Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗಮನ ಸೆಳೆದ ಪುನೀತ್ ನಮನ

ತೀರ್ಥಹಳ್ಳಿಯಲ್ಲಿ ಗಮನ ಸೆಳೆದ ಪುನೀತ್ ನಮನ
– ಸಾಧಕರಿಗೆ ಹಾಗೂ ಸೇವಕರಿಗೆ ಸನ್ಮಾನ, ಸಂಗೀತ ಸಂಜೆ
– ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿದ ತಹಶೀಲ್ದಾರ್ ರಂಜಿತ್ ಮತ್ತು ಗಣ್ಯರು
– ಹಳ್ಳಿಗಳ ಶಾಲೆಯ ಮಕ್ಕಳಿಗೆ ಸಿಹಿ ವಿತರಣೆ

ತೀರ್ಥಹಳ್ಳಿ : ಪುನೀತ್ ಬ್ರಿಗೇಡ್ ಕರ್ನಾಟಕ, ವಿಶ್ವಮಾನವ ಕನ್ನಡ ವೇದಿಕೆ ತೀರ್ಥಹಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಹಾಗೂ ನಮ್ಮೂರ್ ಎಕ್ಸ್ಪ್ರೆಸ್ ಮೀಡಿಯಾ ಸಹಯೋಗದೊಂದಿಗೆ ತೀರ್ಥಹಳ್ಳಿಯ ಕುವೆಂಪು ಲೇಔಟ್ ನಲ್ಲಿರುವ ಟಿ ಎಸ್ ಟಿ ಹಾಲ್ನಲ್ಲಿ ಸೋಮವಾರ ದಿ.ಪುನೀತ್ ರಾಜ್ ಕುಮಾರ್ ಅವರ 50 ವರ್ಷದ ಜನ್ಮದಿನದ ಪ್ರಯುಕ್ತ ಪುನೀತ್ ನಮನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ತಹಶೀಲ್ದಾರ್ ರಂಜಿತ್ ಅವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವ ಜನತೆ ಸಮಾಜದ ಸೇವೆಗೆ ಬದ್ಧರಾಗಬೇಕು. ಯುವ ಜನತೆಗೆ ಪುನೀತ್ ಅವರು ಮಾದರಿಯಾಗಿದ್ದಾರೆ. ಮುಂದೆ ಎಲ್ಲರೂ ಸೇರಿ ಈ ಸಮಾಜವನ್ನು ಕಟ್ಟಲು ಕೈಜೋಡಿಸೋಣ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕರ್ಕಿ ಅವರು ಪುನೀತ್ ಅವರ ಸರಳ ವ್ಯಕ್ತಿತ್ವದ ಬಗ್ಗೆ ಬಣ್ಣಿಸುವ ಜೊತೆಗೆ ಇಂದಿನ ಸಮಾಜದ ಸೇವೆಗಾಗಿ ಎಲ್ಲರೂ ತಮ್ಮ ಸಮಯವನ್ನು ಮೀಸಲಿಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪುನೀತ್ ಬ್ರಿಗೇಡ್ ಸಂಸ್ಥೆಯ ಗೌರವ ಅಧ್ಯಕ್ಷರಾದ ಚಿಡುವ ಸೂರ್ಯನಾರಾಯಣ, ರಾಜ್ಯ ಶಿಕ್ಷಕರ ಪತ್ತಿನ ಸೊಸೈಟಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಪ್ರಮುಖರಾದ ಮುಡುಬ ರಾಘವೇಂದ್ರ, ತಾಲೂಕು ಅಧ್ಯಕ್ಷರಾದ ವಿಶಾಲ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಶಾಲಿನಿ ನಾಗರಾಜ್, ಧಾರ್ಮಿಕ ಕ್ಷೇತ್ರದ ಪ್ರಮುಖರಾದ ಕಾಶಿ ದೀಕ್ಷಿತ್ ಭಟ್, ಪುನೀತ್ ಬ್ರಿಗೇಡ್ ಸಂಸ್ಥೆ ಸಂಚಾಲಕರಾದ ಕುಪ್ಪಳಿ ಸುಧಾಕರ್ ಅವರು ಮಾತನಾಡಿದರು. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ರಾಘವೇಂದ್ರ, ಕೃಷ್ಣ ಮೂರ್ತಿ, ಉಮೇಶ್, ವಿಶಾಲಾಕ್ಷಿ, ಪುನೀತ್ ಬ್ರಿಗೇಡ್ ಸಂಸ್ಥೆಯ ರಾಘವೇಂದ್ರ ಚಿಡುವ, ಮೋಹನ್, ಎಸ್ ಎನ್ ಜಿ ವಿ ಪ್ರಮುಖರಾದ ಹೊದಲ ಶಿವು, ದಿನೇಶ್ ಯಡೂರು, ಪ್ರಶಾಂತ್ ಹಳ್ಳದಬೈಲು, ಪೂರ್ಣೇಶ್ ಪೂಜಾರಿ, ಸುಜಯ ಕಾಂತರಾಜ್ ಸೇರಿ ಅನೇಕರು ಹಾಜರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಮಂದಿಗೆ ಪುನೀತ್ ಸೇವಾ ಪ್ರಶಸ್ತಿ ಮತ್ತು 10 ಮಂದಿ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತೀರ್ಥಹಳ್ಳಿಯ ಪ್ರಸಿದ್ಧ ಗಾಯಕರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಿರೂಪಕಿ ಅಮೃತಾ ಮಂಜುನಾಥ್ ನಿರೂಪಿಸಿದರು.
ಶಾಲೆಗಳಲ್ಲಿ ಸಿಹಿ ಹಂಚಿಕೆ: ಗಡಿಕಲ್ ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ ಪ್ರೌಢ ಶಾಲೆ, ಬಿಜಿಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಆಲೇಮನೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಿಹಿ ಹಂಚಲಾಯಿತು. ವಿಶ್ವಮಾನವ ವೇದಿಕೆ, ಪುನೀತ್ ಬ್ರಿಗೇಡ್ ಸಂಸ್ಥೆಯ ಸಂಚಾಲಕರಾದ ಸುಧಾಕರ್ ಕುಪ್ಪಳ್ಳಿ ಉಮೇಶ್ ಕರ್ಕಿ ಬೈಲ್ ಹಾಜರಿದ್ದರು. ಬಿಜಿಎಸ್ ಶಾಲೆಯಲ್ಲಿ ಅಣ್ಣಯ್ಯ ಹಾಗೂ ಹಾಗೂ ಸತೀಶ್, ಶಾಲೆಯ ಶಿಕ್ಷಕ ಶಿಕ್ಷಕರು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದ ಪ್ರಾಯೋಜಕರು: ಮನೋಜ್ ಮೆಡಿಕಲ್, ಗಡಿಕಲ್

