Categories
ತೀರ್ಥಹಳ್ಳಿ

ಸಹ್ಯಾದ್ರಿ ಸಮಗ್ರ ಚಾಂಪಿಯನ್!

ಸಹ್ಯಾದ್ರಿ ಸಮಗ್ರ ಚಾಂಪಿಯನ್!
– ಆಶ್ರಯ್ ಎನ್ ಪಿ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌
– ತರಬೇತಿ ನೀಡಿದ ದೈಹಿಕ ಶಿಕ್ಷಕ ಹೆಚ್.ಆರ್. ಶ್ರೀಧರ್ ಅವರಿಗೆ ಅಭಿನಂದನೆ

NAMMUR EXPRESS NEWS
ದಿನಾಂಕ: 06/09 /2025 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೀಬಿನಕೆರೆ, ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಸರ್ಕಾರಿ ಉರ್ದು ಶಾಲೆ, ಕೋಳಿಕಾಲುಗುಡ್ಡ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕುಶಾವತಿ ಶಾಲೆಯ ಮಕ್ಕಳು ಸರ್ವಾಂಗೀಣ ಸಾಧನೆಗೈದು ಕ್ರೀಡಾಕೂಟದ ಸಮಗ್ರ ಪ್ರಶಸ್ತಿ, ಬಾಲಕರ ವೈಯಕ್ತಿಕ ಪ್ರಶಸ್ತಿ, ಬಾಲಕಿಯರ ಸಮಗ್ರ ಪ್ರಶಸ್ತಿ, ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ..

ಬಾಲಕರ ವೈಯಕ್ತಿಕ ವಿಭಾಗ:

600 ಮೀ. ಓಟ – ಆಶ್ರಯ್ ಎನ್ ಪಿ – ಪ್ರಥಮ

400 ಮೀ. ಓಟ – ಆಶ್ರಯ್ ಎನ್ ಪಿ – ಪ್ರಥಮ

ಗುಂಡು ಎಸೆತ – ಮೊಹಮ್ಮದ್ ಸಬೀಲ್ – ಪ್ರಥಮ

ತಟ್ಟೆ ಎಸೆತ – ಪ್ರಣವ್ ಆರ್ – ಪ್ರಥಮ

ಉದ್ದ ಜಿಗಿತ – ಮೊಹಮ್ಮದ್ ಸಬೀಲ್ – ದ್ವಿತೀಯ

400 ಮೀ. ಓಟ – ಅದ್ವಿಕ್ ಜಿ. ಆರ್ – ತೃತೀಯ

ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಶಿಪ್‌ನ್ನು ಆಶ್ರಯ್ ಎನ್ ಪಿ ಈ ವಿದ್ಯಾರ್ಥಿಯು ಪಡೆದಿರುತ್ತಾರೆ.

ಬಾಲಕರ ಗುಂಪು ಆಟ:

ವಾಲಿಬಾಲ್:-
ಆಶ್ರಯ್ ಎನ್ ಪಿ ಮತ್ತು ತಂಡ – ಪ್ರಥಮ

ಬಾಲ್ ಬ್ಯಾಡ್ಮಿಂಟನ್
ಸ್ಕಂದ ಮತ್ತು ತಂಡ – ಪ್ರಥಮ

4 x 100 ಮೀ ರಿಲೇ
ಆಶ್ರಯ್ ಎನ್ ಪಿ. ಪ್ರಣವ್ ಆರ್. ಅದ್ದಿಕ್ ಜಿ.ಆರ್. ಮೊಹಮ್ಮದ್ ಸಬೀಲ್ ತಂಡ – ದ್ವಿತೀಯ

ಬಾಲಕಿಯರ ವೈಯಕ್ತಿಕ ವಿಭಾಗ:

200 ಮೀ. ಓಟ ಆರಾಧ್ಯ ಜಿ.ಹೆಚ್ – ಪ್ರಥಮ

400 ಮೀ. ಓಟ ಅಕ್ಷರ ಎನ್ ಸಿ – ದ್ವಿತೀಯ

ತಟ್ಟೆ ಎಸೆತ – ಸಾನ್ವಿ ಎಂ.ಪಿ – ದ್ವಿತೀಯ

400 ಮೀ. ಓಟ – ದಿಶಾ ಪಿ – ತೃತೀಯ

ತಟ್ಟೆ ಎಸೆತ – ಅಪೇಕ್ಷ – ತೃತೀಯ

ಉದ್ದ ಜಿಗಿತ – ದಿಶಾ ಪಿ – ತೃತೀಯ

ಬಾಲಕಿಯರ ಗುಂಪು ಆಟ:

ವಾಲೀಬಾಲ್

ಮಾನ್ಯ ಮತ್ತು ತಂಡ – ಪ್ರಥಮ

ಬಾಲ್ ಬ್ಯಾಡ್ಮಿಂಟನ್

ಋತ್ವಿಕ ಮತ್ತು ತಂಡ – ಪ್ರಥಮ

4 x 100 ಮೀ ರಿಲೇ

ಅರಾಧ್ಯ.ಜಿ.ಹೆಚ್. ಅಕ್ಷರ ಎನ್.ಸಿ. ಅಕ್ಷರ ಡಿ.ಆರ್. ದಿಶಾ ಪಿ ತಂಡ – ದ್ವಿತೀಯ

ಬಾಲಕಿಯರ ಸಮಗ್ರ ಪ್ರಶಸ್ತಿ

ಶಾಲೆಗೆ ಕೀರ್ತಿ ತಂದಿರುವ ಮೇಲ್ಕಂಡ ವಿದ್ಯಾರ್ಥಿಗಳನ್ನು ಹಾಗೂ 33 ವರ್ಷಗಳಿಂದ ಸತತವಾಗಿ ಶಾಲೆಯು ಕ್ರೀಡೆಯಲ್ಲಿ ಮುಂಚೂಣಿಯಲ್ಲಿರಲು ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಹೆಚ್.ಆರ್. ಶ್ರೀಧರ್ ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯಿನಿಯವರು, ಶಿಕ್ಷಕ ವೃಂದ ಹಾಗೂ ಪೋಷಕರು ಶುಭಕೋರಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.