Categories
ತೀರ್ಥಹಳ್ಳಿ

ಮತ್ತೆ ಭರವಸೆಯಾಗೆ ಉಳಿಯುತ್ತಾ ನೆಟ್ವರ್ಕ್ ಸಮಸ್ಯೆ?!

ಮತ್ತೆ ಭರವಸೆಯಾಗೆ ಉಳಿಯುತ್ತಾ ನೆಟ್ವರ್ಕ್ ಸಮಸ್ಯೆ?!
– ಶೀಘ್ರದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಎಂದ ಸಂಸದ ರಾಘವೇಂದ್ರ
– ಹಳ್ಳಿ ಹಳ್ಳಿಯಲ್ಲೂ ಸಮಸ್ಯೆ ಎಂದ ಜನ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಭಾಗದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಂಪೂರ್ಣ ಹದಗೆಟ್ಟಿದೆ. ಮುಖ್ಯವಾಗಿ ನೆಟ್ವರ್ಕ್ ಸಮಸ್ಯೆ ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಹೆಚ್ಚಾಗಿದೆ. ಇನ್ನು ಇರುವ ಟವರ್ ಕೂಡ ನಿರ್ವಹಣೆ ಇಲ್ಲದಾಗಿದ್ದು, ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ತೀರ್ಥಹಳ್ಳಿಯಲ್ಲಿ ನಡೆದ ಬಿ. ಎಸ್. ಎನ್. ಎಲ್ ಇಲಾಖೆ ಕುಂದು ಕೊರತೆ ಸಭೆ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ಬಿಂಬಿತವಾಗಿದೆ. ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಸೇರಿ ಬಹುತೇಕ ಅಧಿಕಾರಿಗಳಿದ್ದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ತೀರ್ಥಹಳ್ಳಿ ತಾಲೂಕಿಗೆ ಹೊಸ ಟವರ್ ಭಾಗ್ಯ!

ಹೊಸ ಟವರ್ ಹಾಕುವ ಯೋಜನೆ ಅಥವಾ ಟವರ್ ಇದ್ದರೂ ನೆಟ್ವರ್ಕ್ ಸಮಸ್ಯೆ ಇರುವಂತಹದ್ದಾಗಿರಬಹುದು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಬುಧವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಮಲೆನಾಡಿನ ಪ್ರಮುಖ ಸಮಸ್ಯೆ ಆಗಿರುವ ನೆಟ್ವರ್ಕ್ ಸಮಸ್ಯೆ ವಿಚಾರವಾಗಿ ಅಹವಾಲು ಸ್ವೀಕರಿಸಲು ಆಗಮಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿನ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ತೀರ್ಥಹಳ್ಳಿಗೆ 34 ಟವರ್ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 264 ಟವರ್ ಸರ್ವೇ ಮಾಡಲು ತೀರ್ಮಾನಿಸಲಾಗಿದೆ ಎಂದರು.

ತೀರ್ಥಹಳ್ಳಿಗೆ ಅನೇಕ ಕಡೆ ಟವರ್

ತೀರ್ಥಹಳ್ಳಿಯಲ್ಲಿ 34 ಟವರ್ ಗಳಲ್ಲಿ 11 ಟವರ್ ವಿವಿಧ ಕಾರಣಗಳಿಂದ ವಜಾ ಆಗಿದೆ. ಉಳಿದ 23 ಟವರ್ ಗಳಲ್ಲಿ 15 ಅರಣ್ಯ ಇಲಾಖೆ ಜಾಗಗಳಲ್ಲಿ ಬರುವುದರಿಂದ ಸರ್ವೇ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗುತ್ತಿದೆ. ಸದ್ಯದಲ್ಲೇ ಎಲ್ಲವೂ ಆಗಲಿದೆ. ಅದರ ಜೊತೆಗೆ ರಿಜೆಕ್ಟ್ ಆಗಿದ್ದನ್ನು ಇಟ್ಟುಕೊಂಡು ಮತ್ತೊಮ್ಮೆ 27 ಟವರ್ ಮಂಜೂರಾತಿ ಮಾಡಿಸಿದ್ದೇನೆ. ಅದರ ಕೆಲಸವು ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಸಂಸದ ರಾಘವೇಂದ್ರ ಮಾಹಿತಿ ನೀಡಿದರು.

ತೀರ್ಥಹಳ್ಳಿ ಪಟ್ಟಣದಲ್ಲೇ ನೆಟ್ವರ್ಕ್ ಇಲ್ಲ!

ಪ್ರತಿ ಹಳ್ಳಿಯಲ್ಲಿ ಜನ ನೆಟ್ವರ್ಕ್ ಸಮಸ್ಯೆ ಹೇಳುತ್ತಿದ್ದಾರೆ. ತೀರ್ಥಹಳ್ಳಿ ಬಿಎಸ್ಎನ್ಎಲ್ ಕಚೇರಿ ಬಗ್ಗೆ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಜನರ ಜತೆ ಏನೂ ಮಾತನಾಡದ ಪರಿಸ್ಥಿತಿಯಲ್ಲಿ ಬಿಎಸ್ಎನ್ಎಲ್ ಪರಿಸ್ಥಿತಿ ಇದೆ. ಹಳ್ಳಿಗಳ ಕಥೆ ಹೋಗಲಿ ಪಟ್ಟಣದ ಒಳಗೆ ನೆಟ್ವರ್ಕ್ ಸಿಗದ ಪರಿಸ್ಥಿತಿ ಇದೆ. ಈ ಎಲ್ಲಾ ಕಾರಣದಿಂದ ಖಾಸಗಿ ನೆಟ್ವರ್ಕ್ ಕಡೆ ಜನರು ಹೋಗುತ್ತಿದ್ದಾರೆ ಎಂದು ಸಭೆಯಲ್ಲಿ ಸಾರ್ವಜನಿಕರೊಬ್ಬರು ಹೇಳಿದರು.

ಮಲೆನಾಡಿನ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರದಿಂದ ಸುಮಾರು 300 ಕೋಟಿ ಹಣವನ್ನು ಸಂಸದ ರಾಘವೇಂದ್ರ ಮಂಜೂರು ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಇಲಾಖೆ ನಿದ್ರೆಯಿಂದ ಎಚ್ಚರವಾಗಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.