Categories
ತೀರ್ಥಹಳ್ಳಿ

ಪುನೀತ್ ನೆನಪಿನೋತ್ಸವದ ರಂಗು!

ಪುನೀತ್ ನೆನಪಿನೋತ್ಸವದ ರಂಗು!
– ರಕ್ತದಾನ, ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳು, ಅಂಗವಿಕಲರಿಗೆ ಸಹಾಯ
– ಪುನೀತ್ ಮ್ಯೂಸಿಕ್ಸ್ ನೈಟ್ಸ್: ಜನರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಪುನೀತ್ ಜನ್ಮ ದಿನದ ಅಂಗವಾಗಿ ವಿಶ್ವಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆ ಕಲ್ಲುಕೊಡಿಗೆ ಕುಪ್ಪಳ್ಳಿ ಇವರ ವತಿಯಿಂದ ಪುನೀತ್ ನೆನಪಿನೋತ್ಸವ ಕಾರ್ಯಕ್ರಮ ಜನಮನ ಸೆಳೆಯಿತು. ಕುಪ್ಪಳ್ಳಿಯ ಸಮೀಪ ಮುಸ್ಸಿನಕೊಪ್ಪ ಕಲ್ಲುಕೊಡಿಗೆ ಸಮುದಾಯ ಭವನದಲ್ಲಿ ಬೆಳಿಗ್ಗೆಯಿಂದ ರಕ್ತದಾನ, ಉಚಿತ ಅರೋಗ್ಯ ತಪಾಸಣೆ ಶಿಬಿರ ನಡೆಯಿತು.ಬೆಕ್ಕನೂರು ಗ್ರಾಮದ ಆಯ್ದ ಸ್ಥಳಗಳಲ್ಲಿ ಗೋವುಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಕಾರ್ಯಕ್ರಮ ಮಾಡಲಾಗುವುದು. ರಕ್ತದಾನ, ನೇತ್ರದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.  ದೇವಂಗಿ ಪಿಡಿಓ ರೇಣುಕಾರಾದ್ಯ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಗಣಪತಿಕಟ್ಟೆ, ಪ್ರಮುಖರಾದ ಚಂದ್ರೆಗೌಡ, ನಾಗರಾಜ, ಸುಧಾಕರ್, ಸುರೇಂದ್ರ ಹಾಜರಿದ್ದರು.

ವೇದಿಕೆ ಕಾರ್ಯಕ್ರಮವನ್ನು ತೀರ್ಥಹಳ್ಳಿ ಎಸ್. ಐ ಶಿವನಗೌಡ ಉದ್ಘಾಟನೆ ಮಾಡಿದರು.ಖ್ಯಾತ ಕಾಮಿಡಿ ನಟ ಕಾರ್ತಿಕ್ ಮಜಾ ಭಾರತ, ಖ್ಯಾತ ಧಾರವಾಹಿ ನಟಿ ಕುಮಾರಿ ಅನುಪಲ್ಲವಿ, ಉದ್ಯಮಿ ಸುಬ್ರಹ್ಮಣ್ಯ ಕೆ ಡಿ ಕಲ್ಲು ಕೊಡಿಗೆ ವಾಯು ಸೇನೆ ಪ್ರಮುಖರಾದ ರಮೇಶ್ ಕರ್ಕಿಬೈಲು, ನಿವೃತ್ತ ಶಿಕ್ಷಕ ಶಿವಶಂಕರ್, ಮಾಜಿ ಸೈನಿಕ ಕಾರ್ತಿಕ್ ಬಾಣಂಕಿ, ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್ ನಾಗರಾಜ್ ಹಿಲಿಕೆರೆ, ಕೃಷಿ ಸಾಧಕ ಶಿವಪ್ರಸಾದ್ ಜಿಗಳೇಬೈಲು, ನಿರೂಪಕಿ ಅಮೃತ ಮಂಜುನಾಥ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚಿರಂತನ, ಆದಿತ್ಯ, ಅದಿತಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ತಿಕ್ ಮಜಾ ಭಾರತ ಕಾಮಿಡಿ ಮಾತು, ಸುಧಿ ಮ್ಯೂಸಿಕ್ಸ್ ನೈಟ್ಸ್, ಚಿಟ್ಟೆ ನಾಟಕ ಗಮನ ಸೆಳೆಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.