ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ
– ಯಕ್ಷಗಾನ ಪ್ರಿಯರಿಗೆ ಅದ್ಬುತ ಮನೋರಂಜನೆ
– ಹಿರಣ್ಯಾಕ್ಷ ಪ್ರಸಂಗದ ವಿಷ್ಣುವಿನ ವರಾಹ ರೂಪದ ರಂಗ ಪ್ರವೇಶ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಇಲ್ಲಿನ ಪಟ್ಟಣ ಪಂಚಾಯತ್ ಅಂಗಳದಲ್ಲಿ ಹಿರಣ್ಯಾಕ್ಷ ಪ್ರಸಂಗದ ವಿಷ್ಣುವಿನ ವರಾಹ ರೂಪ ದ ಅದ್ಬುತ ರಂಗ ಪ್ರವೇಶ ನಡೆಸಿಕೊಟ್ಟರು. ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಿದ್ದರು. ಇದು ಯಕ್ಷಗಾನ ಪ್ರಿಯರಿಗೆ ಅದ್ಭುತ ಮನೋರಂಜನೆ ಎಂದೇ ಹೇಳಬಹುದಾಗಿದೆ. ಯಕ್ಷಗಾನ ಮಹಾಶಿವರಾತ್ರಿಯಂದೇ ನಡೆದಿದ್ದು ಶಿವರಾತ್ರಿಯ ಜಾಗರಣೆ ಮಾಡುವವರಿಗೆ ಸಂತಸ ನೀಡಿತ್ತು. ಶ್ರೀಯುತ ಪ್ರದೀಪ್ ಹಾಗೂ ದೀಪ ದಂಪತಿಗಳು (ಅಡುಗೆ ಕಂಟ್ರಾಕ್ಟರ್, ತೀರ್ಥಹಳ್ಳಿ) ಈ ಯಕ್ಷಗಾನ ಆಯೋಜನೆ ಮಾಡಿದ್ದರು.
ಚಳಿಗಾಲದ ಮುಕ್ತಾಯ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಯಕ್ಷಗಾನ ಈಗ ಮಲೆನಾಡ ತುಂಬ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಯಕ್ಷಗಾನ ವಿಶೇಷ ಕಲೆಯಾಗಿದ್ದು ಘಟ್ಟದ ಮೇಲೂ ಕೆಳಗೂ ಈ ಕಲೆಗೆ ಸಮಾನ ಬೇಡಿಕೆ ಮತ್ತು ಗೌರವವಿದೆ. ಇತ್ತೀಚಿನ ದಿನಗಳಲ್ಲಿ ಈ ಯಕ್ಷಗಾನವನ್ನು ಅಥವಾ ನಾಟಕಗಳನ್ನ ನೋಡುವವರ ಸಂಖ್ಯೆ ಕಡಿಮೆಯಾಗಿದ್ದರೂ ಯಕ್ಷಗಾನ ಬಯಲಾಟಗಳನ್ನು ಆಡಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಹಿಂದಿನ ಕಾಲದ ಅತ್ಯಂತ ಗೌರವಯುತ, ಧಾರ್ಮಿಕ ಕಲೆ ಇದಾಗಿದ್ದು ಧಾರ್ಮಿಕ ಕತೆಗಳೊಂದಿಗೆ ಮನೋರಂಜನೆಯ ಮಹಾಪೂರವೇ ಆಗಿದೆ. ರಾತ್ರಿಯಿಂದ ಬೆಳಗಿನ ಜಾವದವರೆಗು ನಡೆಯುತ್ತಿದ್ದ ಯಕ್ಷಗಾನ ಈಗ ಮುಸ್ಸಂಜೆ ವೇಳೆಗೆ ಶುರುವಾಗಿ ಮಧ್ಯ ರಾತ್ರಿಗೆಲ್ಲ ಮುಕ್ತಾಯವಾಗುತ್ತಿದೆ.