Categories
ತೀರ್ಥಹಳ್ಳಿ

ನೋಡ ನೋಡುತ್ತಿದ್ದಂತೆ ಮನೆಗೆ ನುಗ್ಗಿದ ಲಾರಿ!

ನೋಡ ನೋಡುತ್ತಿದ್ದಂತೆ ಮನೆಗೆ ನುಗ್ಗಿದ ಲಾರಿ!
– ತೀರ್ಥಹಳ್ಳಿಯ ದೊಡ್ಡಮನೆಕೇರಿಯಲ್ಲಿ ಘಟನೆ
– ಮನೆ ಹಾಗೂ ಇನ್ನೋವಾ ಕಾರು ಜಖಂ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ದೊಡ್ಮನೆ ಕೇರಿಯಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ವಿ.ಆರ್.ಎಲ್ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೋಹನ್ ಎಂಬುವರ ಮನೆಯ ಕಾಂಪೌಂಡಿಗೆ ಗುದ್ದಿ ಮನೆಯ ಮುಂಭಾಗದ ಮಾಡು ನುಜ್ಜು ಗುಜ್ಜಾಗಿದೆ. ಮನೆಯಲ್ಲಿ ಇದ್ದವರಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮುಂಭಾಗ ನಿಲ್ಲಿಸಿದ್ದ ಇನೋವಾ ಕಾರಿನ ಹಿಂಭಾಗದ ಗ್ಲಾಸ್ ಒಡೆದು ಹೋಗಿ ಕಾರು ಜಖಂಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿ ಮತ್ತು ಕಾರನ್ನು ತೆರವುಗೊಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಘಟನೆ ನಡೆದಿದ್ದು ಜನನಿಬಿಡ ಪ್ರದೇಶದಲ್ಲೇ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.