Categories
ತೀರ್ಥಹಳ್ಳಿ

ವಿಶ್ವನಾಥ್ ಕುಂಟುವಳ್ಳಿ ಅವರಿಗೆ ವಿಶೇಷ ಗೌರವ

ವಿಶ್ವ ನಾಥ್ ಕುಂಟುವಳ್ಳಿ ಅವರಿಗೆ ವಿಶೇಷ ಗೌರವ
– ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿ
– ಸಾವಿರಾರು ಮಂದಿಗೆ ಉದ್ಯೋಗ: ಕೃಷಿಕರ ಪಾಲಿನ ಅನ್ನದಾತ

NAMMUR EXPRESS NEWS
ತೀರ್ಥಹಳ್ಳಿ/ ಬೆಂಗಳೂರು: ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ ಕರ್ನಾಟಕ ಸಂಘಟನೆಯು ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಮಲೆನಾಡಿನ ಹೆಮ್ಮೆಯ ಉದ್ಯಮಿ, ವಿ ಟೆಕ್ ಇಂಜಿನಿಯರಿಂಗ್ಸ್ ಸಂಸ್ಥೆ ಮಾಲೀಕರು, ಕೃಷಿಕರ ಪಾಲಿನ ಅನ್ನದಾತರಾದ ವಿಶ್ವನಾಥ್ ಕುಂಟುವಳ್ಳಿ ಅವರ ಜೀವಮಾನದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಸೇರಿದಂತೆ ಅನೇಕ ಗಣ್ಯರು ಈ ವೇಳೆ ವಿಶ್ವನಾಥ್ ಅವರನ್ನು ಗೌರವಿಸಿದರು. ಅಡಿಕೆ ಸುಲಿಯುವ ಯಂತ್ರದ ಮೂಲ ಸಂಶೋಧನೆ ಸಂಸ್ಥೆಯಾದ ವಿ ಟೆಕ್ ಇಂಜಿಯರಿಂಗ್ ಸಂಸ್ಥೆ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಲ್ಲದೆ ಲಕ್ಷ ಲಕ್ಷ ರೈತರಿಗೆ ವಿಶ್ವನಾಥ್ ಅವರ ಸೇವೆ ಇದೆ. ಇದೀ ರಿೆ ಗೌರವಿಸಿರುವುು ಮಲೆನಾಡಿಗೆ ಸಂದ ಗೌರವವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.