Categories
ತೀರ್ಥಹಳ್ಳಿ

ತೀರ್ಥಹಳ್ಳಿ ದಸರಾದಲ್ಲಿ ಹುಲಿ ವೇಷದ ರಂಗು!

ತೀರ್ಥಹಳ್ಳಿ ದಸರಾದಲ್ಲಿ ಹುಲಿ ವೇಷದ ರಂಗು!
– ಪ್ರತಿ ವರ್ಷದಂತೆ ಈ ಬಾರಿಯೂ ಹುಲಿ ವೇಷ ಸ್ಪರ್ಧೆ
– ಅರ್. ಮದನ್ ಅಭಿಮಾನಿಗಳಿಂದ ವಿಜಯದಶಮಿಯಂದು ಸ್ಪರ್ಧೆ
– ಮೊದಲ ಬಹುಮಾನ 20 ಸಾವಿರ, ಪ್ರತಿ ಸ್ಪರ್ಧಿಗೂ 5000 ರೂ ಸಹಾಯಧನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಸಮಿತಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಬಾರಿಯು ಹುಲಿವೇಷದ ರಂಗು ಇರಲಿದ್ದು ತೀರ್ಥಹಳ್ಳಿ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ವಿಜಯದಶಮಿ ದಿನದಂದು ಆರ್.ಮದನ್ ಅಭಿಮಾನಿ ಬಳಗದಿಂದ ಹುಲಿವೇಷ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ದಸರಾ ಸಮಿತಿ ಕೂಡ ಸಾಥ್ ನೀಡಲಿದೆ. ತೀರ್ಥಹಳ್ಳಿ ದಸರಾದ ವಿಶೇಷವಾಗಿ ಹುಲಿವೇಷ ಜಾನಪದ ಕಲೆಗೆ ವಿಶಿಷ್ಟ ಪ್ರೋತ್ಸಾಹ ನೀಡುತ್ತಿರುವ ತೀರ್ಥಹಳ್ಳಿಯ ಪ್ರಮುಖ ನಾಯಕ ಅರ್.ಮದನ್ ಈ ಬಾರಿಯೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅತ್ಯುತ್ತಮ ಹುಲಿವೇಷದಾರಿಗೆ ಮೊದಲ ಬಹುಮಾನ 20,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ 5,000 ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ. ಹುಲಿ ವೇಷ ಸ್ಪರ್ಧೆಯಲ್ಲಿ ಭಾಗಿಯಾಗುವ ಹುಲಿ ವೇಷಧಾರಿಗಳು ಯಾರಾದರೂ ಆಸಕ್ತರಿದ್ದು ಅವರಿಗೆ ಹುಲಿ ಬಣ್ಣದ ಅವಶ್ಯಕತೆ ಇದ್ದರೆ ಅದಕ್ಕೂ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

ಹಲವು ವರ್ಷದಿಂದ ಮದನ್ ಅವರ ಕಲಾ ಸೇವೆ!

ಹುಲಿವೇಷ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜ ಸೇವಕರು, ಕಲಾಸಕ್ತರಾದ ಉದ್ಯಮಿ ಆರ್. ಮದನ್ ಗೌಡ ಅವರು ತೀರ್ಥಹಳ್ಳಿಯಲ್ಲಿ ಅನೇಕ ವರ್ಷದಿಂದ ಹುಲಿವೇಷ ಸ್ಪರ್ಧೆಯನ್ನು ನಡೆಸಿಕೊಂಡು ಹುಲಿ ಕುಣಿತ ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷ ದಸರಾ ಅಕ್ಟೋಬರ್ 24ರ ವಿಜಯದಶಮಿ ದಿನದಂದು ಸಂಜೆ 7 ಗಂಟೆಗೆ ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಹುಲಿವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಹುಲಿ ವೇಷಧಾರಿಗಳಿಗೆ ಬಹುಮಾನ

ಪ್ರಥಮ ಬಹುಮಾನವಾಗಿ 20,000 ರೂ ನಗದು, ಆಕರ್ಷಕ ಟ್ರೋಫಿ,
ದ್ವಿತೀಯ ಬಹುಮಾನ 12,500 ರೂ ನಗದು, ಆಕರ್ಷಕ ಟ್ರೋಫಿ,
ತೃತೀಯ ಬಹುಮಾನ 7,500 ರೂ ನಗದು, ಆಕರ್ಷಕ ಟ್ರೋಫಿ,
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಹುಲಿವೇಷಧಾರಿಗಳಿಗೂ 5000 ರೂ. ನಗದು ಬಹುಮಾನ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಹೇಶ್ ಗೌಡ ಕುರುವಳ್ಳಿ-9448438450
ಅಮರನಾಥ್ ಶೆಟ್ಟಿ-9663569448
ಸುರೇಂದ್ರ-9449884407
ಪ್ರಶೋದ ಶೆಟ್ಟಿ-9880549451
ಸುಮಂತ್(ಚಿಂಚಿ)-
9731094131 ಮೊಬೈಲ್ ನಂಬರ್ ಸಂಪರ್ಕಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.