ಪುನೀತ್ ಸೇವಾ ಪ್ರಶಸ್ತಿ-2025

ಶಿವಾನಂದ ಕರ್ಕಿ ( ಸಾಹಿತ್ಯ)
ರಾಘವೇಂದ್ರ ಭಟ್ ( ಬಸವಾನಿ ವೃದ್ದಾ ಶ್ರಮ)
ಶಿವಪ್ಪ ( ನಿವೃತ್ತ ಯೋಧ)
ಸುರಾನಿ ಮ್ಯಾತ್ಯು ( ರಂಗಕರ್ಮಿ)
ಉಮೇಶ್ ಕರ್ಕಿಬೈಲು ( ಜಲ ತಜ್ಞರು)
ಕಾಶಿ ಧೀಕ್ಷಿತ್ ( ಧಾರ್ಮಿಕ ಸೇವೆ)
ನೇತ್ರಾವತಿ ( ಮಹಿಳಾ ಸಾಹಿತ್ಯ)
ಅಭಿಜಿತ್ ತೀರ್ಥಹಳ್ಳಿ( ಸಿನಿಮಾ)

ಶ್ರೀಧರ್ ರಂಗಾಯಣ ( ರಂಗ ಭೂಮಿ ಕಲಾವಿದರು)
ವಿರೇಶ್ ಟಿ ( ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು)
ಡಿಪಿಸಿ- ಭರತ್ ವಡೇಗದ್ದೆ ( ನೃತ್ಯ)
ಯುವ ಮಿತ್ರರು (ರಿ)-( ಜಾನಪ ದ ಕಲೆ)
ಪವನ್ ( ಸಮಾಜ ಸೇವೆ)
ಮಂಜುನಾಥ್ ಶಿರುಪತಿ ( ಸಂಘಟನೆ)

ಪುನೀತ್ ಪ್ರತಿಭಾ ಪುರಸ್ಕಾರ- 2025

ಸಾನಿಕ ಹೆಗಡೆ( ಸಾಂಸ್ಕೃತಿಕ)
ಶ್ರದ್ದಾ ಸುಧಾಕರ್ ( ಸಂಗೀತ)
ವರ್ಷಿಣಿ ಪಿ ಭಟ್( ಸಂಗೀತ)
ರೇಷ್ಮಾ ( ಶಿಕ್ಷಣ)
ಅಘೋಪ ನಾಯಕ್ ( ಶಿಕ್ಷಣ)
ಆತ್ಮಿಕಾ ಭಟ್ ( ಸಂಗೀತ)
ಪ್ರೀತಮ್ ( ಶಿಕ್ಷಣ)
ಆರ್ಯನ್ ( ಶಿಕ್ಷಣ)
ವರ್ಷ ( ಶಿಕ್ಷಣ)
ಬಿಂದು ( ಶಿಕ್ಷಣ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.