ಹಳ್ಳಿ ಹಳ್ಳಿಯಲ್ಲಿ ಮೊಳಗಿದ ರಾಮನ ಜಪ!
– ಗಡಿಕಲ್ಲಿನ ಆಂಜನೇಯ ದೇಗುಲದಲ್ಲಿ ರಾಮನ ರಂಗು!
– 1000ಕ್ಕೂ ಹೆಚ್ಚು ಮಂದಿಗೆ ಊಟ: ರಾತ್ರಿ ದೀಪೋತ್ಸವ
– ಹಿಲಿಕೆರೆ, ದೇವಂಗಿ, ಕುರುವಳ್ಳಿ, ಬಳಗಟ್ಟೆಯಲ್ಲಿ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ರಾಮನ ಉತ್ಸವ ಆಚರಣೆ ಮಾಡಲಾಗುತ್ತಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ದೇವಾಲಯ, ಶಾಲೆ, ಆಟೋ ನಿಲ್ದಾಣಗಳಲ್ಲಿ ರಾಮನ ಹಬ್ಬ ಮಾಡಲಾಗುತ್ತಿದೆ. ಕೊಪ್ಪ -ತೀರ್ಥಹಳ್ಳಿ ಗಡಿ ಗಡಿಕಲ್ಲಿನ ಆಂಜನೇಯ ದೇಗುಲದಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಅಯೋಧ್ಯೆಯ ಭವ್ಯ ಶ್ರೀರಾಮಮಂದಿರ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ 9-00 ರಿಂದ ರಾತ್ರಿವರೆಗೆ ವಿವಿಧ ಪೂಜೆ, ದೀಪೋತ್ಸವ ನಡೆಯುತ್ತಿದೆ. 1000 ಮಂದಿಗೆ ಅನ್ನದಾನ ಮಾಡಲಾಗಿದೆ. ದೇಗುಲದ ಎದುರು ಹೋಮಕ್ಕೆ ಬಾಳೆ ಮಂಟಪ ಹಾಕಿದ್ದು ಗಮನ ಸೆಳೆದಿದೆ.
ಹಿಲಿಕೆರೆ, ದೇವಂಗಿ, ಬಳಗಟ್ಟೆಯಲ್ಲಿ ಆಚರಣೆ
ಹಿಲಿಕೆರೆ ಸಮುದಾಯ ಭವನ, ದೇವಂಗಿಯಲ್ಲಿ ಕೂಡ ರಾಮೋತ್ಸವ ಆಚರಣೆ ಮಾಡಲಾಗಿದೆ. ಇನ್ನು ಬಳಗಟ್ಟೆ ಈಶ್ವರ ದೇವಾಲಯದಲ್ಲಿ ಪೂಜೆ, ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

ಕುರುವಳ್ಳಿಯಲ್ಲಿ ಆಚರಣೆ
ಮೇಲಿನ ಕುರುವಳ್ಳಿ, ಕುರುವಳ್ಳಿ, ಬುಕ್ಲಾಪುರ, ವಿಠಲ ನಗರ, ಸೇರಿ ಎಲ್ಲೆಡೆ ರಾಮನ ಬ್ಯಾನರ್ ಹಾಕಿ ಬಂಟಿಂಗ್ಸ್ ಹಾಕಿ ಆಚರಣೆ ಮಾಡಿದರೆ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ, ಊಟದ ವ್ಯವಸ್ಥೆ ಮಾಡಲಾಗಿತ್ತು.



