Categories
ತೀರ್ಥಹಳ್ಳಿ

ದೇಶಕ್ಕೆ ಮತ್ತೆ ಬೇಕು ಮೋದಿ!

ದೇಶಕ್ಕೆ ಮತ್ತೆ ಬೇಕು ಮೋದಿ!
– ದೇಶಕ್ಕೆ ಸುಭದ್ರವಾದ ನಾಯಕತ್ವದ ಅವಶ್ಯಕತೆ ಇದೆ
– ರಾಘವೇಂದ್ರ ಪರ ಮತಯಾಚನೆ ಮಾಡಿದ ಕುಮಾರಸ್ವಾಮಿ
– ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಸುಳ್ಳು, ಅಪಪ್ರಚಾರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಚುನಾವಣೆ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಚುನಾವಣಾ ಪ್ರಚಾರ ಮಾಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸಿ ಚುನಾವಣಾ ಪ್ರಚಾರ ಮಾಡಿದರು. ಕೋಣಂದೂರಿನ ಗ್ರಾಮ ಪಂಚಾಯಿತಿಯ ಪಕ್ಕದ ಮೈದಾನದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ರಸ್ತೆ ಇಕ್ಕೆಡೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕುಮಾರಸ್ವಾಮಿಯವರನ್ನು ನೋಡಲು ಮತ್ತು ಭಾಷಣ ಕೇಳಲು ಕಾದು ಕೂತಿದ್ದರು.

ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 14 ಕ್ಷೇತ್ರಗಳ ಲೋಕಸಭೆಗೆ ನಡೆಯುತ್ತಿರುವಂತಹ ಮತದಾನದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಘವೇಂದ್ರ ಅವರು ಇದ್ದಾರೆ. ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ರಾಘವೇಂದ್ರ ರವರ ಪರ ಪ್ರಚಾರ ಮಾಡಲು ಬಂದಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಯಶಸ್ವಿಯಾಗಿ ತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಸುಳ್ಳು, ಅಪಪ್ರಚಾರ ಕಾಣುತ್ತಿದ್ದೇವೆ. ದೇಶದ ಯಾವುದೇ ಭಾಗಕ್ಕೆ ಹೋದರೂ ದೇಶಕ್ಕೆ ಸುಭದ್ರವಾದ ನಾಯಕತ್ವದ ಅವಶ್ಯಕತೆ ಇದೇ ಎನ್ನುವುದು ತಿಳಿಯುತ್ತದೆ. ದೇಶವನ್ನು ಆರ್ಥಿಕವಾಗಿ ಹಾಗೂ ವಿಶ್ವದ ಬೇರೆ ದೇಶಗಳಿಗೆ ಸರಿ ಸಮಾನವಾಗಿ ನಿಲ್ಲುವುದಕ್ಕೆ ಇಂದು ಕೇಂದ್ರದಲ್ಲಿ ಇರುವಂತಹ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಕಾಣುತ್ತಿದ್ದೇವೆ ಎಂದರು.

ಎಂಟು ವರ್ಷದ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ 3 ಸಾವಿರದ 200 ಕೋಟಿ ಕೊಟ್ಟಿದೆ. ಈ ವರುಷ ಬೆಳೆ ನಾಶ ಇದೆ ಎಂದು ಅರ್ಜಿಗಳನ್ನು ಸಲ್ಲಿಸಿದ್ದು, ಈ ಒಂದು ವರ್ಷಕ್ಕೆ ನರೇಂದ್ರ ಮೋದಿಯವರ ಸರ್ಕಾರ 3 ಸಾವಿರದ 454 ಕೋಟಿ ಕೊಟ್ಟಿದೆ ಎಂದರು. ಇಂದು ನರೇಂದ್ರ ಮೋದಿ ಅವರ ಆಡಳಿತ ದೇಶದಲ್ಲಿ ಅನಿವಾರ್ಯ ಇದೆ ಎಂದರು.

