ಲಾರಿಯಲ್ಲಿ ಹೊಗೆ, ತಪ್ಪಿದ ಅನಾಹುತ!
– ಆಗುಂಬೆ ಸರ್ಕಲ್ ಬಳಿ ಸರಕು ತುಂಬಿದ್ದ ಲಾರಿಯಲ್ಲಿ ಈ ಘಟನೆ!
– ರೆಡಿಯೇಟರ್ ಹೀಟಾಗಿ ಕ್ಯಾಪ್ ಹಾರಿ ಹೋಗಿ ಇಂಜಿನ್ ನಲ್ಲಿ ಹೊಗೆ
NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಸರ್ಕಲ್ ಬಳಿ ಸರಕು ತುಂಬಿದ್ದ ಲಾರಿಯಲ್ಲಿ ಹೊಗೆ ಆವರಿಸಿಕೊಂಡಿದ್ದು, ತಕ್ಷಣ ಲಾರಿ ಚಾಲಕ ಲಾರಿ ನಿಲ್ಲಿಸಿ ನೋಡುವಾಗ ರೆಡಿಯೇಟರ್ ಹೀಟಾಗಿ ಕ್ಯಾಪ್ ಹಾರಿ ಹೋಗಿ ಇಂಜಿನ್ ನಲ್ಲಿ ಹೊಗೆ ಆವರಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಲಾರಿ ಚಾಲಕ ಹಾಗೂ ಸಾರ್ವಜನಿಕರು ಕೂಡಿ ಹೊಗೆ ನಂದಿಸಿದರು. ಲಾರಿಯಲ್ಲಿ ಮುಂದಾಗುವ ಅನಾಹುತದಿಂದ ಲಾರಿ ಚಾಲಕ ಪಾರಾಗಿದ್ದಾರೆ. ಆಗುಂಬೆ ಸರ್ಕಲ್ ಬಳಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
