ತೀರ್ಥಹಳ್ಳಿಯಲ್ಲಿ ಅನುಮಾನಾಸ್ಪದ ಬ್ಯಾಗ್!
– ಪೊಲೀಸರಿಂದ ತನಿಖೆ: ರಾಮೇಶ್ವರ ಕೆಫೆ ಕೇಸ್ ಬಳಿಕ ಅಲರ್ಟ್
– ತೀರ್ಥಹಳ್ಳಿ ಕಾಡಲ್ಲಿ ಹುಲಿ ಪತ್ತೆ: ಜನರಲ್ಲಿ ಜೀವ ಭಯ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸರಿಗೆ ಒಂದು ಬ್ಯಾಗ್ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. 09.03.2024ರಂದು ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಠಾಣಾ ವ್ಯಾಪ್ತಿಯಲ್ಲಿನ ಪ್ರದೇಶವೊಂದರಿಂದ 112 ERSSಗೆ ಕರೆಯೊಂದು ಬಂದಿದೆ. ಇಲ್ಲೊಂದು ಬ್ಯಾಗ್ ಬಿದ್ದಿದೆ. ಸಂಶಯ ಬರುತ್ತಿದೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್ ನೋಡಿ ನೋಡಿ ಪರಿಶೀಲಿಸಿದ್ದಾರೆ. ಅದರಲ್ಲಿ ಅನುಮಾನಾಸ್ಪವಾದ ಯಾವುದೇ ವಸ್ತುಗಳು ಇರಲಿಲ್ಲ. ಹಾಗಾಗಿ ಪ್ರಕರಣದ ಮಾಹಿತಿ ಪೊಲೀಸ್ ಸ್ಟೇಷನ್ಗೆ ವರ್ಗಾಯಿಸಿ ವಿಲೇವಾರಿ ಮಾಡಿದ್ದಾರೆ. ಬೆಂಗಳೂರು ರಾಮೇಶ್ವರ ಕೆಫೆ ಘಟನೆ ಬಳಿಕ ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗಿದೆ.
ತೀರ್ಥಹಳ್ಳಿಯ ಕಾಡಲ್ಲಿ ಹುಲಿ ಪ್ರತ್ಯಕ್ಷ!
ಮಲೆನಾಡಲ್ಲಿ ಕಾಡಲ್ಲಿ ಹುಲಿ ಮಾಮೂಲಿ. ತೀರ್ಥಹಳ್ಳಿ ಪಟ್ಟಣದ ಸಮೀಪದ ಮೇಲಿನ ಕುರುವಳ್ಳಿ ಸಮೀಪ ಹುಲಿ ಪತ್ತೆಯಾಗಿದೆ. ಕುರುವಳ್ಳಿ ಸಮೀಪದ ವಿಠಲ ನಗರದ ಲೇಔಟ್ ಹಿಂಭಾಗದ ಕಾಡಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಸ್ಥಳೀಯರು ಭಾನುವಾರ ಸಂಜೆ ಕಟ್ಟಿಗೆ ಕಡಿಯಲು ಹೋದಾಗ ಹುಲಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಳೆದ ನಾಲೈದು ದಿನದ ಹಿಂದೆ ರಾತ್ರಿಯ ವೇಳೆ ಲೇಔಟ್ ಸಮೀಪದಲ್ಲಿ ಹುಲಿ ಕೂಗಿದ ಘರ್ಜನೆ ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.