Categories
ತೀರ್ಥಹಳ್ಳಿ

ಮೊಬೈಲ್ ಕೊಡುವುದಾಗಿ ಮರದ ತುಂಡು ಕೊರಿಯರ್ ಅಲ್ಲಿ ಕಳುಹಿಸಿದರು!

ಮೊಬೈಲ್ ಕೊಡುವುದಾಗಿ ಮರದ ತುಂಡು ಕೊರಿಯರ್ ಅಲ್ಲಿ ಕಳುಹಿಸಿದರು!
– ತೀರ್ಥಹಳ್ಳಿಗೂ ಕಾಲಿಟ್ಟ ಆನ್ ಲೈನ್ ಶಾಪಿಂಗ್ ಮೋಸ!
– 10 ಸಾವಿರದ ಮೊಬೈಲ್ 1500 ರೂ. ಗೆ ಕೊಡುವುದಾಗಿ ವಂಚನೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ಹಲವೆಡೆ ಇದ್ದ ಶಾಪಿಂಗ್ ವಂಚನೆ ಇದೀಗ ತೀರ್ಥಹಳ್ಳಿಗೂ ಕಾಲಿಟ್ಟಿದೆ. ಆನ್ ಲೈನ್ ಶಾಪಿಂಗ್ ಮೋಸ ಎಲ್ಲಾ ಕಡೆ ಹೆಚ್ಚಿದ್ದು, 10 ಸಾವಿರದ ಮೊಬೈಲ್ 1500 ರೂ. ಗೆ ಕೊಡುವುದಾಗಿ ವಂಚನೆ ಮಾಡಲಾಗಿದೆ.
10 ಸಾವಿರ ಬೆಲೆಯ ಸ್ಟಾರ್ಟ್ ಮೊಬೈಲ್ ಫೋನ್ ಅನ್ನು ನಿಮಗೆ ಕೇವಲ 1500 ರೂಪಾಯಿಗೆ ಕೊಡುತ್ತೇವೆ. ನಿಮ್ಮ ಮೊಬೈಲ್ ನಂಬರ್ ಲಕ್ಷ್ಮೀ ಕೂಪನ್‌ ನಲ್ಲಿ ಆಯ್ಕೆ ಆಗಿರುವುದಕ್ಕೆ ಈ ಕೊಡುಗೆ, ನೀವು ಮೊದಲೇ ಹಣ ಪಾವತಿ ಮಾಡಬೇಕಾಗಿಲ್ಲ, ಪ್ರಾಡಕ್ಟ್ ಅನ್ನು ಸ್ವೀಕರಿಸಿದ ನಂತರ ಹಣ ಕೊಟ್ಟರೆ ಆಯಿತು ಎಂದು ಫೋನ್‌ನಲ್ಲಿ ನಂಬಿಸಲಾಗುತ್ತದೆ. ನೀವೇನಾದರೂ ಸರಿ ಕಳುಹಿಸಿ ಎಂದರೆ, 3-4 ದಿನದಲ್ಲಿ ಅಂಚೆ ಮೂಲಕ ನಿಮ್ಮ ವಿಳಾಸಕ್ಕೆ ಪಾರ್ಸಲ್ ಬರುತ್ತದೆ. ಪಾರ್ಸಲ್‌ ಸ್ವೀಕರಿಸುವ ಮುನ್ನ ಹಣ ಪಾವತಿ ಮಾಡಬೇಕು. ಹಣ ಕೊಟ್ಟು ಬಾಕ್ಸ್‌ ಓಪನ್ ಮಾಡಿದರೆ ಅದರಲ್ಲಿ ಸ್ಮಾರ್ಟ್ ಮೊಬೈಲ್ ಬದಲಿಗೆ ಮೊಬೈನ್‌ ಕವರ್, ಮೊಬೈಲ್ ಗಾರ್ಡ್ ಹೀಗೆ 100-150ರೂ ಬೆಲೆ ಬಾಳುವ ವಸ್ತುಗಳಿರುತ್ತವೆ. ಕೆಲವೊಮ್ಮೆ ಮರದ ತುಂಡು, ಹೊಟ್ಟು ಇತ್ಯಾದಿ ತುಂಬಿ ಕಳುಹಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಹಲವರು ಈ ರೀತಿಯ ಆನ್‌ಲೈನ್ ಶಾಂಪಿಂಗ್ ವಂಚನೆಗೀಡಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.