ಆಗುಂಬೆ ಲಯನ್ಸ್ ಸಂಸ್ಥೆಯಿಂದ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
– ಮಾಳೂರು: ಶಾಲೆ ಮುಖ್ಯ ಶಿಕ್ಷಕನ ಮಾದರಿ ಸೇವೆ!
– ಗಣೇಶ ಉತ್ಸವದಲ್ಲಿ ಜನಜಾಗೃತಿ ಫಲಕ ಹಾಕಿದ ಮೋನೋ ಆರ್ಟ್ಸ್ ಮನೋಜ್ ಕುಮಾರ್
NAMMUR EXPRESS NEWS
ಗಾಂಧಿ ಜಯಂತಿ ಆಚರಣೆಯೊಂದಿಗೆ ಲಯನ್ಸ್ ಕ್ಲಬ್ ಆಗುಂಬೆಯಿಂದ ಸ.ಹಿ.ಪ್ರಾ ಶಾಲೆ ಗುಡ್ಡೇಕೇರಿಗೆ ವಾಟರ್ ಫಿಲ್ಟರ್ ಕೊಡುಗೆ ನೀಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿಯಲ್ಲಿ ಗಾಂಧಿ ಜಯಂತಿ ಮತ್ತು ಆಗುಂಬೆ ಲಯನ್ ಕ್ಲಬ್ ವತಿಯಿಂದ ಗುಡ್ಡೇಕೇರಿ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿಗೆ ಅವಶ್ಯಕತೆ ಇದ್ದ ವಾಟರ್ ಫಿಲ್ಟರ್ ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆಗುಂಬೆಯ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಸುಧೀಂದ್ರ ಮಲ್ಯ ಮಾತನಾಡಿ, ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ನಮ್ಮಂತ ಸಂಘ-ಸಂಸ್ಥೆಗಳು ಕೈಜೋಡಿಸಿದರೆ ನಿಜವಾಗಿಯೂ ಶೈಕ್ಷಣಿಕ ಕ್ರಾಂತಿಯನ್ನ ಉಂಟು ಮಾಡುವ ಭರವಸೆಯನ್ನ ಗುಡ್ಡೇಕೇರಿ ಪ್ರಾಥಮಿಕ ಶಾಲೆ ಮಾಡಿ ತೋರಿಸಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹೊಸೂರು ಜಯಚಂದ್ರ ಮಾತನಾಡಿ, ನಿಮ್ಮೆಲ್ಲರ ಸಹಕಾರ ಶಾಲೆಯ ಅಭಿವೃದ್ಧಿಗೆ ಯಾವಾಗಲೂ ಇದೇ ರೀತಿ ಇರಲಿ ಎಂದು ಲಯನ್ಸ್ ಕ್ಲಬ್ ಗೆ ಧನ್ಯವಾದಗಳು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅರುಣ್ ಗುಡ್ದೆಕೇರಿ ಮತ್ತು ಪ್ರಶಾಂತ್ ಕಾಳಿಂಗ ಫೌಂಡೇಶನ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಾಧಾ ಲಕ್ಷ್ಮೀಶ್ ಸದಸ್ಯರಾದ ನಾಗೇಶ್ ,ಹೊಸೂರು ಅಶೋಕ್ ಮತ್ತು ಮುಖ್ಯ ಶಿಕ್ಷಕರಾದ ಅನುಪಮಾ ಮತ್ತು ಸಹ ಶಿಕ್ಷಕರು ಹಾಜರಿದ್ದರು
ಮಾಳೂರು: ಮುಖ್ಯ ಶಿಕ್ಷಕನ ಮಾದರಿ ಸೇವೆ!
ರಾಷ್ಟ್ರೀಯ ಸ್ವಚ್ಚತಾ ಅಭಿಯಾನದ ಅಂಗವಾಗಿ ದೇಶದ ಎಲ್ಲಡೆ ಸ್ವಚ್ಛತಾ ಕಾರ್ಯಕ್ರಮ ಕಂಡುಬಂತು. ಆದರೆ ಸರ್ಕಾರಿ ಪದವಿಪೂರ್ವ ಕಾಲೇಜು ಮಾಳೂರಿನಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ. ಟಿ ಇವರು ತಾವೇ ಕಳೆ ಕೊಚ್ಚುವ ಯಂತ್ರದ ಸಹಾಯದಿಂದ ತಮ್ಮ ಶಾಲಾ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದರು. ಶಾಲೆಗೆ ರಜೆ ಇದ್ದುದರಿಂದ ಮಕ್ಕಳು ಸಹ ಬಂದಿರಲಿಲ್ಲ. ತಾವು ಹಾಗೂ ತಮ್ಮ ಶಾಲೆಯ ಸಹಾಯಕ ಸಿಬ್ಬಂದಿಯೊಂದಿಗೆ ನಿರ್ವಹಿಸಿದ ಕಾರ್ಯ ಸರ್ವಾಜನಿಕರು ಹಾಗೂ ಎಸ್ ಡಿ ಎಂ ಸಿ ಪ್ರಶಂಸಿದ್ದಾರೆ.
