Categories
ತೀರ್ಥಹಳ್ಳಿ

ಬಂದಿದೆ ಸಹ್ಯಾದ್ರಿ ಪ್ಯಾಕೇಜ್ ವಾಟರ್..!

ಬಂದಿದೆ ಸಹ್ಯಾದ್ರಿ ಪ್ಯಾಕೇಜ್ ವಾಟರ್..!
– ಸಿಯಾ ಇನ್ಮುಂದೆ ಸಹ್ಯಾದ್ರಿ ವಾಟರ್
– ತೀರ್ಥಹಳ್ಳಿ ಸಹ್ಯಾದ್ರಿ ಸಂಸ್ಥೆಗೆ 2 ಹೊಸ ಬಸ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಹಕಾರಿ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಕೆಲಸ ಮಾಡಿರುವ ಸಹ್ಯಾದ್ರಿ ಸಮೂಹ ಸಂಸ್ಥೆಗೆ ಮತ್ತೊಂದು ಉದ್ಯಮ ಸೇರ್ಪಡೆಯಾಗಿದ್ದು ಸಹ್ಯಾದ್ರಿ ಪ್ಯಾಕೇಜ್ ವಾಟರ್ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿದೆ. ತೀರ್ಥಹಳ್ಳಿ ಸಹ್ಯಾದ್ರಿ ವಿವಿಧೋದ್ದೇಶ ಆಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘಕ್ಕೆ ಸಹ್ಯಾದ್ರಿ ಪ್ಯಾಕೇಟ್ಸ್ ಡ್ರಿಂಕಿಂಗ್ ವಾಟರ್ ಘಟಕ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಕಳೆದ ವರ್ಷವಷ್ಟೇ ತೀರ್ಥ ಹಳ್ಳಿಯ ಪ್ರತಿಷ್ಠಿತ ಸಿಯಾ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ಅನ್ನು ಕೊಂಡುಕೊಂಡ ಸಹ್ಯಾದ್ರಿ ಸಂಸ್ಥೆಯ ಬ್ರಾಂಡ್ ಬದಲಾವಣೆ, ISI ಅಧಿಕೃತ ಮುದ್ರೆ ಹಾಗೂ FSSAI ಸಂಸ್ಥೆಯಿಂದ ಕಾನೂನಾತ್ಮಕವಾಗಿ ಪರವಾನಿಗೆ ಪಡೆಯುವುದು ಮುಂತಾದ ಕಾನೂನಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸುದೀರ್ಘ ಒಂದು ವರ್ಷಗಳ ಅವಧಿ ತೆಗೆದುಕೊಂಡಿತ್ತು.

ಸಿಯಾ ಸಂಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸಹ್ಯಾದ್ರಿ ಸಂಸ್ಥೆಯು ಸಿಯಾ ಲೇಬಲ್‌ ನಲ್ಲಿಯೇ ಕುಡಿಯುವ ನೀರನ್ನು ಗ್ರಾಹಕರಿಗೆ ವಿಸ್ತರಿಸುತ್ತಾ ಗ್ರಾಹಕರಲ್ಲಿ ಮೊದಲಿನ ಸ್ಥಿರತೆ ಕಂಡುಕೊಂಡಿತು. ಸಂಸ್ಥೆಯ ಅಧ್ಯಕ್ಷರಾದ ಬಸವಾನಿ ವಿಜಯದೇವ್‌ ಅವರ ದೂರದೃಷ್ಟಿ ಮತ್ತು ತ್ವರಿತವಾದ ಕಾರ್ಯಚಟುವಟಿಕೆಯಿಂದಾಗಿ ಸಹ್ಯಾದ್ರಿ ಸಂಸ್ಥೆಯು ಸಹ್ಯಾದ್ರಿ ಎಂಬ ಲೇಬಲ್‌ನ ಅಡಿಯಲ್ಲಿಯೇ ‘ಪ್ಯಾಕೇಜ್‌ ಡ್ರಿಂಕಿಂಗ್ ವಾಟರ್’ ಅನ್ನು ವಿತರಿಸಲು ಸಿದ್ಧಗೊಂಡಿದೆ. ಜನವರಿ 16ರಂದು ಅಧಿಕೃತವಾಗಿ ಪ್ರಾರಂಭಗೊಂಡು ಸಹ್ಯಾದ್ರಿ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ಮಾರುಕಟ್ಟೆಗೆ ಗ್ರಾಹಕರ ಬೇಡಿಕೆಗನುಗುಣವಾಗಿ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಗ್ರಾಹಕರ ಬಳಿಗೆ ಸೇವೆ ನೀಡುತ್ತಿದೆ.

