ರಾಮೇಶ್ವರ ತೆಪ್ಪೋತ್ಸವ ಸೂಪರ್..!
– ತುಂಗೆ ತೀರದ ಪಟಾಕಿ ಚಿತ್ತಾರ ಕಣ್ಣು ತುಂಬಿಕೊಂಡ ಒಂದು ಲಕ್ಷಕ್ಕೂ ಹೆಚ್ಚು ಜನ
– ತೆಪ್ಪದಲ್ಲಿ ಸಂಚಾರ ಮಾಡಿದ ರಾಮೇಶ್ವರ: ಪಟಾಕಿ ಚಿತ್ತಾರ
NAMMUR EXPRESS NEWS
ತೀರ್ಥಹಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಶ್ರೀ ರಾಮೇಶ್ವರ ದೇವರ ಎಳ್ಳಾಮಾವಾಸ್ಯೆ ತೆಪ್ಪೋತ್ಸವ ಸುಮಾರು ಲಕ್ಷ ಜನರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಬುಧವಾರ ಸಂಜೆ ಇಡೀ ಪಟ್ಟಣದಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಎಲ್ಲೆಡೆ ಬೆಳಕಿನ ಅಲಂಕಾರ, ವಿಶೇಷ ಜಾತ್ರಾ ಸೊಬಗು ಮೂಡಿತ್ತು. ತುಂಗಾ ನದಿಯಲ್ಲಿ ದೇವರ ಸುತ್ತು ಹಾಕಿ ಪಟಾಕಿ ಹೊಡೆಯಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ, ಸಹಕಾರ ನಾಯಕರಾದ ಮಂಜುನಾಥ ಗೌಡ, ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಡಾ. ಸುಂದರೇಶ್, ಪ್ರಮುಖರಾದ ಲಯನ್ಸ್ ಪಾಂಡುರಂಗಪ್ಪ, ತಹಸೀಲ್ದಾರ್ ರಂಜಿತ್, ಡಿವೈಎಸ್ಪಿ ಗಜಾನನ ವಾಮನ ಸುತಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ವಿವಿಧ ರಂಗಗಳ ಗಣ್ಯರು ಇದ್ದರು. ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿ, ಪ್ರಧಾನ ಅರ್ಚಕರಾದ ರಾಜಶೇಖರ್ ಭಟ್ ತಂಡದಿಂದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
