ಆಗುಂಬೆ ಆಸ್ಪತ್ರೆಯಲ್ಲಿ ರಕ್ತದಾನದ ದಾಖಲೆ!
– 108 ಯುನಿಟ್ ರಕ್ತದಾನ: ಸರ್ವರ ಮಾನವೀಯ ಸೇವೆ
– ಲಯನ್ಸ್ ಕ್ಲಬ್, ಪೊಲೀಸ್ ಇಲಾಖೆ ಸೇರಿ ಅನೇಕ ಸಂಸ್ಥೆಗಳ ಸಹಯೋಗ
NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರ ಅತ್ಯಂತ ಯಶಸ್ವಿಯಾಗಿದೆ. ಸುಮಾರು 108 ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ. ಆಗುಂಬೆ ಪೊಲೀಸ್ ಠಾಣೆ, ಲಯನ್ಸ್ ಕ್ಲಬ್ ಆಗುಂಬೆ, ನಕ್ಸಲ್ ನಿಗ್ರಹ ಪಡೆ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ, ತಾಲ್ಲೂಕು ಪಂಚಾಯಿತಿ ತೀರ್ಥಹಳ್ಳಿ, ಗ್ರಾಮ ಪಂಚಾಯಿತಿ ಆಗುಂಬೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ರಕ್ತನಿಧಿ ಕೇಂದ್ರ ಮೆಗ್ಗಾನ್, ಲಯನ್ಸ್ ಕ್ಲಬ್ ಆಗುಂಬೆ ಸಂಯುಕ್ತ ಆಶ್ರಯದಲ್ಲಿ ಆಗುಂಬೆ ಆಸ್ಪತ್ರೆಯಲ್ಲಿ ಶುಕ್ರವಾರ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್ ವಹಿಸಿದ್ದರು.
ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ ಹಾಗೂ ಆಗುಂಬೆ ಪೊಲೀಸ್ ಉಪನಿರೀಕ್ಷಕ ರಂಗನಾಥ ಅಂತರಗಟ್ಟಿ, ಸಿಬ್ಬಂದಿಗಳಾದ ಅನಿಲ್ ಕುಮಾರ್, ಸುನಿಲ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಅರುಣ್ ಗುಡ್ಡೆಕೇರಿ, ಪ್ರಮುಖರಾದ ಮಯೂರ್ ಹೆಗಡೆ, ಸುಧೀರ ಮಲ್ಯ, ಹಸಿರುಮನೆ ನಂದನ್, ಮಹಾಬಲೇಶ್ ಹಸಿರುಮನೆ, ಪ್ರಶಾಂತ್ ಸೇರಿದಂತೆ ಇತರರು ಇದ್ದರು.
ವೈದ್ಯಕೀಯ ಸಿಬ್ಬಂದಿ ಸಹಯೋಗ: ಡಾ.ಜಸಿನಾ, ಡಾ. ದೀಪ, ಡಾ.ನವೀನ್, ಡಾ.ಅನಿಕೇತನ ಸೇರಿದಂತೆ ಆಗುಂಬೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ಪೊಲೀಸರು, ಗ್ರಾಮಸ್ಥರ ಸಾಥ್!
ಮಾನವೀಯ ಸೇವೆಯ ರಕ್ತದಾನ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಆಗುಂಬೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಅನಿಲ್, ಸುನಿಲ್, ಉಲ್ಲಾಸ್ ಸೇರಿದಂತೆ ಅನೇಕರು ರಕ್ತದಾನ ಮಾಡಿದ್ದಾರೆ. ಎಲ್ಲ ರಕ್ತದಾನಿಗಳಿಗೆ ಸಾರ್ವಜನಿಕ ಊಟದ ವ್ಯವಸ್ಥೆ ಪಾನೀಯ ಮತ್ತು ಹಣ್ಣು ವ್ಯವಸ್ಥೆಯನ್ನು ಮಾಡಿದ್ದರು. ಆಗುಂಬೆ ಹೋಬಳಿಯ ಬಹುತೇಕ ಗ್ರಾಮದ ಜನ ರಕ್ತದಾನ ಮಾಡಿದರು.
ಲಯನ್ಸ್ ಕ್ಲಬ್ ಧನ್ಯವಾದ
ಆಗುಂಬೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀಣಾ ಗಿರೀಶ್, ಕಾರ್ಯದರ್ಶಿಯಾದ ಅರುಣ್ ಗುಡ್ಡೇಕೇರಿ, ಸಂಸ್ಥಾಪಕ ಅಧ್ಯಕ್ಷರಾದ ಸುಧೀರ್ ಮಲ್ಯ ಸೇರಿದಂತೆ ಎಲ್ಲಾ ಸದಸ್ಯರು ರಕ್ತದಾನ ಮಾಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.