Categories
ತೀರ್ಥಹಳ್ಳಿ

ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ಶುರು

ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ಶುರು

– ತೀರ್ಥಹಳ್ಳಿ ಸಹಕಾರ ಕ್ಷೇತ್ರಕ್ಕೆ ಮತ್ತೊಂದು ಸೌಹಾರ್ದ ಸಹಕಾರಿ ಸಂಘ
– ನೂತನ ಆಡಳಿತ ಮಂಡಳಿ ಆಯ್ಕೆ: ಅಧ್ಯಕ್ಷರಾಗಿ ಹೊದಲ ಶಿವು ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸಹಕಾರ ಕ್ಷೇತ್ರಕ್ಕೆ ಮತ್ತೊಂದು ಸೇರ್ಪಡೆ ಆಗಿದೆ. ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ., ಪ್ರಾರಂಭವಾಗಿದ್ದು ಅದರ ಅಧ್ಯಕ್ಷರಾಗಿ ಹೊದಲ ಶಿವು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಶಾಂತ್ ಕುಪ್ಪಳ್ಳಿ ಆಯ್ಕೆ ಯಾಗಿದ್ದಾರೆ. ನಿರ್ದೇಶಕರಾಗಿ ಮುಡುಬ ರಾಘವೇಂದ್ರ, ಚಿಡುವ ಸೂರ್ಯ ನಾರಾಯಣ, ಉಮೇಶ್ ಕೆ.ಎಲ್ ಶಿರಿಗಾರು, ರಾಘವೇಂದ್ರ ಕುಂದಾದ್ರಿ, .ನಾಗೇಶ್ ಉಬ್ಳೆಬೈಲ್, ಮೋಹನ್ ಸಿಂಧೂವಾಡಿ.ಲ್, ಪೂರ್ಣೇಶ್ ಪೂಜಾರಿ, ಗೀತಾ ರಾಘವೇಂದ್ರ, ಯಶೋದಾ ಮಂಜುನಾಥ್, ಮಂಜುಳಾ ನಾಗೇಂದ್ರ, ಷಣ್ಮುಖ ಬೀಡೆ, ಶ್ವೇತಾ ಶಬರಿಷ್, ಮಮತಾ ಹೊದಲ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ತೀರ್ಥಹಳ್ಳಿಯ ಈಡಿಗ ಸೇರಿದಂತೆ ಎಲ್ಲಾ ಸಮುದಾಯದ ಷೇರುದಾರರು ಸಹಕಾರದಲ್ಲಿ ನೂತನ ಸಹಕಾರಿ ಕೆಲಸ ಮಾಡಲಿದ್ದು ಸರ್ವರಿಗೂ ನೂತನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಸರ್ವರ ಸಹಕಾರ ಕೋರಿದ ಹೊದಲ ಶಿವು

ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿಯಮಿತದ ಎಲ್ಲಾ ಷೇರುದಾರರು, ಸ್ನೇಹಿತರು, ಸಮಾಜ ಬಾಂಧವರು ಈ ಸೊಸೈಟಿ ಕಟ್ಟಲು ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರೂ ಇದರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ನೂತನ ಅಧ್ಯಕ್ಷರಾದ ಹೊದಲ ಶಿವು ಮನವಿ ಮಾಡಿದ್ದಾರೆ.

ನೂತನ ಆಡಳಿತ ಮಂಡಳಿಯಲ್ಲಿ ಯಾರು ಯಾರು?

ಅಧ್ಯಕ್ಷರಾಗಿ ಹೊದಲ ಶಿವು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಶಾಂತ್ ಕುಪ್ಪಳ್ಳಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮುಡುಬ ರಾಘವೇಂದ್ರ, ಚಿಡುವ ಸೂರ್ಯ ನಾರಾಯಣ, ಉಮೇಶ್ ಕೆ.ಎಲ್ ಶಿರಿಗಾರು, ರಾಘವೇಂದ್ರ ಕುಂದಾದ್ರಿ, .ನಾಗೇಶ್ ಉಬ್ಳೆಬೈಲ್, ಮೋಹನ್ ಸಿಂಧೂವಾಡಿ.ಲ್, ಪೂರ್ಣೇಶ್ ಪೂಜಾರಿ, ಗೀತಾ ರಾಘವೇಂದ್ರ, ಯಶೋದಾ ಮಂಜುನಾಥ್, ಮಂಜುಳಾ ನಾಗೇಂದ್ರ, ಷಣ್ಮುಖ ಬೀಡೆ, ಶ್ವೇತಾ ಶಬರಿಷ್, ಮಮತಾ ಹೊದಲ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.