ಹೆಗ್ಗಾರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಧಾರ್ಮಿಕ ಸಂಭ್ರಮ!
– ವಿಶೇಷ ಪೂಜೆಗೆ ಸಿಂಗಾರಗೊಂಡ ದೇವಾಲಯ
– ಮಲೆನಾಡ ಪ್ರಸಿದ್ಧ ಹಳೆಯ ದೇಗುಲದಲ್ಲಿ ವಿಶೇಷ ಕಾರ್ಯಕ್ರಮ
– ಮೇ 20ಕ್ಕೆ ಸತ್ಯ ನಾರಾಯಣ ವೃತ, ಮೇ 21ಕ್ಕೆ ನರಸಿಂಹ ಜಯಂತಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೆಗ್ಗಾರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೇ 20ರಂದು ನರಸಿಂಹ ಜಯಂತಿ ಆಚರಣೆ ನಡೆಯಲಿದೆ. ಈಗಾಗಲೇ ದೇವಸ್ಥಾನ ವಿಶೇಷ ಪೂಜೆಗೆ ಸಿಂಗಾರಗೊಂಡಿದ್ದು ಎರಡು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿವೆ. ಮೇ 20ರ ಸೋಮವಾರ ರಾತ್ರಿ 7-00 ಗಂಟೆಗೆ ಶ್ರೀ ಸನ್ನಿದಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ. ಸಮಸ್ತ ಭಕ್ತರನ್ನು ಸ್ವಾಗತಿಸಲಾಗಿದೆ.
ಮೇ 21ರಂದು ನರಸಿಂಹ ಜಯಂತಿ
ಮೇ 21ರ ಬೆಳಿಗ್ಗೆ ಮಂಗಳವಾರ ಬೆಳಿಗ್ಗೆ 8-00 ಗಂಟೆಗೆ ಶ್ರೀ ನರಸಿಂಹ ಹೋಮ ನಂತರ ಶ್ರೀ ಲಕ್ಷ್ಮೀನರಸಿಂಹ ಉತ್ಸವ ಮೂರ್ತಿಯ ರಾಜಬೀದಿ ಉತ್ಸವವು ಹೆಗ್ಗಾರು ಮುಖ್ಯ ರಸ್ತೆಯಿಂದ ಹೊರಟು ದೇವಸ್ಥಾನ ತಲುಪುತ್ತದೆ.ಇದೇ ದಿನ ಮಧ್ಯಾಹ್ನ 12-30 ಕ್ಕೆ ನರಸಿಂಹ ಜಯಂತಿಯ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಮಧ್ಯಾಹ್ನ ‘ಅನ್ನಸಂತರ್ಪಣೆ’ ಇರುತ್ತದೆ.
ಶ್ರೀ ದೇವರ ಸೇವೆಗೆ ಭಕ್ತ ಮಹಾಶಯರು ತನು-ಮನ-ಧನ ಸಹಕಾರ ನೀಡಿ ಶ್ರೀ ಲಕ್ಷ್ಮೀನರಸಿಂಹ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಸಮಿತಿ ಮನವಿ ಮಾಡಿದೆ.