ಗಣೇಶ ಉತ್ಸವದಲ್ಲಿ ಜನಜಾಗೃತಿ ಫಲಕ ಹಾಕಿದ ಮೋನೋ ಆರ್ಟ್ಸ್ ಮನೋಜ್ ಕುಮಾರ್
ಗಣೇಶ ಉತ್ಸವದಲ್ಲಿ ವಿಭಿನ್ನ ರೀತಿಯಲ್ಲಿ ಭಾಗಿಯಾಗಿ ಪ್ರತಿ ವರ್ಷ ಗಣೇಶ ಉತ್ಸವವನ್ನು ತೀರ್ಥಹಳ್ಳಿ ಜನರ ಮೆಚ್ಚುಗೆಗೆ ಪಾತ್ರವಾಗುವ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ತೀರ್ಥಹಳ್ಳಿ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಛತ್ರಕೇರಿ, ತೀರ್ಥಹಳ್ಳಿ ಈ ಬಾರಿ ರಸ್ತೆ ಸುರಕ್ಷತೆಯ ನಾಮಫಲಕದೊಂದಿಗೆ ಹಾಗೂ ರಕ್ತದಾನ ಶ್ರೇಷ್ಠದಾನ ಎಂಬ ನಾಮಫಲಕವನ್ನು ಗಣೇಶ ಉತ್ಸವ ನಡೆಸಿಕೊಂಡು ಬರುತ್ತಿರುವ ಜಾಗದಲ್ಲಿ ಇರಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಭಕ್ತಾದಿಗಳು ಮಕ್ಕಳು ಇದನ್ನು ಒಮ್ಮೆ ನೋಡುವುದರಿಂದ ರಸ್ತೆಯ ಸುರಕ್ಷತೆ ಬಗ್ಗೆ ಮತ್ತು ರಕ್ತದಾನದ ಬಗ್ಗೆ ಅರಿವನ್ನು ಪಡೆಯುವರು.
ರೊ. ಮನೋಜ್ ಕುಮಾರ್ ಮಾಜಿ ಅಧ್ಯಕ್ಷರು , ರೋಟರಿ ಕ್ಲಬ್ ತೀರ್ಥಹಳ್ಳಿ ಮತ್ತು ಮಾನೋ ಆರ್ಟ್ಸ್ ಮಾಲೀಕರು ಇವರು ಯುವಕ ಸಂಘದ ಕಾರ್ಯದರ್ಶಿಯಾಗಿರುತ್ತಾರೆ. ಇವರ ಮುಂದಾಳತ್ವದಲ್ಲಿ, ಅಧ್ಯಕ್ಷ ಶ್ರೀ ಶ್ರೀನಿವಾಸ ಪೂಜಾರಿ ಇವರ ನೇತೃತ್ವದಲ್ಲಿ ಗಣೇಶ ಸಮಿತಿಯ ಸದಸ್ಯರು ಈ ಜನಜಾಗೃತಿ ಫಲಕಗಳನ್ನು ಪ್ರದರ್ಶಿಸುವಲ್ಲಿ ಮತ್ತು ಜನರಿಗೆ ತಿಳುವಳಿಕೆಯನ್ನು ನೀಡುವುದರಲ್ಲಿ ಕೈಜೋಡಿಸಿದ್ದಾರೆ. ಇವರ ಈ ಜನೋಪಯೋಗಿ ಕೆಲಸವನ್ನು ತೀರ್ಥಹಳ್ಳಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೊ.ಭರತ್ ಕುಮಾರ್ ಕೋಡ್ಲು, ರೊ ಕೆ ಪಿ ಎಸ್ ಸ್ವಾಮಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ರೋಟರಿ ರಕ್ತ ನಿಧಿ ಕೇಂದ್ರ,ರೊ ಎಸ್ ನಾಗರಾಜ್, ಖಜಾಂಚಿ, ರೋಟರಿ ಐಎಂಎ ಚಾರಿಟೇಬಲ್ ಟ್ರಸ್ಟ್ , ಇವರು ಪ್ರಶಂಸಿದ್ದಾರೆ ಮತ್ತು ಧನ್ಯವಾದಗಳನ್ನು ಅರ್ಪಿಸಿದ್ದಾರೆ