Categories
ತೀರ್ಥಹಳ್ಳಿ

ಶ್ರೀ ಕಲ್ಪವೃಕ್ಷ ಸೊಸೈಟಿ ಸರ್ವ ಸದಸ್ಯರ ಸಭೆ

ಶ್ರೀ ಕಲ್ಪವೃಕ್ಷ ಸೊಸೈಟಿ ಸರ್ವ ಸದಸ್ಯರ ಸಭೆ
– ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
– 13 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ ಸಂಘ
– ಶ್ರೀಧರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ : ಶ್ರೀ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘದ 2022- 23ನೇ ಸಾಲಿನ ಸರ್ವ ಸದಸ್ಯರ ಸಭೆಯು ಶುಕ್ರವಾರ ತೀರ್ಥಹಳ್ಳಿಯ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷರಾದ ಇ ಎಸ್ ಶ್ರೀಧರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಅತಿಥಿಗಳಾಗಿ ಲಯನ್ ಪಾಂಡುರಂಗಪ್ಪ, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ರಾಮಚಂದ್ರ ಆಗಮಿಸಿದ್ದರು. ಕಾರ್ಯಕ್ರಮವನ್ನು ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಹಾಗೂ ಮುಖ್ಯ ಅತಿಥಿಗಳ ನಡುವೆ ಉದ್ಘಾಟನೆ ಮಾಡಲಾಯಿತು. ತದನಂತರ ಸಂಘದ ಆಗುಹೋಗುಗಳ ಬಗ್ಗೆ ಸಾಲ ಹಾಗೂ ಮರುಪಾವತಿ ಖರ್ಚು ವೆಚ್ಚದ ಬಗ್ಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರೊಂದಿಗೆ ಚರ್ಚಿಸಿ ಸಲಹೆ ಸಹಕಾರ ಕೇಳಿ ಪಡೆದರು.

ಈ ವರ್ಷದಲ್ಲೇ ಸ್ವಂತ ಕಟ್ಟಡ ಹೊಂದಲು ಜಾಗ ಖರೀದಿ ವ್ಯವಸ್ಥೆ ಮಾಡಲಾಗುವುದು ಎಂದು ಸಂಘದ ಹಿರಿಯ ನಿರ್ದೇಶಕರಾದ ಮುಂಡಗಿಮನೆ ಲಕ್ಷ್ಮಣ್ ಹೇಳಿದರು. ಸಂಘದಲ್ಲಿ ಏಳು ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘಕ್ಕೆ ಈ ಬಾರಿ 13 ಲಕ್ಷಕ್ಕೂ ಹೆಚ್ಚು ಲಾಭ ದೊರೆತಿದ್ದು ಸಂಘದಲ್ಲಿ 971 ಸದಸ್ಯರಿದ್ದು, 1 ಕೋಟಿ 61 ಲಕ್ಷಕ್ಕೂ ಹೆಚ್ಚು ಸಾಲ ವಿತರಿಸಲಾಗಿದೆ. ಈ ವರ್ಷ ಸರ್ವ ಸದಸ್ಯರ ಸಭೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಇ.ಎಸ್ ಶ್ರೀಧರಮೂರ್ತಿ, ಉಪಾಧ್ಯಕ್ಷರಾದ ಸಿ.ಆರ್ ಮಂಜುನಾಥ್, ಲಯನ್ ಪಾಂಡುರಂಗಪ್ಪ, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ರಾಮಚಂದ್ರ, ನಿರ್ದೇಶಕರುಗಳಾದ ಕೆ ಈಶ್ವರ್ ನಾಯ್ಕ್, ವಿಶಾಲ್ ಕುಮಾರ್, ಡಿ ಲಕ್ಷ್ಮಣ್, ಕೆಎಸ್ ಎನ್ ಮೂರ್ತಿ, ಬಿ.ಎಸ್ ಸುಬ್ರಹ್ಮಣ್ಯ, ಎಂ.ದಿನೇಶ್, ಜಿ ಶ್ರೀನಿವಾಸ್, ಕೆ ಎಲ್ ಪುಟ್ಟಸ್ವಾಮಿ, ರೂಪ ಉಮೇಶ್, ಅನಿತಾ ಕಾಂತಪ್ಪ, ಕಾರ್ಯದರ್ಶಿ ಕು. ಸೌಖ್ಯ ಎಚ್ ವೈ, ಸಹಾಯಕಿ ಅನನ್ಯ ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.