , ಮಲ್ನಾಡ್ ಕ್ಲಬ್ , ಪುರಂದರ ವೇದಿಕೆ,‌ ತೀರ್ಥಹಳ್ಳಿ , ತಾ. ಕನ್ನಡ ಸಾಹಿತ್ಯ ಪರಿಷತ್ತು, ತಾ. ಕಾರ್ಯನಿರತ ಪತ್ರಕರ್ತರ ಸಂಘ, ತುಂಗಾ ವಿದ್ಯಾವರ್ಧಕ ಸಂಘ (ರಿ), ತೀರ್ಥಹಳ್ಳಿ, ತಾ. ಕೃಷಿಕ ಸಮಾಜ, ತೀರ್ಥಹಳ್ಳಿ, ವಿಹಂಗಮ ಪರಿಸರ ಅಧ್ಯಯನ ಕೇಂದ್ರ,  ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ, ಮಲೆನಾಡು ಒಕ್ಕಲಿಗರ ಪತ್ತಿನ ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿ, ತಾಲೂಕು ರೈತ ಸಂಘ, ರೋಟರಿ, ಲಯನ್ಸ್, ಜೇಸಿ ಸೇರಿದಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮತ್ತು  ವಿಶ್ವನಾಥ್ ಅವರ ಹಿತೈಷಿಗಳಿಂದ ಸಂತಾಪ ವ್ಯಕ್ತವಾಯಿತು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ,ಅನೇಕ ಗಣ್ಯರನ್ನು ನಾವು ಇಂದು ಸ್ಮರಿಸುತ್ತೇವೆ. ಅದರಲ್ಲಿ ವಿಶ್ವನಾಥ್ ಅವರು ಒಬ್ಬರು. ಹಾಗಾಗಿ ಅವರನ್ನು ನಾವು ಬದುಕಿಸಿಡಬೇಕು. ದೈಹಿಕವಾಗಿ ನಾವು ಬದುಕಿಸಿಡಲು ಆಗುವುದಿಲ್ಲ, ಆದ್ದರಿಂದ ಅವರ ನಡವಳಿಕೆ,ಅವರ ಕೆಲಸಗಳನ್ನು ನಾವು ಎಲ್ಲರಿಗೂ ಪರಿಚಯಿಸಿ ಅವರು ನಮ್ಮ ನಡುವೆ ಬದುಕಿರುವಂತೆ ಮಾಡಬಹುದು ಎಂದರು. ಹಿರಿಯ ಪ್ರಗತಿಪರ ಚಿಂತಕ ಕಡಿದಾಳು ದಯಾನಂದ್ ರವರು ಮಾತನಾಡಿ, ಶಿಸ್ತು ಸಮಯ ಪ್ರಜ್ಞೆಯ ಮೂಲಕ ವ್ಯವಸ್ಥೆಗೆ ಬೇಕಾದ ಶಕ್ತಿ ನೀಡುತ್ತಿದ್ದರು, ಸಾಹಿತ್ಯ ಸಂಗೀತದ ಹವ್ಯಾಸ ರೂಢಿಸಿಕೊಂಡಿದ್ದ ಅನನ್ಯ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಕೌಲಾನಿ ಧರ್ಮಯ್ಯ, ನಾಗರಾಜ್ ಶೆಟ್ಟಿ, ಕೆಸ್ತೂರು ಮಂಜುನಾಥ್, ಕಡ್ತೂರು ದಿನೇಶ್, ಸಂದೇಶ್ ಜವಳಿ, ಟಿ ಜೆ ಸುಂದರೇಶ್, ಹಾಲಿಗೆ ನಾಗರಾಜ್, ಪ್ರಸನ್ನ ಕುಮಾರ್ ಹೆಚ್ ಸಿ, ಸೃಜನಿ ಟಿ ಗೌಡ, ಮೋಹನ್ ಮುನ್ನೂರು, ರಮೇಶ ಶೆಟ್ಟಿ, ಸರಳ ಲೋಕೇಶ್, ತನಿಕಲ್ ರಾಜಣ್ಣ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.