ಭಾರತ ಈಗ ಪ್ರಪಂಚದ ದೊಡ್ಡ ಶಕ್ತಿ

ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರ್ಥಿಕವಾಗಿ, ರಾಜಕೀಯ ವಿಚಾರಗಳಲ್ಲಿ ಹಾಗೂ ವೈಜ್ಞಾನಿಕ ಸಾಮರ್ಥ್ಯದಲ್ಲಿ ಯಾವ ರೀತಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಕಾಂಗ್ರೆಸ್ ಜನರ ಮೇಲೆ ಯಾವ ರೀತಿ ದಬ್ಬಾಳಿಕೆ ಮಾಡಿದ್ದರು, ಯಾವ ರೀತಿ ಜೈಲಿಗೆ ಅಟ್ಟಿದ್ದರು, ಈ ಅಧ್ಯಾಯವನ್ನು ನೀವು ನೋಡಿದ್ದೀರಿ. ಇವತ್ತಿನ ಮೋದಿಜಿಯವರ ನಿಜವಾದ ಪ್ರಜಾತಂತ್ರ ವನ್ನು ನೋಡುತಿದ್ದಿರಿ ಎಂದರು.

ವಿಶ್ವದಲ್ಲೇ ಟಾಪ್ ನಮ್ಮ ಭಾರತ: ಆರಗ

ಆರಗ ಜ್ಞಾನೇಂದ್ರ ಮಾತನಾಡಿ,ಕುಮಾರಣ್ಣ ಅವರನ್ನು ನೋಡಬೇಕು, ರಾಘವೇಂದ್ರ ಅವರಿಗೆ ಆಶೀರ್ವದಿಸಬೇಕೆಂದು ಬಹಳ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದೀರಿ ಎಂದು ಜನರಿಗೆ ಅಭಿನಂದನೆ ಸಲ್ಲಿಸಿದರು. 140 ಕೋಟಿ ಜನಸಂಖ್ಯೆ ಇರುವಂತ ಈ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವಂತಹ ಈ ದೇಶ ಕಳೆದ ಹತ್ತು ವರ್ಷ ಏನಾಗಿತ್ತು? ಈ ರಾಷ್ಟ್ರ ಇಂದು ಹೇಗೆ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹತ್ತು ವರ್ಷದಲ್ಲಿ ಪ್ರಪಂಚದ 5ನೇ ಅತೀ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೋವಿಡ್ ದುರಂತದ ಸ್ಥಿತಿಯಲ್ಲೂ ಕೂಡ ದೇಶದ ಆರ್ಥಿಕತೆ ಕೆಳಗೆ ಬೀಳಲು ಬಿಡಲಿಲ್ಲ ಎಂದರು.

ಹರತಾಳು ಹಾಲಪ್ಪ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿ ಅಭಿವೃದ್ಧಿ ಪರ ರಾಜಕಾರಣಿ ಬಿ ವೈ ರಾಘವೇಂದ್ರ ಅವರಿಗೆ ಮತ ಕೊಡಬೇಕು ಎಂದು ವಿನಂತಿ ಮಾಡಿದರು. ತೀರ್ಥಹಳ್ಳಿ ಕ್ಷೇತ್ರದ ಜನರು ಬುದ್ಧಿವಂತರು ಕವಿಗಳು ಬೆಳೆದಂತಹ ನಾಡಿದು ಎಂದರು. ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಮಂಡಲದ ಅಧ್ಯಕ್ಷ ನವೀನ್ ಹೆದ್ದೂರ್, ಹರತಾಳು ಹಾಲಪ್ಪ, ರಘುಪತಿ ಭಟ್, ಶಾಸಕ ಅರಗ ಜ್ಞಾನೇಂದ್ರ, ಪುಣ್ಯಪಾಲ್, ಮತ್ತು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್,ಜೆಡಿಎಸ್ ತಾಲೂಕು ಮಹಿಳಾ ಅಧ್ಯಕ್ಷ ಗೀತಾ, ಪ್ರಸನ್ನ ಕುಮಾರ್, ಕುಕ್ಕೆ ಪ್ರಶಾಂತ್, ಸಾಲೆಕೊಪ್ಪ ರಾಮಚಂದ್ರ ಬೇಗುವಳ್ಳಿ ಸತೀಶ್, ಬಾಳೆಬೈಲು ರಾಘವೇಂದ್ರ, ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಮತ್ತು ಮುಖಂಡರುಗಳು ಮತ್ತು ಅಭಿಮಾನಿಗಳು, ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.