ತೀರ್ಥಹಳ್ಳಿ ಆಸ್ಪತ್ರೆ ಸಿಬ್ಬಂದಿಗೆ ಬರುತ್ತೆ ಸಂಬಳ?
– ಶಾಸಕ ಆರಗ ಜ್ಞಾನೇಂದ್ರ ಬಳಿ ಅಳಲು: ತಕ್ಷಣ ಪರಿಹಾರ
– ಆರಗ ಆಶೀರ್ವಾದ ಪಡೆದ ಕುಕ್ಕೆ ಪ್ರಶಾಂತ್
ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಳೆದ 3 ತಿಂಗಳಿದ ಸಂಬಳವಾಗಿರಲಿಲ್ಲ. ಶಾಸಕ ಆರಗ ಜ್ಞಾನೇಂದ್ರ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದಾಗ ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳದಿಂದಲೇ ಸಂಬಂಧಿಸಿದ ಏಜೆನ್ಸಿ ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಸಂಬಳ ನೀಡುವಂತೆ ಸೂಚಿಸಿದ್ದಾರೆ. ಹಾಗೂ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಆರಗ ಆಶೀರ್ವಾದ ಪಡೆದ ಕುಕ್ಕೆ ಪ್ರಶಾಂತ್

ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜಕೀಯ ಗುರುಗಳು, ಮಾರ್ಗದರ್ಶಕರು, ಮಾಜಿ ಗೃಹ ಸಚಿವರು ನಾಯಕರಾದ ಆರಗ ಜ್ಞಾನೇಂದ್ರ ಅವರನ್ನು ಕುಕ್ಕೆ ಪ್ರಶಾಂತ್ ಅವರು ಭೇಟಿಯಾಗಿ ಆಶೀರ್ವಾದ ಪಡೆದರು.
