Categories
ತೀರ್ಥಹಳ್ಳಿ

ಬಸ್ ನಿಲ್ದಾಣದಿಂದ ಕೆಳಗೆ ಹಾರಿತು ಬಸ್!

ಬಸ್ ನಿಲ್ದಾಣದಿಂದ ಕೆಳಗೆ ಹಾರಿತು ಬಸ್!
– ತೀರ್ಥಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದ ಬಸ್ ಚಾಲಕರಹಿತ ರೋಡಿಗೆ!
– ಬಸ್ ಡ್ರೈವರ್ ಹ್ಯಾಂಡ್ ಬ್ರೇಕ್ ಹಾಕಿರದ ಕಾರಣ ಗಾಡಿ ಇದ್ದಕ್ಕಿದಂತೆ ಸಂಚಾರ
– ತೀರ್ಥಹಳ್ಳಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಒಂದು ಇದ್ದಕಿದ್ದ ಹಾಗೆ ಚಲಾಯಿಸಿ ಸ್ವಲ್ಪ ಸಮಯದವರೆಗೆ ಆತಂಕ ಸೃಷ್ಟಿ ಮಾಡಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಿಂದ ಆಟೋ ಸ್ಟಾಂಡ್ ಕಡೆಗೆ ಹಾರಿ ಅಲ್ಲಿಂದ ಸಿರಿಬೈಲ್ ಲಾಡ್ಜ್ ಕಡೆಗೆ ಬಸ್ ತೆರಳಿದೆ. ಈ ವೇಳೆ ಯಾವುದೇ ದುರಂತ ನಡೆದಿಲ್ಲ. ಮಧ್ಯಾಹ್ನ ವೇಳೆ ಊಟಕ್ಕೆ ಹೋಗುವಾಗ ಬಸ್ ಡ್ರೈವರ್ ಹ್ಯಾಂಡ್ ಬ್ರೇಕ್ ಹಾಕಿರದ ಕಾರಣ ಬಸ್ ಇದ್ದಕ್ಕಿದ್ದ ಹಾಗೆ ಚಲಾಯಿಸಿದ್ದು ಮೇಲ್ಬಾಗದಲ್ಲಿ ನಿಲ್ಲಿಸಿದ್ದ ಬಸ್ ಕೆಳ ಭಾಗದವರೆಗೂ ಬಂದಿದೆ. ಅದರಲ್ಲೂ ಮೆಟ್ಟಿಲುಗಳಿದ್ದರೂ ಅದನ್ನು ಇಳಿದು ಬಂದಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆಳ ಭಾಗದಲ್ಲಿ ಆಟೋ ನಿಲ್ದಾಣವಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿ ಅವಘಡ ಸಂಭವಿಸಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.