ಸಹ್ಯಾದ್ರಿ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಅಡಿಕ ವ್ಯವಹಾರ, ಸಾಲ ನೀಡುವಿಕೆ. ಪೆಟ್ರೋಲ್ ಬಂಕ್, ನಂದಿನಿ ಉತ್ಪನ್ನಗಳು, ಕೃಷಿಗೆ ಪೂರಕವಾಗುವ ಔಷಧಿಗಳು, ಸುಣ್ಣ, ಚೀಟಿನಿಧಿ, ಸಹಕಾರಿದನಿ ವಾರಪತ್ರಿಕೆ, ಸಹ್ಯಾದ್ರಿ ಸಾರಿಗೆ ಸಂಸ್ಥೆ, ಇತ್ತೀಚೆಗೆ ಹೊಸ ಎರಡು ಬಸ್ ಸೇರ್ಪಡೆ ಮುಂತಾದ ಸೇವೆಗಳ ಮೂಲಕ ಹೆಸರುವಾಸಿಯಾಗಿರುವ ಸಹ್ಯಾದ್ರಿ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಬೇಡಿಕೆಯಿರುವ ಕುಡಿಯುವ ನೀರನ್ನು ಪೂರೈಸುವ ಸಾಹಸಕ್ಕೆ ಕೈ ಹಾಕಿದ್ದು, ಇದರಲ್ಲಿ ಯಶಸ್ಸು ಸಾಧಿಸುವ ಛಲ ಹೊಂದಿದೆ ಸಹ್ಯಾದ್ರಿ ಸಂಸ್ಥೆಯ ಎಲ್ಲಾ ಷೇರುದಾರ ಸದಸ್ಯರು ಮತ್ತು ಅಭಿಮಾನಿಗಳು ಎಂದಿನಂತೆಯೇ ಈ ಉತ್ಪನ್ನ ಗಳನ್ನು ಕೊಂಡುಕೊಳ್ಳುವ ಮೂಲಕ ಸಂಸ್ಥೆಯ ಅಭಿ ವೃದ್ಧಿಗೆ ಸಹಕಾರಿಯಾಗಬೇಕು. ತಮ್ಮ ಊರು. ಮನೆಗಳಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಅನುಗುಣವಾಗಿ ಅತ್ಯಂತ ತ್ವರಿತ ಮತ್ತು ಉತ್ತಮಗುಣಮಟ್ಟದಲ್ಲಿ ನೀರನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಹೇಳಿದ್ದಾರೆ.

ಬಂದವು ಹೊಸ ಹೈಟೆಕ್ ಬಸ್!

ತೀರ್ಥಹಳ್ಳಿ ಸಹ್ಯಾದ್ರಿ ವಿವಿಧೋದ್ದೇಶ ಸಹಕಾರ ಸಂಘವು ತನ್ನ ಷೇರುದಾರರಿಗೆ ನೆರವಾಗುವ ದೃಷ್ಟಿಯಿಂದ ಉಚಿತವಾಗಿ ಬಸ್ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿತ್ತು. ಸಹಕಾರ ಕ್ಷೇತ್ರದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ಒಂದು ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಹ್ಯಾದ್ರಿ ಸಂಸ್ಥೆ ಜಿಲ್ಲೆಯಲ್ಲಿಯೇ ಗಮನ ಸೆಳೆದಿತ್ತು. ಇದು ಷೇರುದಾರ ಸಂಸ್ಥೆಯಾದ್ದರಿಂದ ಬಸ್ ವ್ಯವಹಾರವೂ ಸ್ವಲ್ಪಮಟ್ಟಿಗೆ ನಷ್ಟದಾಯಕವಾಗಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದ ಲೈನ್‌ನಲ್ಲಿ ಮಾತ್ರ ಇಂದಿಗೂ ಬಸ್ ಸಂಪರ್ಕವಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇತ್ತೀಚಿಗಷ್ಟೇ ಲೈಲ್ಯಾಂಡ್ ಕಂಪನಿಯ ಎರಡು ಹೊಸ ಬಸ್ಗಳನ್ನು ಸಂಸ್ಥೆಯು ಸಂಚಾರಕ್ಕೆ ನಿಯೋಜನೆ ಗೊಳಿಸಿದೆ. ಪ್ರಯಾಣಿಕರು ಇದರ ಸಮಪಯೋಗ ಪಡೆದುಕೊಳ್ಳುವಂತೆ ಬಸವಾನಿ ವಿಜಯದೇವ್ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.