Categories
ತೀರ್ಥಹಳ್ಳಿ

ದಿ. ಡಾ.ಬಿ.ಎಸ್. ವಿಶ್ವನಾಥ್ ಅವರ ನೆನಪು

ದಿ. ಡಾ.ಬಿ.ಎಸ್. ವಿಶ್ವನಾಥ್ ಅವರ ನೆನಪು
– ಹುಟ್ಟೂರು ಬಸರವಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ
– ಸಹಕಾರ ಕ್ಷೇತ್ರಕ್ಕೆ ವಿಶ್ವನಾಥ್ ಅವರ ಸೇವೆ ಅಪಾರ

NAMMUR EXPRESS NEWS
ತೀರ್ಥಹಳ್ಳಿ : ರಾಜ್ಯ ಕಂಡ ಅಪರೂಪದ ಸಹಕಾರಿ ದಿವಂಗತ ಡಾ ಬಿ ಎಸ್ ವಿಶ್ವನಾಥ್ ಅವರ ಜನ್ಮದಿನದ ಅಂಗವಾಗಿ ಶನಿವಾರ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಲು ಸಮೀಪದ ಬಸರವಳ್ಳಿಯಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅವರಿಗೆ ನುಡಿ ನಮನ ಅರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಕಿಮ್ಮನೆ ರತ್ನಾಕರ, ಕಡಿದಾಳ್ ಪ್ರಕಾಶ್, ಕೊಳವರ ನಾರಾಯಣ ಮೂರ್ತಿ, ಹಾರೋಗೊಳಿಗೆ ಪದ್ಮನಾಭ, ಹಾರೋಗೊಳಿಗೆ ಆದಿ ಮೂರ್ತಿ, ದೇವಂಗಿ ಮನುದೇವ್, ಕಟ್ಟೆಗದ್ದೆ ಹಾಲಪ್ಪ, ಬಿ. ಬಿ ರುದ್ರಪ್ಪ, ಬಿ. ಎನ್ ಚಂದ್ರಶೇಖರ, ಬಿ ವಿ ನಾಗರಾಜ್, ಪ್ರೊ ಬಿ. ಎಚ್ ರವಿ, ಬಿ ವಿ ಶಿವಮೂರ್ತಿ, ಕೊಳವಾರ ಗೌತಮ್, ಬಿ ಆರ್ ಮದನ್, ಬಿ ಎಚ್ ರಾಘವ್, ವಿಶ್ವನಾಥ್ ಮತ್ತು ಅವರ ಮಗ ಅವಿನಾಶ್ ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸರವಳ್ಳಿ, ಹಾರೋಗೊಳಿಗೆ, ಹೊರಗದ್ದೆ, ಬಳಗಟ್ಟೆ ಕುಟುಂಬದವರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.