Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿದ್ದ ಶ್ರೀಪಾದ್ ಅವರಿಗೆ ಮಹತ್ವದ ಸ್ಥಾನ

ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿದ್ದ ಶ್ರೀಪಾದ್ ಅವರಿಗೆ ಮಹತ್ವದ ಸ್ಥಾನ
– ರಾಜ್ಯ ಉಪ ಸಭಾಪತಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಕ

NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್ ಆಗಿ ಕರೋನಾ ಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ತಾಲೂಕಿನ ಜನರ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಡಾ. ಶ್ರೀಪಾದ ಎಸ್ ಬಿ ಅವರನ್ನು ರಾಜ್ಯ ಉಪ ಸಭಾಪತಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಮಾಡಿದೆ. ಡಾ. ಶ್ರೀಪಾದ ಎಸ್‌.ಬಿ, ಕೆ.ಎ.ಎಸ್, ಅಪರ ಪ್ರಾದೇಶಿಕ ಆಯುಕ್ತರು, ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ದಿನಾಂಕ:06.07.2023 ರಿಂದ ಅನ್ವಯವಾಗುವಂತೆ ಮಾನ್ಯ ಉಪ ಸಭಾಪತಿಗಳು, ಕರ್ನಾಟಕ ವಿಧಾನ ಸಭೆ ಇವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಮುಂದಿನ ಆದೇಶದವರೆಗೆ ಅಥವಾ ಮಾನ್ಯ ಉಪ ಸಭಾಪತಿಗಳ ಸದಾವಧಿಯವರೆಗೆ ವರ್ಗಾಯಿಸಿ ನೇಮಿಸಲಾಗಿದೆ.
ಅತ್ಯಂತ ಸರಳ ಸ್ವಭಾವದ ಡಾ.ಶ್ರೀಪಾದ್ ಅವರು ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುವಾಗ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕರೋನಾ ಅವಧಿಯಲ್ಲಿ ಜನರ ಹಿತ ಕಾಪಾಡಿದ್ದರು.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.