ಗಡಿಕಲ್ಲಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಮರ ತೆರವು!
– ಅರಣ್ಯ ಇಲಾಖೆ ತಕ್ಷಣ ಕ್ರಮಕ್ಕೆ ಧನ್ಯವಾದ ಅರ್ಪಿಸಿದ
– ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಫಲಶ್ರುತಿ
NAMMUR EXPRESS NEWS
ತೀರ್ಥಹಳ್ಳಿ- ಕೊಪ್ಪ ತಾಲೂಕಿನ ಗಡಿ ಭಾಗ ಗಡಿಕಲ್ ಸರ್ಕಲ್ ಬಸ್ ನಿಲ್ದಾಣದ ಮುಂಭಾಗ ತೀರ್ಥಹಳ್ಳಿ ತಾಲೂಕಿಗೆ ಸೇರಿದ ಜಾಗದಲ್ಲಿ ಬಹಳಷ್ಟು ವರ್ಷ ಹಳೆಯದಾದ ಬೃಹದಾಕಾರದ ಮರವೊಂದು ಒಣಗಿ ನಿಂತಿದ್ದು, ಇತ್ತೀಚಿನ ದಿನಗಳಲ್ಲಿ ಅದರ ರೆಂಬೆಗಳು ಪ್ರತಿನಿತ್ಯ ಇಲ್ಲಿ ಓಡಾಡುವ ಬಹಳಷ್ಟು ಜನರ ತಲೆ ಮೇಲೆ ಬೀಳುತ್ತಿದೆ. ಈ ಮರದ ಕೆಳಗೆ ಬಸ್ಸಿಗಾಗಿ ಕಾಯುವವರು, ಶಾಲಾ ಮಕ್ಕಳು, ಸಾರ್ವಜನಿಕರು ನಿಲ್ಲುವ ಜಾಗವಾಗಿದ್ದು ಇದಲ್ಲದೇ ಮರದ ಪಕ್ಕದಲ್ಲೇ ಎರಡು ವಿದ್ಯುತ್ ಮಾರ್ಗ ಕೂಡ ಹಾದು ಹೋಗಿರುತ್ತದೆ ಎಂದು “ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ” ವರದಿ ಮಾಡಿತ್ತು. ಇದೀಗ ಅರಣ್ಯ ಇಲಾಖೆ ಮರವನ್ನು ತೆರವು ಮಾಡಿದೆ. ಗಡಿಕಲ್ ಸಾರ್ವಜನಿಕರು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ, ಅರಣ್ಯ ಇಲಾಖೆ, ದೇವಂಗಿ ಗ್ರಾಮ ಪಂಚಾಯತ್ ಆಡಳಿತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
