ಹಿರಿಯ ನಾಯಕ ಶ್ರೀನಿವಾಸ್ ಗೌಡರ ನೆನಪು!
– ಎಲ್ಲಾ ಸಮುದಾಯದಿಂದ ಶ್ರದ್ಧಾಂಜಲಿ ಕಾರ್ಯಕ್ರಮ
– ತೀರ್ಥಹಳ್ಳಿ ಒಕ್ಕಲಿಗರ ಸಂಘದಿಂದ ನುಡಿ ನಮನ
NAMMUR EXPRESS NEWS
ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಎಲ್ಲಾ ಸಮುದಾಯದ ಪ್ರೀತಿಪಾತ್ರರಾದ ದಿವಂಗತ ಶ್ರೀನಿವಾಸ್ ಗೌಡರಿಗೆ ನುಡಿ ನಮನ ಸಲ್ಲಿಸಲಾಯಿತು. ತೀರ್ಥಹಳ್ಳಿಯ ಕೆಟಿಕೆಯಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಎಲ್ಲಾ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಎಲ್ಲಾ ಗಣ್ಯರು ಸ್ಮರಿಸಿದರು. ಶ್ರೀನಿವಾಸ್ ಗೌಡ ಅವರು ಸಮಾಜ ಮುಖಿ ವ್ಯಕ್ತಿತ್ವದ ಮೇರು ವ್ಯಕ್ತಿತ್ವ. ತಮ್ಮ ರಾಜಕೀಯ, ಸಂಘಟನೆ, ಸಹಕಾರಿ, ಕೃಷಿ ಸೇರಿ ಎಲ್ಲಾ ಕ್ಷೇತ್ರದಲ್ಲಿ ಅವರ ಸೇವೆ ಅಪಾರ. ಆತ್ಮೀಯ ಒಡನಾಟ, ಮೃದು ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾದುದು.
ಸಮಾಜದ ಅತ್ಯಂತ ಅನುಭವಿಯನ್ನು ಕಳೆದುಕೊಂಡಿದ್ದೇವೆ ಎಂದು ಎಲ್ಲಾ ಗಣ್ಯರು, ಅವರ ಒಡನಾಡಿಗಳು ಅವರ ಸೇವೆ ಸ್ಮರಿಸಿದರು. ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಶ್ರೀನಿವಾಸ ಗೌಡರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಸೇವೆ ಅಪಾರ. ಸಹ್ಯಾದ್ರಿ ಶಾಲೆಯ ಒಂದು ಭಾಗಕ್ಕೆ ಇಡುವ ಮೂಲಕ ಗೌರವಿಸಬೇಕೆಂದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಶ್ರೀನಿವಾಸಗೌಡರ ಸ್ನೇಹಮಯ ವ್ಯಕ್ತಿತ್ವ ಇಡೀ ಸಮಾಜದ ಅಭಿವೃದ್ಧಿಗೆ ಮೂಡುಪಾಗಿಟ್ಟಿದ್ದರು. ಶ್ರೀನಿವಾಸ ಗೌಡರ ಬಗೆಗೆ ಪುಸ್ತಕ ತರುವ ಮೂಲಕ ಅವರ ಸಾಮಾಜಿಕ ಸಾಧನೆ ದಾಖಲಿಸಬೇಕೆಂದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್ ಮಾತನಾಡಿ, ಶ್ರೀನಿವಾಸ ಗೌಡರ ಸಾವಿಗೆ ಇಡೀ ತಾಲೂಕು ಮರುಗಿದೆ. ಅವರ ಹೆಸರು ಶಾಶ್ವತವಾಗಿರುವಂತೆ ಮಾಡಬೇಕು. ಪ್ರತಿ ದಿನ ಅವರ ಹೆಸರು ನೆನಪಿಸುವಂತೆ ಮಾಡಬೇಕು ಎಂದರು.
ಶ್ರೀನಿವಾಸ ಗೌಡರ ವ್ಯಕ್ತಿತ್ವಕ್ಕೆ ಗಣ್ಯರ ನುಡಿ ನಮನ
ಹಿರಿಯ ಸಹಕಾರಿಗಳಾದ ವಿಜಯದೇವ್, ನಾಗರಾಜ್ ಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಾಳೆಹಳ್ಳಿ ಪ್ರಭಾಕರ್, ಪ್ರಗತಿಪರ ಚಿಂತಕ ಕಡಿದಾಳ್ ದಯಾನಂದ್, ಶಿವಮೊಗ್ಗ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿಮೂರ್ತಿ, ಸಂಸ್ಥೆಯ ಮುಖ್ಯ ಶಿಕ್ಷಕಿ ಅಗ್ನಿಸ್ ಮೆಂಡಿಸ್, ಬ್ರಾಹ್ಮಣ ಸಮುದಾಯದ ಪ್ರಮುಖರಾದ ಜಿ.ಎಸ್.ನಾರಾಯಣ ರಾವ್, ಪ್ರಮುಖರಾದ ಕೊಡಸಗೊಳ್ಳಿ ಶಾಮಣ್ಣ, ಡಾ.ಸುಂದರೇಶ್, ಬಂಟ ಸಮುದಾಯದ ಪ್ರಮುಖರಾದ ಡಿ. ಎಸ್. ವಿಶ್ವನಾಥ್ ಶೆಟ್ಟಿ, ಮಮತಾ ಸಾಯಿನಾಥ್, ಬಸವರಾಜ್ ಹೊದಲ, ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್ ಎಲ್, ಕೊಡಚಾದ್ರಿ ಸೊಸೈಟಿ ಅಧ್ಯಕ್ಷರಾದ ಚೇತನಾ ಶ್ರೀಕಾಂತ್, ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಪ್ರಮುಖರಾದ ಪದ್ಮನಾಭ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್, ಮಾಜಿ ಶಾಸಕ ಕಡಿದಾಳ್ ದಿವಾಕರ್, ಸೇರಿದಂತೆ ಇದ್ದರು. ಎಲ್ಲಾ ಸಮುದಾಯದ ಪ್ರಮುಖರು ಹಾಜರಿದ್ದರು. ಸುಮಾರು 250ಕ್ಕೂ ಹೆಚ್ಚು ಮಂದಿ ಮೃತರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾದರು.
