Categories
ತೀರ್ಥಹಳ್ಳಿ

ಸದನದಲ್ಲಿ ಪಾಕ್ ಪರ ಘೋಷಣೆಗೆ ತೀವ್ರ ಖಂಡನೆ..!

ಸದನದಲ್ಲಿ ಪಾಕ್ ಪರ ಘೋಷಣೆಗೆ ತೀವ್ರ ಖಂಡನೆ..!
– ತೀರ್ಥಹಳ್ಳಿಯಲ್ಲಿ ಬಿಜೆಪಿಯಿಂದ ಭಾರಿ ಪ್ರತಿಭಟನೆ
– ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ

NAMMUR EXPRESS NEWS
ತೀರ್ಥಹಳ್ಳಿ : ದಿನಾಂಕ : 27-02-2024 ರ ಮಂಗಳವಾರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಘೋಷಣೆ ಹಾಕಿದ್ದಾರೆ. ಭಾರತ ದೇಶದಲ್ಲಿ ಇದ್ದು ಪಾಕಿಸ್ತಾನದ ಪರ ಘೋಷಣೆ ಕೂಗುವ ಕಾಂಗ್ರೇಸ್ ಮುಖಂಡರ ಧೋರಣೆಯನ್ನು ವಿರೋಧಿಸಿ ಬುಧವಾರ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಆಡಳಿತ ಸೌಧದಲ್ಲಿಯೇ ಈ ಘಟನೆ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿರುವುದಲ್ಲದೆ ದೇಶದ ಜನಸಾಮಾನ್ಯರಲ್ಲಿ ಆತಂಕವನ್ನು ಮೂಡಿಸಿದೆ. ಆದ್ದರಿಂದ ಈ ಘಟನೆಗೆ ಕಾರಣವಾದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕೆಂದು ತೀರ್ಥಹಳ್ಳಿ ಬಿಜೆಪಿ ಘಟಕವು ತೀರ್ಥಹಳ್ಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಹೆದ್ದೂರು ನವೀನ್ ಅವರು ಮಾತನಾಡಿ ನಮ್ಮೆಲ್ಲರ ಪವಿತ್ರ ದೇವಾಲಯ ವಿಧಾನಸೌಧದ ಒಳಗಡೆ ವಿಜೃಂಭಣೆಯಿಂದ ಸೆಲೆಬ್ರೇಶನ್ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ದೇಶ ವಿರೋಧಿ ಘೋಷಣೆಯನ್ನು ಕೂಗಿದ್ದಾರೆ. ದೇಶವನ್ನು ಒಡೆಯುವ ಹುನ್ನಾರವನ್ನು ನಡೆಸಿಕೊಂಡು ಬರುತ್ತಿದೆ. ಅವರಿಗೆ ಇರುವುದು ಒಂದೇ ಕೆಲಸ ದೇಶವನ್ನು ಒಡೆಯುವುದು, ದೇಶದಲ್ಲಿ ಕೆಟ್ಟವರನ್ನು, ದೇಶ ವಿರೋಧಿಗಳನ್ನು ಬೆಳೆಸುವುದು. ವೋಟನ್ನು ಗಿಟ್ಟಿಸಿಕೊಳ್ಳಲು ಈ ರೀತಿಯ ಕೆಟ್ಟ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.

ರಾಜಕಾರಣವನ್ನು ಹೇಸಿಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ದೇಶದ ಭದ್ರತೆಗೆ ದಕ್ಕೆ ಬರುವಂತಹ ವಿಷಯಗಳಲ್ಲಿ ಮುಂದುವರೆದರೆ ಇದು ವಿಪರೀತಕ್ಕೆ ಹೋಗಿ ಉಗ್ರವಾದ ಹೋರಾಟ ಬಿಜೆಪಿ ಮಾಡುತ್ತೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಕುಕ್ಕೆ ಪ್ರಶಾಂತ್, ಸೊಪ್ಪುಗುಡ್ಡೆ ರಾಘವೇಂದ್ರ, ಅಶೋಕ್ ಮೂರ್ತಿ, ರಕ್ಷಿತ್ ಮೇಗರವಳ್ಳಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.