ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ ಮಣ್ಣು-ಮಣ್ಣು!
– ಮಣ್ಣಿನಿಂದ ಅನೇಕರಿಗೆ ತೊಂದರೆ: ವಾಹನ ಅಪಘಾತ ಸಾಧ್ಯತೆ
– ಧೂಳಿನಿಂದ ಜನರ ಅರೋಗ್ಯಕ್ಕೆ ಸಮಸ್ಯೆ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್ ನಿಂದ ಆಗುಂಬೆ ಸ್ಟ್ಯಾಂಡ್ ವರೆಗೆ ಮುಖ್ಯರಸ್ತೆಯಲ್ಲಿ ಮಣ್ಣು ಬಿದ್ದಿದ್ದು ಈ ಧೂಳು ಇದೀಗ ಅನೇಕರಿಗೆ ಸಮಸ್ಯೆ ಉಂಟಾಗಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ತಾಲೂಕು ಪಂಚಾಯತ್ ಕಟ್ಟಡದಿಂದ ಮಣ್ಣು ಹೊಡೆಯಲಾಗಿದ್ದು, ಲಾರಿ, ಟ್ಯಾಕ್ಟರಿಗಳಲ್ಲಿ ಮಣ್ಣನ್ನು ಹೊಡೆಯಲಾಗಿದೆ. ಆದರೆ ರಸ್ತೆಯ ಮೇಲೆ ಮಣ್ಣು ಅರ್ಧ ಅಡಿಯಷ್ಟು ಬಿದ್ದಿರುವುದರಿಂದ ಮಣ್ಣು ವಾಹನ ಹೋದ ತಕ್ಷಣ ಎಲ್ಲೆಡೆ ಹಾರುತ್ತಿದೆ. ಇನ್ನೊಂದೆಡೆ ಈ ಮಣ್ಣು ವಾಹನಗಳು ಬಂದ ಸಂದರ್ಭದಲ್ಲಿ ಹೊರಗಡೆ ಹಾರುವದರಿಂದ ಅನೇಕರಿಗೆ ಈ ಭಾಗದಲ್ಲಿ ಆರೋಗ್ಯ ಸಮಸ್ಯೆಗಳಾಗುತ್ತಿದೆ. ಹೀಗಾಗಿ ತಕ್ಷಣ ಈ ಧೂಳಿನ ಸಮಸ್ಯೆಯನ್ನು ಬಗೆಹರಿಸಬೇಕು. ಜೊತೆಗೆ ಲಾರಿಗಳು ಹಾಗೂ ಟ್ಯಾಕ್ಟರಿಗಳಲ್ಲಿ ಮಣ್ಣು ಹೊಡೆಯುವಾಗ ಎಚ್ಚರ ವಹಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ನೀರು ಹೊಡೆದು ಮಣ್ಣು ಹಾರದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯ ವರ್ತಕರು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಈಗಾಗಲೇ ಅನೇಕ ಅವ್ಯವಸ್ಥೆಗಳಿದ್ದು ಈ ಅವ್ಯವಸ್ಥೆ ಒಂದು ಸೇರ್ಪಡೆಯಾಗಿದೆ. ಹೀಗಾಗಿ ಸ್ಥಳೀಯ ಜನತೆ, ಆಟೋ ಚಾಲಕರು, ಅಂಗಡಿ ಮುಗ್ಗಟ್ಟುಗಳ ಮಾಲೀಕರು, ಹಾಗೂ ಪ್ರಯಾಣಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.